Women Health: ಮಹಿಳೆಯರೇ ಸ್ತನ ಕ್ಯಾನ್ಸರ್​ ಬಗ್ಗೆ ಎಚ್ಚರವಿರಲಿ! ಈ ಖಾಯಿಲೆಯ ಲಕ್ಷಣಗಳೇನು ತಿಳಿಯಿರಿ

ಬ್ರಸ್ಟ್​ ಕ್ಯಾನ್ಸರ್​: ಸ್ತನ ಕ್ಯಾನ್ಸರ್​ ಲಕ್ಷಣಗಳೇನು? ಯಾವ ರೀತಿಯ ಸಮಸ್ಯೆ ಕಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಅರೋಗ್ಯದಲ್ಲಿ ಏನೇ ವ್ಯತ್ಯಾಸವಾದರೂ ಹತ್ತಿರದ ವೈದ್ಯರಲ್ಲಿ ಪರೀಕ್ಷೆಗೆ ಒಳಗಾಗಿ

Women Health: ಮಹಿಳೆಯರೇ ಸ್ತನ ಕ್ಯಾನ್ಸರ್​ ಬಗ್ಗೆ ಎಚ್ಚರವಿರಲಿ! ಈ ಖಾಯಿಲೆಯ ಲಕ್ಷಣಗಳೇನು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
| Updated By: shruti hegde

Updated on:Jul 29, 2021 | 8:41 AM

ಇತ್ತೀಚಿನ ದಿನದಲ್ಲಿ ಬ್ರಸ್ಟ್ ಕ್ಯಾನ್ಸರ್(Breast Cancer) ಖಾಯಿಲೆ ಮಹಿಳೆಯರನ್ನು ಕಾಡುತ್ತಿದೆ. ಮಹಿಳೆಯರು ಅತಿ ಸೂಕ್ಷ್ಮವಾದ ತಮ್ಮ ಅಂಗಗಳನ್ನು ಸ್ವಚ್ಛತೆಯೊಂದಿಗೆ ಕಾಪಾಡಿಕೊಳ್ಳಬೇಕು. ತಮ್ಮ ಆರೋಗ್ಯದ(Health) ಕುರಿತಾಗಿ ಹೆಚ್ಚು ಗಮನವಹಿಸಲೇಬೇಕಾಗಿದೆ. ಅಂದಾಗ ಮಾತ್ರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದಾಗಿದೆ. ಜತೆಗೆ ಅಪಾಯ ತರುವಂತಹ ರೋಗಗಳಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.

ಹಾಗಿರುವಾಗ ಸ್ತನ ಕ್ಯಾನ್ಸರ್​ ಲಕ್ಷಣಗಳೇನು? ಯಾವ ರೀತಿಯ ಸಮಸ್ಯೆ ಕಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಅರೋಗ್ಯದಲ್ಲಿ ಏನೇ ವ್ಯತ್ಯಾಸವಾದರೂ ಹತ್ತಿರದ ವೈದ್ಯರಲ್ಲಿ ಪರೀಕ್ಷೆಗೆ ಒಳಗಾಗಿ. ಏಕೆಂದರೆ ಸಣ್ಣ ಸಮಸ್ಯೆಯೂ ಸಹ ಮುಂದೊಂದು ದಿನ ದೊಡ್ಡ ಪರಿಣಾಮವನ್ನು ಬೀರಬಹುದು. ಹಾಗಾಗಿ ಬ್ರೆಸ್ಟ್​ ಅಥವಾ ಸ್ತನ ಕ್ಯಾನ್ಸರ್ ಸಮಸ್ಯೆಯ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ.

ಸ್ತನ ಕ್ಯಾನ್ಸರ್​ ಕೆಲವು ಲಕ್ಷಣಗಳು:

*ಸ್ತನದ ಸುತ್ತ ಗಟ್ಟಿಯಾಗುತ್ತದೆ. ಗಡ್ಡೆಯ ರೀತಿಯ ಅನುಭವ ಉಂಟಾಗುತ್ತದೆ. ಹಾಗಿರುವಾಗ ಸ್ತನದ ಸುತ್ತಲೂ ಗಡ್ಡೆಯಾದಂತೆ ಗಟ್ಟಿಯಾಗಿದ್ದರೆ ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ತಕ್ಷಣವೇ ಹತ್ತಿರದ ವೈದ್ಯರಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಒಳ್ಳೆಯದು.

*ಮಹಿಳೆಯರು ಫ್ಯಾಚನ್​​ಗಾಗಿ ಬ್ಯೂಟಿ ಪಾರ್ಲರ್​ಗಳಿಗೆ ಹೋಗು್ತಾರೆ. ಅಲ್ಲಿ ಬಳಸುವ ರಾಸಾಯನಿಕ ವಸ್ತುಗಳು ಆರೋಗ್ಯವನ್ನು ಹಾಳು ಮಾಡುತ್ತದೆ. ಇದರಿಂದಲೂ ಸ್ತನ ಕ್ಯಾನ್ಸರ್ ಸಮಸ್ಯೆ ಕಾಡುವ ಸಾಧ್ಯತೆಗಳಿವೆ. ಹಾಗಿರುವಾಗ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ಇರಲಿ. ಯಾವುದೇ ಕಾರಣಕ್ಕೂ ಸಣ್ಣ ಸಣ್ಣ ಸಮಸ್ಯೆಗಳ ಕುರಿತಾಗಿ ನಿರ್ಲಕ್ಷ್ಯ ತೋರಬೇಡಿ.

*ಮಹಿಳೆಯರು ಹೆಚ್ಚು ಬಿಗಿಯಾದ ಬಟ್ಟೆಯನ್ನು ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳಿರುತ್ತವೆ. ಹಾಗಿರುವಾಗ ರಾತ್ರಿ ಮಲಗುವಾಗ ಹಾಗೂ ಹೆಚ್ಚು ಆಯಾಸವಾಗುವ ಕೆಲಸದಲ್ಲಿ ತೊಡಗಿಕೊಂಡಿರುವಾಗ ಬಿಗಿಯಾದ ವಸ್ತ್ರವನ್ನು ಎಂದಿಗೂ ಧರಿಸದಿರಿ.

*ಅನುವಂಶೀಯತೆಯಿಂದಲೂ ಹೆಣ್ಣು ಮಕ್ಕಳಿಗೆ ಅಥವಾ ಹೆಂಗಸರಿಗೆ ಬ್ರಸ್ಟ್ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಅತಿಯಾದ ಮೊಬೈಲ್ ಬಳಕೆಯಿಂದಲೂ ಆರೋಗ್ಯಕ್ಕೆ ಕುತ್ತು ಉಂಟಾಗಬಹುದು.

*ಹಾಲುಣಿಸುವ ತಾಯಂದಿರು ಎಂದಿಗೂ ತಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಶುಭ್ರವಾದ ವಸ್ತ್ರವನ್ನೇ ಧರಿಸಿ. ಜತೆಗೆ ನಿಮ್ಮ ಆರೋಗ್ಯದ ಬಗೆಗೆ ಹೆಚ್ಚು ಕಾಳಜಿ ಇರಲಿ.

ಇದನ್ನೂ ಓದಿ:

Women Health: ಮಹಿಳೆಯರೇ ಟೈಟ್ ಡ್ರೆಸ್ ಅಂದ್ರೆ ಇಷ್ಟಾನಾ? ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!

Women Health: ಗರ್ಭಿಣಿಯರು ಪಾರ್ಲರ್​ಗೆ ಹೋಗುವುದು ಒಳ್ಳೆಯದಲ್ಲ! ಕಾರಣ ತಿಳಿಯಲೇಬೇಕು

Published On - 8:40 am, Thu, 29 July 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ