Tanning Skin: ಬಿಸಿಲಿಗೆ ಕಾಲಿನ ಪಾದ ಕಪ್ಪಾಗಿದೆಯಾ? ಈ ಮನೆಮದ್ದುಗಳನ್ನು ಬಳಸಿ

ಬಿಸಿಲಿನಿಂದ ಕಾಲುಗಳು ಟ್ಯಾನ್ ಆಗುವ ಜೊತೆಗೆ ತುರಿಕೆಯೂ ಶುರುವಾಗುತ್ತದೆ. ಕಾಲಿನ ಪಾದಗಳು ಕಪ್ಪಾದರೆ ಅಥವಾ ಟ್ಯಾನ್ ಆದರೆ ಈ ಮನೆಮದ್ದುಗಳನ್ನು ಬಳಸಿ.

Tanning Skin: ಬಿಸಿಲಿಗೆ ಕಾಲಿನ ಪಾದ ಕಪ್ಪಾಗಿದೆಯಾ? ಈ ಮನೆಮದ್ದುಗಳನ್ನು ಬಳಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Jul 28, 2021 | 7:31 AM

ಬೇಸಿಗೆಯಲ್ಲಿ ಚರ್ಮ ಕಾಪಾಡುವುದು ಸ್ವಲ್ಪ ಕಷ್ಟವೇ ಆಗಿರುತ್ತದೆ. ಬಿಸಿಲಿಗೆ ಚರ್ಮ ಟ್ಯಾನ್ ಆಗುತ್ತದೆ. ಚರ್ಮ ಟ್ಯಾನ್ ಆದರೆ ಸೌಂದರ್ಯ ಸ್ವಲ್ಪ ಮಟ್ಟಿಗೆ ಕುಗ್ಗುವುದು ಸಹಜ. ಬಿಸಿಲಿಗೆ ಕೈ, ಕಾಲು, ಬೆನ್ನು ಕಪ್ಪಾಗುತ್ತದೆ. ಹೀಗಾಗಿ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಬಿಸಿಲಿನಿಂದ ಕಾಲುಗಳು ಟ್ಯಾನ್ ಆಗುವ ಜೊತೆಗೆ ತುರಿಕೆಯೂ ಶುರುವಾಗುತ್ತದೆ. ಕಾಲಿನ ಪಾದಗಳು ಕಪ್ಪಾದರೆ ಅಥವಾ ಟ್ಯಾನ್ ಆದರೆ ಈ ಮನೆಮದ್ದುಗಳನ್ನು ಬಳಸಿ.

* ಸೋಡಾ ಮತ್ತು ಮೊಸರು ಒಂದು ಬೌಲ್ಗೆ ಒಂದು ಚಮಚ ಅಡಿಗೆ ಸೋಡಾ ಹಾಕಿ. ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಮತ್ತು ಸ್ವಲ್ಪ ಮೊಸರು ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಕಾಲಿನ ಪಾದಗಳ ಮೇಲೆ ಹಚ್ಚಿ. ಕೈಗಳಿಂದ ಲಘುವಾಗಿ ಮಸಾಜ್ ಮಾಡಿ. 4 ರಿಂದ 5 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಕಾಲಿಗೆ ಹಚ್ಚಿದ ಮಿಶ್ರಣವನ್ನು 10 ನಿಮಿಷ ಕಾಲಿನ ಮೇಲೆ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ಕಾಲನ್ನು ತೊಳೆಯಿರಿ. ಹೀಗೆ ವಾರದಲ್ಲಿ ಎರಡು ಅಥವಾ ಮೂರು ಬಾರಿ ಹಚ್ಚಿ.

* ಅರಿಶಿನ ಮತ್ತು ಕಡಲೆ ಹಿಟ್ಟು ಒಂದು ಬೌಲ್ ಅಥವಾ ಬಟ್ಟಲಿಗೆ ಎರಡು ಚಮಚ ಕಡಲೆ ಹಿಟ್ಟು, ಅರ್ಧ ಚಮಚ ಅರಿಶಿನ ಪುಡಿ ಮತ್ತು ಸ್ವಲ್ಪ ರೋಸ್ ವಾಟರ್ ಹಾಕಿ. ನಯವಾದ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಇದನ್ನು ಕಾಲಿನ ಪಾದಗಳ ಮೇಲೆ ಹಚ್ಚಿ. ಒಣಗುವವರೆಗೂ ಹಾಗೇ ಬಿಡಿ. ನಂತರ ವೃತ್ತಾಕಾರದಲ್ಲಿ ಕಾಲುಗಳನ್ನು ಮಸಾಜ್ ಮಾಡಿ. ಇದು ಕಾಲಿನ ಪಾದದ ಮೇಲಿರುವ ಟ್ಯಾನ್ ಕಡಿಮೆಯಾಗುತ್ತದೆ. ಇದನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಿ.

* ಪರಂಗಿ ಹಣ್ಣು ಮತ್ತು ಜೇನುತುಪ್ಪ ಸ್ವಲ್ಪ ಪರಂಗಿ ಹಣ್ಣನ್ನು ತೆಗೆದುಕೊಳ್ಳಿ. ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಕತ್ತರಿಸಿದ ತುಂಡುಗಳನ್ನು ನುಣುವಾಗಿ ಪೇಸ್ಟ್ ಮಾಡಿ. ರೆಡಿಯಾದ ಪೇಸ್ಟ್ಗೆ ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಎರಡೂ ಪಾದಗಳಿಗೂ ಹಚ್ಚಿ. ಇದು ಬಿಸಿಲಿಗೆ ಟ್ಯಾನ್ ಆಗಿರುವ ಕಾಲಿನ ಪಾದಗಳನ್ನು ಬಿಳಿಯಾಗಿಸುತ್ತದೆ.

* ಹಸಿ ಹಾಲು ಮತ್ತು ಅಕ್ಕಿ ಹಿಟ್ಟು ಒಂದು ಬೌಲ್ಗೆ ಎರಡು ಚಮಚ ಅಕ್ಕಿ ಹಿಟ್ಟು ಮತ್ತು ಸ್ವಲ್ಪ ಹಸಿ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ರೀತಿ ಸಿದ್ಧಪಡಿಸಿಕೊಳ್ಳಿ. ಕಾಲಿನ ಪಾದದ ಮೇಲೆ ಹಾಗೂ ಕೆಳಗೆ ಚೆನ್ನಾಗಿ ಹಚ್ಚಿಕೊಳ್ಳಿ. ನಂತರ ಕೈಗಳಿಂದ ಲಘುವಾಗಿ ಮಸಾಜ್ ಮಾಡಿ. 8 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಮಸಾಜ್ ಮಾಡಿದ ಬಳಿಕ ಹಚ್ಚಿದ ಪೇಸ್ಟ್ 15 ರಿಂದ 20 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ತಣ್ಣೀರಿನಿಂದ ಕಾಲುಗಳನ್ನು ತೊಳೆಯಿರಿ. ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಮಾಡಿದರೆ ಉತ್ತಮ ಫಲಿತಾಂಶ ಬೇಗ ಸಿಗುವುದು.

ಇದನ್ನೂ ಓದಿ

Tips and Tricks: ನೀವು EMI ನಲ್ಲಿ ಮೊಬೈಲ್ ಖರೀದಿಸುವ ಮುನ್ನ ಒಮ್ಮೆ ಟ್ರಿಕ್ ಫಾಲೋ ಮಾಡಿ

Health Tips: ನೀರು ಕುಡಿಯುವುದು ಒಳ್ಳೆಯ ಅಭ್ಯಾಸ, ಆದರೆ ಅತಿಯಾದ ನಿರ್ಜಲೀಕರಣ ಆರೋಗ್ಯಕ್ಕೆ ಹಾನಿಕಾರಕ

(Home Remedies For Tanning feet skin)

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?