AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಮಹಿಳೆಯರೇ ಟೈಟ್ ಡ್ರೆಸ್ ಅಂದ್ರೆ ಇಷ್ಟಾನಾ? ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!

ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ಇರಲಿ. ಜತೆಗೆ ಆರೋಗ್ಯ ಸುರಕ್ಷತೆಗಾಗಿ ಟೈಟ್​ ಡ್ರೆಸ್​ ತೊಡುವುದನ್ನು ಆದಷ್ಟು ತಪ್ಪಿಸಿ.

Women Health: ಮಹಿಳೆಯರೇ ಟೈಟ್ ಡ್ರೆಸ್ ಅಂದ್ರೆ ಇಷ್ಟಾನಾ? ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 28, 2021 | 8:26 AM

Share

ಹಗಲಿನಿಂದ ರಾತ್ರಿ ಮಲಗುವವರೆಗೆ ಹೆಂಗಸರ ಕೆಲಸ ಹೊರೆಯಷ್ಟು ಬಿದ್ದಿರುತ್ತದೆ. ಪ್ರತಿನಿತ್ಯ ಅದೇ ಕೆಲಸ, ಅದೇ ರಗಳೆ ಅನ್ನುತ್ತಿರುತ್ತಾರೆ. ಗಂಡ ಆಫೀಸ್​ಗೆ ಹೊರಟಾಗಿನಿಂದ ಆತನನ್ನು ರೆಡಿ ಮಾಡಿ ಬೆಳಗ್ಗೆಯ ಉಪಹಾರ, ಮಧ್ಯಾಹ್ನಕ್ಕೆ ಬುತ್ತಿ ಕೊಟ್ಟು ಕಳಿಸುವವರೆಗೆ ಮಕ್ಕಳು ಅಮ್ಮಾ ಹಸಿವು.. ಎಂದು ಕೂಗಲು ಆರಂಭವಾಯ್ತು. ಅವರನ್ನು ಸಂತೈಸಿ, ಪ್ರತಿ ಕ್ಷಣ ಎಚ್ಚೆತ್ತು ಮಕ್ಕಳ ಆರೋಗ್ಯದ ಜತೆಗೆ ಕುಟುಂಬದವರ ಆರೋಗ್ಯ ನೋಡಿಕೊಳ್ಳುವ ಮಹಿಳೆಯರು(Women Health) ತಮ್ಮ ಆರೋಗ್ಯದ ಮೇಲೂ ಲಕ್ಷ್ಯವಹಿಸಲೇ ಬೇಕಲ್ಲವೇ? ನಿಮಾಗಾಗಿಯೇ ಕೆಲವೊಂದಿಷ್ಟು ಸಲಹೆಗಳಿವೆ. ಈ ಕುರಿತಾಗಿ ಎಚ್ಚರವಿರಲಿ.

ಆರೋಗ್ಯ ಅಂದಾಕ್ಷಣ ಕೇವಲ ಆಹಾರ ಪದ್ಧತಿಯೊಂದೇ ಅಲ್ಲ, ಪ್ರತಿನಿತ್ಯ ವಾಯಾಮ ಮಾಡಿ ಎಂಬುದೂ ಅಲ್ಲ. ನೀವು ಧರಿಸುವ ಬಟ್ಟೆಗಳು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು. ಮೈಗಂಟಿಕೊಳ್ಳುವ ಬಟ್ಟೆಗಳು(Tight Dress) ಆರಾಮವನಿಸಿದರೂ ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಹಾಗಿರುವಾಗ ನೀವು ಕೊಂಚ ಸಡಿಲವಾಗಿರುವ ಬಟ್ಟೆಗಳನ್ನು ಹೆಚ್ಚು ಬಳಸಿ.

ಟೈಟ್​ ಡ್ರೆಸ್​ ತೊಡುವುದು ಸ್ಟೈಲ್​​ ಆಗಿರಬಹುದು, ಇತ್ತೀಚಿನ ದಿನಗಳಲ್ಲಿ ಟ್ರೆಂಡ್​ ಕೂಡಾ ಆಗಿರಬಹುದು ಆದರೆ ಆರೋಗ್ಯದ ದೃಷ್ಟಿಯಿಂದ ಮುಹಿಳೆಯರು ಬಿಗಿಯಾದ ಉಡುಪನ್ನು ಧರಿಸುವುದು ಆರೋಗ್ಯವನ್ನು ಹದಗೆಡಿಸುತ್ತದೆ ಎಂಬುದನ್ನೂ ಎಂದೂ ಮರೆಯದಿರಿ. ಟೈಟ್​ ಡ್ರೆಸ್​ ಧರಿಸುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಂಡು ಬರುಬಹುದು ಎಂಬುದನ್ನು ತಿಳಿಯಿರಿ.

ರಕ್ತದೊತ್ತಡ ಸಾಮಾನ್ಯವಾಗಿ ಫಿಟ್​ಆಗಿ ಕಾಣಿಸಲಿ ಎಂಬ ಉದ್ದೇಶದಿಂದ ಟೈಟ್​ ಡ್ರೆಸ್​ಗಳನ್ನು ಧರಿಸುತ್ತಾರೆ. ಇಲ್ಲವೇ ಸುಂದರವಾಗಿ ಕಾಣಿಸಲು ಕೊಂಚ ಬಿಗಿಯಾದ ಉಡುಗೆಯನ್ನು ತೊಡುವುದು ಟ್ರೆಂಡ್​ ಆಗಿ ಬಿಟ್ಟಿದೆ. ಪ್ರತಿನಿತ್ಯ ದುಡಿಯುವ ಮಹಿಳೆಯರು ಟೈಟ್​ ಡ್ರೆಸ್​ ತೊಡಲೇಬಾರದು. ಲಘುಬಗೆಯಿಂದ ಓಡಾಡುತ್ತಾ ಕೆಲಸ ಮಾಡುತ್ತಿರುವಾಗ ಟೈಟ್​ ಡ್ರೆಸ್​ಗಳು ಇನ್ನಷ್ಟು ದೇಹಕ್ಕೆ ಅಂಟಿಕೊಳ್ಳುತ್ತವೆ. ಇವು ರಕ್ತದೊತ್ತಡ ಸಮಸ್ಯೆಯನ್ನು ತಂದೊಡ್ಡುತ್ತದೆ.

ಆತಂಕ ಗಡಿಬಿಡಿಯಲ್ಲಿ ಕೆಲಸ ಮಾಡುವಾಗ ಚಿಂತೆ, ಆತಂಕವೆಲ್ಲವೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಸಹಜ. ಅದರಲ್ಲಿಯೂ ಬಿಗಿಯಾದ ಬಟ್ಟೆ ಧರಿಸಿದ್ದಾಗ ಉಸಿರು ಗಟ್ಟುವಂತೆ ಭಾಸವಾಗುತ್ತದೆ. ಮನಸ್ಸು ತಳಮಳಗೊಳ್ಳುತ್ತವೆ. ಇದರಿಂದ ರಕ್ತದೊತ್ತಡ ಹೆಚ್ಚಾಗುತ್ತೆ. ಮನಸ್ಸಿನ ನೆಮ್ಮದಿ ಇತ್ತುಕೊಳ್ಳುವ ಸಂಭವ ಹೆಚ್ಚಾಗಿರುವುದರಿಂದ ಟೈಟ್​ ಡ್ರೆಸ್​ಗಳನ್ನು ಧರಿಸದಿರುವುದು ಉತ್ತಮ.

ಮೂರ್ಛೆ ಹೋಗುವುದು ಬಿಗಿಯಾದ ಉಡುವು ಹೆಚ್ಚು ಬಾಯಾರಿಕೆ ಉಂಟು ಮಾಡುತ್ತದೆ. ಹೆಚ್ಚು ಬೆವರಿನಿಂದ ದೇಹ ಸುಸ್ತಾಗುತ್ತದೆ. ಉಸಿರುಗಟ್ಟುವ ಸಂಭವವಿರುವುದರಿಂದ ತಲೆತಿರುಗುವುದು, ಮೂರ್ಛೆ ಹೋಗುವ ಸಮಸ್ಯೆ ಕಾಡಬಹುದು. ಹೀಗಾಗಿ ಬಿಗಿಯಾದ ವಸ್ತ್ರ ಧರಿಸುವುದನ್ನು ಆದಷ್ಟು ತಪ್ಪಿಸಿ.

ಚರ್ಮದ ಅಲರ್ಜಿ ಮೈಗಂಟಿಕೊಳ್ಳುವ ಉಡುಪು ಹೆಚ್ಚು ಬೆವರಿನಿಂದ ನೆನೆಯುತ್ತದೆ. ಕಂಕಳುಗಳಲ್ಲಿ, ಬೆನ್ನು ಭಾಗ, ಕುತ್ತಿಗೆಯಲ್ಲಿ ಅಲರ್ಜಿ ಕಾಣಿಸಿಕೊಲ್ಳಬಹುದು. ಬೆವರಿನ ಬ್ಯಾಕ್ಟೀರಿಯಾಗಳಿಂದ ತುರಿಕೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿಯೂ ಮಹಿಳೆಯ ಚರ್ಮ ಹೆಚ್ಚು ಸೂಕ್ಷ್ಮವಾಗಿರುವುದರಿಂದ ಹೆಚ್ಚು ಪರಿಣಾಮ ಬೀರಬಹುದು. ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ಇರಲಿ. ಜತೆಗೆ ಆರೋಗ್ಯ ಸುರಕ್ಷತೆಗಾಗಿ ಟೈಟ್​ ಡ್ರೆಸ್​ ತೊಡುವುದನ್ನು ಆದಷ್ಟು ತಪ್ಪಿಸಿ.

ಇದನ್ನೂ ಓದಿ:

Women Health: ಗರ್ಭಿಣಿಯರು ಪಾರ್ಲರ್​ಗೆ ಹೋಗುವುದು ಒಳ್ಳೆಯದಲ್ಲ! ಕಾರಣ ತಿಳಿಯಲೇಬೇಕು

Women Health: ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವಕ್ಕೆ ಕಾರಣವೇನು ಗೊತ್ತಾ? ಪರಿಹಾರವೂ ಇಲ್ಲಿದೆ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?