AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆರಿಗೆ ನಂತರ ಮುಟ್ಟು ಯಾವಾಗ ಬರಬೇಕು ಎಂಬುದು ತಿಳಿದಿದೆಯೇ?

ಹೆರಿಗೆ ನಂತರ ಕೆಲವರಲ್ಲಿ ಮೂರು ತಿಂಗಳಿಗೆ ಮುಟ್ಟು ಆರಂಭವಾಗಬಹುದು ಇನ್ನು ಕೆಲವರಲ್ಲಿ 7 -8 ತಿಂಗಳ ನಂತರ ಈ ಪ್ರಕ್ರಿಯೆ ಶುರುವಾಗಬಹುದು ಹಾಗಾಗಿ ಇದು ಅವರವರ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇದರ ಹೊರತಾಗಿ ಕೆಲವು ತಾಯಂದಿರಲ್ಲಿ ಮುಟ್ಟು ಅಥವಾ ಋತುಚಕ್ರ ವಿಳಂಬವಾಗುತ್ತದೆ. ಇದಕ್ಕೆ ಕಾರಣವೇನು? ನಿಜವಾಗಿಯೂ ಹೆರಿಗೆ ನಂತರ ಮುಟ್ಟು ಯಾವಾಗ ಬರಬೇಕು? ಇಲ್ಲಿದೆ ತಜ್ಞರು ನೀಡಿದ ಮಾಹಿತಿ.

ಹೆರಿಗೆ ನಂತರ ಮುಟ್ಟು ಯಾವಾಗ ಬರಬೇಕು ಎಂಬುದು ತಿಳಿದಿದೆಯೇ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jan 17, 2025 | 12:08 PM

Share

ಸಾಮಾನ್ಯವಾಗಿ ಹೆಣ್ಣಿಗೆ ಹೆರಿಗೆಯ ನಂತರದ ಜೀವನ ಪುನರ್ಜನ್ಮವಿದ್ದಂತೆ. ಹೆಣ್ಣು ಸುತ್ತು ಹುಟ್ಟುತ್ತಾಳೆ ಎಂಬ ಮಾತಿನಂತೆ ತಾಯಿ ಮತ್ತು ಮಗುವಿಗೆ ಹೊಸ ಬದುಕಾಗಿರುತ್ತದೆ. ಮಗು ಬೆಳೆದಂತೆ ಋತುಚಕ್ರವು ಆರಂಭವಾಗುತ್ತದೆ ಆದರೆ ಇದು ಎಲ್ಲರಲ್ಲಿಯೂ ಒಂದೇ ರೀತಿಯಾಗಿ ಇರುವುದಿಲ್ಲ ಕೆಲವರಿಗೆ ಮಗು ಜನಿಸಿ ಮೂರು ತಿಂಗಳುಗಳಿಗೆ ಮುಟ್ಟು ಆರಂಭವಾಗಬಹುದು ಇನ್ನು ಕೆಲವರಲ್ಲಿ 7 -8 ತಿಂಗಳ ನಂತರ ಈ ಪ್ರಕ್ರಿಯೆ ಶುರುವಾಗಬಹುದು ಹಾಗಾಗಿ ಇದು ಅವರವರ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇದರ ಹೊರತಾಗಿ ಕೆಲವು ತಾಯಂದಿರಲ್ಲಿ ಮುಟ್ಟು ಅಥವಾ ಋತುಚಕ್ರ ವಿಳಂಬವಾಗುತ್ತದೆ. ಇದಕ್ಕೆ ಕಾರಣವೇನು? ನಿಜವಾಗಿಯೂ ಹೆರಿಗೆ ನಂತರ ಮುಟ್ಟು ಯಾವಾಗ ಬರಬೇಕು? ಇಲ್ಲಿದೆ ತಜ್ಞರು ನೀಡಿದ ಮಾಹಿತಿ.

ಡಾ. ಪೀತಿ ಶಾನಭಾಗ್ ಎಂಬವರು ಈ ವಿಚಾರವಾಗಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ಅವರು ತಿಳಿಸಿರುವ ಪ್ರಕಾರ ಹೆರಿಗೆ ನಂತರ ಮುಟ್ಟು ಬರುವುದು ಸಹಜ. ಎದೆ ಹಾಲು ಕುಡಿಸುವ ತಾಯಂದಿರಲ್ಲಿ 8- 10 ತಿಂಗಳ ನಂತರ ಮತ್ತು ಎದೆ ಹಾಲು ಕುಡಿಸದಿರುವ ತಾಯಂದಿರಲ್ಲಿ 1 ರಿಂದ 2ತಿಂಗಳ ನಂತರ ಬರಬಹುದು. ಸಾಮಾನ್ಯವಾಗಿ ಎದೆ ಹಾಲು ಕುಡಿಸುವುದನ್ನು ಕಡಿಮೆ ಅಥವಾ ನಿಲ್ಲಿಸಿದಲ್ಲಿ ಮುಟ್ಟು ಬೇಗ ಬರುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಇದರ ಹೊರತಾಗಿ ಹೆರಿಗೆಯ ನಂತರ ಋತುಚಕ್ರ ವಿಳಂಬವಾಗಲು ಕಾರಣಗಳು ಇಲ್ಲಿವೆ;

  • ಶಾರೀರಿಕ ತೂಕ ಕಡಿಮೆಯಾಗುವುದು: ಶರೀರದಲ್ಲಿ ಸಾಕಷ್ಟು ಪ್ರಮಾಣದ ಕೊಬ್ಬಿನ ಕೊರತೆ ಹಾರ್ಮೋನ್ ಉತ್ಪತ್ತಿಗೆ ಅಡ್ಡಿ ಮಾಡಿ, ಇದರಿಂದ ಮುಟ್ಟು ತಡವಾಗುತ್ತದೆ.
  • ಹೆಚ್ಚಿನ ತೂಕ: ಕಡಿಮೆ ತೂಕ ಮಾತ್ರವಲ್ಲ ಹೆಚ್ಚಾದರೂ ತೊಂದರೆಯಾಗುತ್ತದೆ. ಈ ಹೆಚ್ಚಾದ ತೂಕ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು, ವಿಶೇಷವಾಗಿ ಈಸ್ಟ್ರೊಜೆನ್ ಮಟ್ಟದಲ್ಲಿ ಏರಿಕೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಋತುಚಕ್ರ ವಿಳಂಬವಾಗುತ್ತದೆ.
  • ಹೆಚ್ಚಿನ ಒತ್ತಡ: ಹೆರಿಗೆಯಾದ ಬಳಿಕ ಮಗುವಿನ ಆರೈಕೆಯಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಒತ್ತಡವು ಹಾರ್ಮೋನ್ ಗಳ ನಿಯಂತ್ರಣಕ್ಕೆ ಅಡ್ಡಿಯಾಗುತ್ತದೆ.
  • ಥೈರಾಯ್ಡ್ ಸಮಸ್ಯೆಗಳು: ದೇಹದಲ್ಲಿ ಕಂಡು ಬರುವ ಥೈರಾಯ್ಡ್ ಅಸಮತೋಲನ ಮುಟ್ಟು ತಡವಾಗಲು ಕಾರಣವಾಗುತ್ತದೆ.
  • ಪಿಸಿಓಎಸ್ (ಪಾಲಿಸಿಸ್ಟಿಕ್ ಒವರಿ ಸಿಂಡ್ರೋಮ್): ಹೆರಿಗೆಯ ನಂತರ ಹಾರ್ಮೋನಲ್ ಅಸಮತೋಲನ ಮುಟ್ಟು ತಡವಾಗಲು ಕಾರಣವಾಗಬಹುದು.
  • ಹಾಲುಣಿಸುವುದು: ಹೈ ಪ್ರೊಲಾಕ್ಟಿನ್ ಮಟ್ಟವು ಮುಟ್ಟು ತಡವಾಗಲು ಕಾರಣ ಆಗುತ್ತದೆ.
  • ಹಾರ್ಮೋನಲ್ ಅಸಮತೋಲನ: ಹೆರಿಗೆಯ ನಂತರ ಹಾರ್ಮೋನ್ ಮಟ್ಟದಲ್ಲಿ ಬದಲಾವಣೆ ಉಂಟಾಗುತ್ತದೆ, ಮುಟ್ಟು ತಡವಾಗಲು ಇದು ಒಂದು ಕಾರಣವಾಗಿದೆ.
  • ಆಶರ್ಮನ್ ಸಿಂಡ್ರೋಮ್: ಹೆರಿಗೆ ಸಂದರ್ಭದಲ್ಲಿ ಗರ್ಭಾಶಯದಲ್ಲಿ ಉಂಟಾಗುವ ಗಾಯಗಳು ಮುಟ್ಟು ತಡವಾಗಲು ಕಾರಣವಾಗಬಹುದು.
  • ಪೋಷಕಾಂಶಗಳ ಕೊರತೆ: ಹೆರಿಗೆಯ ಬಳಿಕ ದೇಹದಲ್ಲಿ ಕಂಡು ಬರುವ ಕಬ್ಬಿಣ, ವಿಟಮಿನ್ D ಕೊರತೆಯು ಋತುಚಕ್ರದ ವಿಳಂಬಕ್ಕೆ ಕಾರಣವಾಗುತ್ತದೆ.
  • ಇನ್ನಿತರ ಕಾಯಿಲೆಗಳು: ಮಧುಮೇಹ ಅಥವಾ ಬೇರೆ ಬೇರೆ ಔಷಧಿಗಳ ಸೇವನೆಯು ಇದಕ್ಕೆ ಕಾರಣ ಆಗಬಹುದು.

ಇನ್ನು ಇದೆಲ್ಲದರ ಹೊರತಾಗಿ, ಅಂದರೆ ಮುಟ್ಟು ಬರುವುದಕ್ಕಿಂತ ಮೊದಲು ಸಹ ಒವುಲೇಷನ್ ಅಥವಾ ಅಂಡೋತ್ಪತ್ತಿ ಆಗುವ ಸಾಧ್ಯತೆ ಇದ್ದು ಈ ಸಮಯದಲ್ಲಿ ಗರ್ಭಧಾರಣೆ ಆಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ