Eye Health: ಕಣ್ಣಿನ ಉರಿ ಸಮಸ್ಯೆಯೇ? ಸುರಕ್ಷತೆಗೆ ಈ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕ

TV9 Digital Desk

| Edited By: preethi shettigar

Updated on: Jul 28, 2021 | 7:22 AM

ಕಣ್ಣಿನ ಆರೋಗ್ಯ: ಹೆಚ್ಚು ಹೊತ್ತು ಲ್ಯಾಪ್ಟಾಪ್, ಮೊಬೈಲ್, ಟಿವಿ ಬಳಕೆಯಿಂದ ಕಣ್ಣಿನ ಉರಿ, ಕಣ್ಣಿನ ತುರಿಕೆಯ ಸಮಸ್ಯೆ ಕಾಡುತ್ತಿದೆ. ಚಿಕ್ಕ ವಯಸ್ಸಿನವರಿಗೆ ದೃಷ್ಟಿ ಸಮಸ್ಯೆ ಹೆಚ್ಚು ಕಾಡುತ್ತಿದೆ.

Eye Health: ಕಣ್ಣಿನ ಉರಿ ಸಮಸ್ಯೆಯೇ? ಸುರಕ್ಷತೆಗೆ ಈ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕ
ಕಣ್ಣಿನ ಆರೋಗ್ಯ

ಕಳೆದ ಒಂದು ವರ್ಷದಿಂದ ಕೊರೊನಾ ಸಾಂಕ್ರಾಮಿಕದ ಹಾವಳಿ ಜನರ ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ಆನ್​ಲೈನ್​ ತರಗತಿಗಳು, ಆಫೀಸ್ ಕೆಲಸಗಳೆಲ್ಲವೂ ಮನೆಯಿಂದಲೇ ಆಗುತ್ತಿದೆ. ಇಡೀ ದಿನ ಲ್ಯಾಪ್ಟಾಪ್ ಮುಂದೆ ಕುಳಿತು ಕಣ್ಣಿನ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಅದರಲ್ಲಿಯೂ ಮಕ್ಕಳಿಗೆ ಕಣ್ಣಿನ ಉರಿ ಸಮಸ್ಯೆ ಕಾಡುವುದು ಹೆಚ್ಚಾಗುತ್ತಿದೆ. ಹಾಗಾಗಿ ಸೂಕ್ಷ್ಮವಾದ ಕಣ್ಣಿನ ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸಲೇಬೇಕು.

ಹೆಚ್ಚು ಹೊತ್ತು ಲ್ಯಾಪ್ಟಾಪ್, ಮೊಬೈಲ್, ಟಿವಿ ಬಳಕೆಯಿಂದ ಕಣ್ಣಿನ ಉರಿ, ಕಣ್ಣಿನ ತುರಿಕೆಯ ಸಮಸ್ಯೆ ಕಾಡುತ್ತಿದೆ. ಚಿಕ್ಕ ವಯಸ್ಸಿನವರಿಗೆ ದೃಷ್ಟಿ ಸಮಸ್ಯೆ, ಕಣ್ಣಿನ ಒತ್ತಡದ ಸಮಸ್ಯೆ ಕಾಡುತ್ತಿದೆ ಎಂದಾರೆ ಈ ಕೆಳಗೆ ಕೆಲವು ಟಿಪ್ಸ್​ಗಳಿವೆ. ಅವುಗಳನ್ನು ಪಾಲಿಸುವ ಮೂಲಕ ಕಣ್ಣಿನ ಒತ್ತಡವನ್ನು ನಿಯಂತ್ರಿಸಬಹುದು.

ಅಂತರ ಕಾಯ್ದುಕೊಳ್ಳಿ ಟಿವಿ, ಲ್ಯಾಪ್ಟಾಪ್ ಅಥವಾ ಮೊಬೈಲ್​ನಿಂದ ದೂರ ಕುಳಿತು ವೀಕ್ಷಿಸಿ. ತುಂಬಾ ಹತ್ತಿರದಲ್ಲಿ ಕುಳಿತುಕೊಂಡು ಪರದೆಯನ್ನು ನೋಡುವ ಬೆಳಕು ಹೆಚ್ಚು ಕಣ್ಣಿಗೆ ತಗಲುತ್ತದೆ. ಇದರಿಂದ ಕಣ್ಣಿನ ಉರಿ ಕಾಣಿಸಿಕೊಳ್ಳುತ್ತದೆ. ಲ್ಯಾಪ್ಟಾಪ್​ನ ಪ್ರಕಾಶಮಾನವಾದ ಬೆಳಕು ಕಣ್ಣುಗಳ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ದೂರದಿಂದ ಕುಳಿತು ಲ್ಯಾಪ್ಟಾಪ್, ಟಿವಿ ಹಾಗೂ ಮೊಬೈಲ್ ನೋಡುವ ಅಭ್ಯಾಸ ಒಳ್ಳೆಯದು.

ಒಳ್ಳೆಯ ಗಾಳಿ ಇರುವ ಜಾಗ ಆರಿಸಿಕೊಳ್ಳಿ ನೀವು ಕೆಲಸಕ್ಕೆ ಕುಳಿತಾಗ ಅಥವಾ ಮಕ್ಕಳು ತರಗತಿಗಳನ್ನು ಲ್ಯಾಪ್​ಟಾಪ್​, ಮೊಬೈಲ್ ಮೂಲಕ ನೋಡುವ ಸಮಯದಲ್ಲಿ ಒಳ್ಳೆಯ ವಾತಾವರಣವಿರಲಿ. ಉತ್ತಮ ಗಾಳಿಯಿಂದ ಆರೋಗ್ಯ ಸುಧಾರಿಸುತ್ತದೆ. ಜತೆಗೆ ಕಣ್ಣಿಗೆ ತಂಪಾದ ಗಾಳಿ ತಾಕಿದಾಗ ಬಿಸಿಯನ್ನು ಕಡಿಮೆ ಮಾಡುತ್ತದೆ. ಇದರಿಂದ ಕಣ್ಣು ಬೇಗ ಹಾನಿಗೊಳಗಾಗುವುದನ್ನು ತಡೆಯಬಹುದು.

ಕನ್ನಡಕ ನೀವು ಲ್ಯಾಪ್ಟಾಪ್ ಮುಂದೆ ಅಥವಾ ಮೊಬೈಲ್ ಮುಂದೆ ಹೆಚ್ಚಿನ ಸಮಯ ಕಳೆಯಬೇಕು ಎಂದಿದ್ದರೆ ಕಣ್ಣಿನ ರಕ್ಷಣೆಗಾಗಿ ಕನ್ನಡಕವನ್ನು ಬಳಸಿ. ಇದು ನಿಮ್ಮ ಕಣ್ಣಿಗೆ ಉಂಟಾಗುವ ಒತ್ತಡವನ್ನು ತಡೆಯುತ್ತದೆ. ಪ್ರಕಾಶಮಾನವಾದ ಬೆಳಕು ನೇರವಾಗಿ ಕಣ್ಣಿಗೆ ತಾಗದಂತೆ ರಕ್ಷಿಸುತ್ತದೆ. ಇದರಿಂದ ಕಣ್ಣು ಕೆಂಪಾಗುವುದು, ಉರಿ- ಬಿಸಿಯಾಗುವುದು ಹಾಗೂ ತುರಿಕೆಯಂತಹ ಸಮಸ್ಯೆಗಳನ್ನು ತಡೆಯಬಹುದಾಗಿದೆ.

ಇದನ್ನೂ ಓದಿ:

Health Tips: ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಬೀಟ್​ರೂಟ್ ಉಪಯೋಗದ ಬಗ್ಗೆ ತಿಳಿಯಲೇಬೇಕು..

Health Tips: ನಾಲಿಗೆಯ ಮೇಲಿನ ಈ ಲಕ್ಷಣಗಳು, ದೇಹದ ಆರೋಗ್ಯ ಸ್ಥಿತಿಯ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತವೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada