Health Tips: ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಬೀಟ್​ರೂಟ್ ಉಪಯೋಗದ ಬಗ್ಗೆ ತಿಳಿಯಲೇಬೇಕು..

ಬಾಹ್ಯ ನಾಳೀಯ (Peripheral Vascular) ಕಾಯಿಲೆಗಳು ಅಂದರೆ ಕಾಲು, ತೋಳುಗಳು, ಹೊಟ್ಟೆ, ಕಿಡ್ನಿಗಳಿಗೆ ರಕ್ತ ಸಾಗಿಸುವ ನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಬೀಟ್​ರೂಟ್ ಜ್ಯೂಸ್​ ತುಂಬ ಅನುಕೂಲ.

Health Tips: ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಬೀಟ್​ರೂಟ್ ಉಪಯೋಗದ ಬಗ್ಗೆ ತಿಳಿಯಲೇಬೇಕು..
ಬೀಟ್​ರೂಟ್​ ಜ್ಯೂಸ್​
Follow us
TV9 Web
| Updated By: Lakshmi Hegde

Updated on:Jul 21, 2021 | 8:06 AM

ಬೀಟ್​ರೂಟ್ (Beetroot)​ನಿಂದ ಉಪಯೋಗಗಳು ಹತ್ತಾರು. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡುವಲ್ಲಿಂದ ಹಿಡಿದು, ಸೌಂದರ್ಯ ವೃದ್ಧಿಯವರೆಗೆ ಹಲವು ಉಪಯೋಗಗಳು ಈ ಬೀಟ್​ರೂಟ್​ನಿಂದ ಇವೆ. ಇದೀಗ ಬೀಟ್​ರೂಟ್​ಗೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಶಕ್ತಿಯೂ ಇದೆ ಎಂಬುದು ಹೊಸದೊಂದು ಅಧ್ಯಯನದಿಂದ ಗೊತ್ತಾಗಿದೆ. ಈ ಬಗ್ಗೆ ಜರ್ನಲ್ ಆಫ್​ ನ್ಯೂಟ್ರಿಷಿಯನ್ ವರದಿ ಮಾಡಿದೆ. ಪ್ರತಿದಿನ ನಿಯಮಿತವಾಗಿ ಒಂದು ಗ್ಲಾಸ್​ ಬೀಟ್​ರೂಟ್​ ಜ್ಯೂಸ್​ ಕುಡಿಯುವುದಿಂದ ಬ್ಲಡ್​ ಪ್ರೆಷರ್​ (ರಕ್ತದ ಒತ್ತಡ) ನಿಯಂತ್ರಣಕ್ಕೆ ಬರುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದ್ದಾಗಿ ಹೇಳಲಾಗಿದೆ. ಅಂದರೆ ಕೆಲವರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ರಕ್ತದೊತ್ತಡ ಇದ್ದು, ಔಷಧದಿಂದಲೂ ಅದು ನಿಯಂತ್ರಣ ಆಗುವ ಹಂತ ಕಳೆದುಹೋಗಿರುತ್ತದೆ. ಅಂಥವರು ಪ್ರತಿನಿತ್ಯ ಒಂದು ಗ್ಲಾಸ್​ ಬೀಟ್​ರೂಟ್ ಜ್ಯೂಸ್​ ಕುಡಿದರೆ ಕ್ರಮೇಣ ರಕ್ತದೊತ್ತಡ ನಿಯಂತ್ರಣವಾಗುತ್ತದೆ ಎಂಬುದನ್ನು ಅಧ್ಯಯನ ಸಾಬೀತುಪಡಿಸಿದ್ದಾಗಿ ಜರ್ನಲ್​ ಆಫ್​ ಹೈಪರ್​ಟೆನ್ಷನ್​ ಕೂಡ ವರದಿ ಮಾಡಿದೆ.

ಹಾಗೇ ಇನ್ನೊಂದು ಅಧ್ಯಯನದ ಬಗ್ಗೆ ಜರ್ನಲ್​ ಆಫ್​ ಅಪ್ಲೈಡ್​ ಸೈಕಾಲಜಿ ವರದಿ ಮಾಡಿದ್ದು ಅದರಲ್ಲಿ, ಬಾಹ್ಯ ನಾಳೀಯ (Peripheral Vascular) ಕಾಯಿಲೆಗಳು ಅಂದರೆ ಕಾಲು, ತೋಳುಗಳು, ಹೊಟ್ಟೆ, ಕಿಡ್ನಿಗಳಿಗೆ ರಕ್ತ ಸಾಗಿಸುವ ನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಬೀಟ್​ರೂಟ್ ಜ್ಯೂಸ್​ ತುಂಬ ಅನುಕೂಲ ಎಂದು ಹೇಳಿದೆ.

ಅಧಿಕರಕ್ತದೊತ್ತಡವನ್ನು ಬೀಟ್​ರೂಟ್​ ಹೇಗೆ ಕಡಿಮೆ ಮಾಡುತ್ತದೆ? ಬೀಟ್​ರೂಟ್​ನಲ್ಲಿ ಇರುವ ನೈಟ್ರಿಕ್ ಆಕ್ಸೈಡ್​ ಅಂಶದಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ಅಧ್ಯಯನಗಳು ಹೇಳಿವೆ. ಈ ನೈಟ್ರಿಕ್​ ಆಕ್ಸೈಡ್​ ಒಂದು ಅಣು ಆಗಿದ್ದು, ದೇಹದಾದ್ಯಂತ ಸಂಕೇತಗಳನ್ನು ರವಾನಿಸುತ್ತದೆ ಮತ್ತು ದೇಹದಲ್ಲಿ ಕೋಶಗಳು ಪರಸ್ಪರ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಬೀಟ್​ರೂಟ್​ನಲ್ಲಿರುವ ಉತ್ಕರ್ಷಣ ನಿರೋಧಕಗಳು (antioxidants) ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತವೆ ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸುತ್ತವೆ ಎಂದು ಡಿ.ಕೆ.ಪ್ರಕಾಶನದ ಹೀಲಿಂಗ್​ ಆಫ್​ ಫುಡ್ ಪುಸ್ತಕದಲ್ಲಿ ಬರೆಯಲಾಗಿದೆ. ಹಾಗೇ ಇದರಲ್ಲಿರುವ ಬಿ ವಿಟಮಿನ್​ಗಳು ನರಗಳ ಕಾರ್ಯವನ್ನು ಸುಗಮಗೊಳಿಸುತ್ತವೆ. ಇದರಿಂದಾಗಿ ಹೃದಯ ಬಡಿತವೂ ನಿಯಮಿತವಾಗಿ ಆಗುತ್ತದೆ. ಬೀಟ್​ರೂಟ್​​ನಲ್ಲಿರುವ ಕಬ್ಬಿಣಾಂಶ ಮತ್ತು ಉತ್ಕರ್ಷಣ ನಿರೋಧಕಗಳು ರಕ್ತ ಶುದ್ಧೀಕರಣವನ್ನು ಸುಗಮಗೊಳಿಸಿ, ಅನೀಮಿಯಾವನ್ನು ತಡೆಗಟ್ಟುತ್ತವೆ. ರಕ್ತಸಂಚಾರ ಸುಗಮವಾದಷ್ಟೂ ರಕ್ತದೊತ್ತಡ ಸಹಜವಾಗಿಯೇ ನಿಯಂತ್ರಿತವಾಗಿರುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್​ರೂಟ್​ ಅತ್ಯುತ್ತಮ ತರಕಾರಿ ಎಂದು ಹಲವು ಅಧ್ಯಯನಗಳು ಹೇಳಿವೆ.

ಇದನ್ನೂ ಓದಿ: ಸಬ್ಬಸಿಗೆ ಸೊಪ್ಪು: ಮಲಬದ್ಧತೆ ಸಮಸ್ಯೆಯ ನಿವಾರಣೆಯ ಜತೆಗೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿಯಿರಿ

Health tips Beetroot Can help to control hypertension

Published On - 8:05 am, Wed, 21 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ