Women Health: ಗರ್ಭಿಣಿಯರು ಈ ಕೆಲಸಗಳನ್ನು ಮಾಡಲೇಬಾರದು; ಆರೋಗ್ಯ ಕಾಪಾಡಿಕೊಳ್ಳಿ

ಗರ್ಭಾವಸ್ಥೆಯಲ್ಲಿ ಮಹಿಳೆ ಯಾವುದೇ ರೀತಿಯ ಭಾರವಾದ ವಸ್ತುವನ್ನು ಎತ್ತುವುದು ಒಳ್ಳೆಯದಲ್ಲ. ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ನಿಮ್ಮ ಕೀಲುಗಳಲ್ಲಿನ ಅಂಗಾಂಶಗಳು ಸಡಿಲಗೊಳ್ಳುತ್ತವೆ.

Women Health: ಗರ್ಭಿಣಿಯರು ಈ ಕೆಲಸಗಳನ್ನು ಮಾಡಲೇಬಾರದು; ಆರೋಗ್ಯ ಕಾಪಾಡಿಕೊಳ್ಳಿ
ಸಾಂದರ್ಭಿಕ ಚಿತ್ರ
Follow us
| Updated By: ganapathi bhat

Updated on: Aug 01, 2021 | 10:51 PM

ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರು ಎಷ್ಟು ಆರೋಗ್ಯವಾಗಿದ್ದರೂ ಸಾಲದು. ಮಹಿಳೆ ಆಕೆಯ ಜೀವದ ಜತೆಗೆ ಮತ್ತೊಂದು ಜೀವದ ಕಾಳಜಿಯನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ಮಹಿಳೆಯು ತಾನು ಸೇವಿಸುವ ಆಹಾರ ಮತ್ತು ಜೀವನ ಶೈಲಿಯ ಬಗ್ಗೆ ಹೆಚ್ಚು ಗಮನವಹಿಸಬೇಕು. ಸಣ್ಣ ಸಮಸ್ಯೆಯೂ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು. ಹಾಗಾಗಿ ಪ್ರತಿ ಕ್ಷಣದಲ್ಲಿಯೂ ಎಚ್ಚರಿಕೆಯಿಂದ ಇರುವುದು ಒಳಿತು.

ಈ ಕೆಳಗಿನ ಕೆಲವು ಅಂಶಗಳನ್ನು ಗರ್ಭಿಣಿಯರು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ *ಗರ್ಭಾವಸ್ಥೆಯಲ್ಲಿ ಮಹಿಳೆ ಯಾವುದೇ ರೀತಿಯ ಭಾರವಾದ ವಸ್ತುವನ್ನು ಎತ್ತುವುದು ಒಳ್ಳೆಯದಲ್ಲ. ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ನಿಮ್ಮ ಕೀಲುಗಳಲ್ಲಿನ ಅಂಗಾಂಶಗಳು ಸಡಿಲಗೊಳ್ಳುತ್ತವೆ. ಅದು ನಿಮಗೆ ಸಮಸ್ಯೆಯನ್ನು ತಂದೊಡ್ಡಬಹುದು. ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿರಬಹುದು.

*ಗರ್ಭಾವಸ್ಥೆಯಲ್ಲಿ ದೀರ್ಘಕಾಲದವರೆಗೆ ನಿಂತೇ ಇರುವುದನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು. ಮಗುವಿನ ತೂಕದ ಹೆಚ್ಚಳದಿಂದಾಗಿ ಹೊಟ್ಟೆಯ ಭಾಗಕ್ಕೆ ಒತ್ತಡ ಉಂಟಾಗುತ್ತದೆ. ಕಾಲುಗಳ ಊತ ಸಮಸ್ಯೆ ಎದುರಾಗಬಹುದು. ಗರ್ಭಾವಸ್ಥೆಯ ಸಮಯದಲ್ಲಿ ದೀರ್ಘಕಾಲದವರೆಗೆ ನಿಂತೇ ಇರುವುದು ಕಾಲುಗಳಲ್ಲಿ ನೋವು ಮತ್ತು ಬೆನ್ನು ನೋವಿನ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಹೆಚ್ಚು ಹೊತ್ತು ನಿಲ್ಲುವದನ್ನು ತಪ್ಪಿಸಿ.

*ಗರ್ಭಾವಸ್ಥೆಯಲ್ಲಿ ಬಾಗುವುದು ತುಂಬಾ ಅಪಾಯಕಾರಿ. ಆದ್ದರಿಂದ ಪೊರಕೆಯಲ್ಲಿ ನೆಲ ಗುಡುಸಿವುದು, ಹೆಚ್ಚು ಬಾಗಿ ನಮಸ್ಕರಿಸುವುದು, ಬಟ್ಟೆ ಒಗೆಯುವುದು ಈ ರೀತಿಯ ಕೆಲಸಗಳನ್ನು ಮಾಡದಿರುವುದು ಉತ್ತಮ.

*ಸ್ಟೂಲ್​ ಅಥವಾ ಏಣಿಯ ಮೇಲೆ ಹತ್ತುವುದು ಗರ್ಭಾವಸ್ಥೆಯಲ್ಲಿ ಅಪಾಯಕಾರಿ. ನಿಮ್ಮೊಂದಿಗೆ ಮತ್ತೊಂದು ಜೀವ ಬೆಳೆಯುತ್ತಿರುತ್ತದೆ. ನಿಮ್ಮ ದೇಹದ ತೂಕವೂ ಹೆಚ್ಚಳವಾಗಿರುತ್ತದೆ. ಇತಂಹ ಸಮಯದಲ್ಲಿ ದೇಹದ ಸಮತೋಲನ ಸ್ವಲ್ಪ ಹದಹೆಟ್ಟಿರುತ್ತದೆ. ಹೀಗಿರುವಾಗ ಕಷ್ಟದ ಕೆಲಸ ಹಾಗೂ ದೇಹಕ್ಕೆ ಹೆಚ್ಚು ಸುಸ್ತಾಗುವ ಕೆಲಸವನ್ನು ಮಾಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಅಪಾಯಕಾರಿ.

ಇದನ್ನೂ ಓದಿ:

Women Health: ಪಿಸಿಓಎಸ್ ಎಂದರೇನು? ಇದು ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗೆ ಹೇಗೆ ಕಾರಣ ಎಂಬುದನ್ನು ತಿಳಿಯಿರಿ

Women Health: ಗರ್ಭಾವಸ್ಥೆಯಲ್ಲಿ ವಾಕಿಂಗ್ ಮಾಡುವಾಗ ಈ ಕೆಲವು ವಿಷಯಗಳನ್ನು ಎಂದಿಗೂ ಮರೆಯದಿರಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ