AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಯುವತಿಯರಲ್ಲಿ ಆರೋಗ್ಯ ಸಮಸ್ಯೆ; ಜೀವನಶೈಲಿ ಸುಧಾರಣೆಗೆ ತಜ್ಞರ ಸಲಹೆಗಳು ಇಲ್ಲಿವೆ

ಯುವತಿಯರು ಹೆಚ್ಚು ಮೊಬೈಲ್​ಗೆ ಅಂಟಿಕೊಂಡಿದ್ದಾರೆ. ಇದು ಅವರ ಮಾನಸಿಕ ಸ್ಥಿತಿಯನ್ನು ಹಾಳು ಮಾಡುತ್ತಿದೆ. ಮೊದಲೆಲ್ಲಾ ಮನೆಯವರೊಡನೆ ಬೆರೆಯುವ ಅಭ್ಯಾಸ ಇರುತ್ತಿತ್ತು. ನಾಲ್ಕು ಜನರೊಡನೆ ಮಾತಾಡುವ ಮೂಲಕ ಮನಸ್ಸು ನಿರಾಳ ಅನ್ನಿಸುತ್ತಿತ್ತು. ಆದರೆ ಈಗಿನ ಯವ ಪೀಳಿಗೆ ಒಬ್ಬಂಟಿಯಾಗಿರಲು ಹೆಚ್ಚು ಇಷ್ಟಪಡುತ್ತಾರೆ. ಇದು ಹೆಣ್ಣು ಮಕ್ಕಳ ಆರೋಗ್ಯ ಪರಿಸ್ಥಿತಿಯನ್ನು ಹದಗೆಡಿಸುತ್ತಿದೆ.

Women Health: ಯುವತಿಯರಲ್ಲಿ ಆರೋಗ್ಯ ಸಮಸ್ಯೆ; ಜೀವನಶೈಲಿ ಸುಧಾರಣೆಗೆ ತಜ್ಞರ ಸಲಹೆಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
Shruthi Hegde
| Updated By: ganapathi bhat

Updated on:Jul 20, 2021 | 8:35 PM

ಇತ್ತೀಚಿಗಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಒಂದಾದ ಮೇಲೊಂದು ಹುಟ್ಟಿಕೊಳ್ಳುತ್ತಿವೆ. ಯುವತಿಯರ ಆರೋಗ್ಯವಂತೂ ಹೆಚ್ಚು ದುರ್ಬಲಗೊಳ್ಳುತ್ತಿದೆ. ಹೀಗಿರುವಾಗ ಆರೋಗ್ಯ ಸುಧಾರಣೆಯ ಕುರಿತಾಗಿ ಹೆಚ್ಚು ಯೋಚಿಸಲೇಬೇಕು. ಹೊಟ್ಟೆನೋವು, ಮುಟ್ಟಿನ ಸಮಸ್ಯೆ, ದಢೂತಿ ದೇಹ, ಮಾನಸಿಕ ಅಸ್ವಸ್ಥತೆ ಜತೆಗೆ ಅನಗತ್ಯ ಯೋಚನೆಯಿಂದ ರಕ್ತದೊತ್ತಡದಂತಹ ಅನೇಕ ಸಮಸ್ಯೆಗಳು ಕಾಡುತ್ತಿದೆ. ಆಹಾರ ಪದ್ಧತಿ, ಯೋಗ ಮತ್ತು ಆರೋಗ್ಯ ಒಂದಕ್ಕೊಂದು ಸರಪಳಿ ಇದ್ದಂತೆ. ಮಾನಸಿಕ ಸ್ಥಿತಿ ಚೇತರಿಕೆಗೆ ಯೋಗಾಭ್ಯಾಸ ಮುಖ್ಯ. ಯೋಗ ಅಭ್ಯಾಸದಿಂದ ಆರೋಗ್ಯ ಸುಧಾರಿಸುತ್ತದೆ. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಮನಸ್ಸು ಸ್ವಚ್ಛವಾಗಿದ್ದರೆ ಖುಷಿಯಿಂದ ಜೀವನ ಸಾಗಿಸಬಹುದು. ಈ ಕುರಿತಾಗಿ ತಜ್ಞರು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಬೊಜ್ಜು ಕಾಣಿಸಿಕೊಳ್ಳುವುದು, ತಲೆ ಕೂದಲು ಬಿಳಿಯಾಗುವುದು, ಬಹುಬೇಗ ವಯಸ್ಸಾದಂತೆ ಅನಿಸುವುದು, ಚರ್ಮದ ಕಾಂತಿ ಇಲ್ಲದಿರುವುದು ಇವೆಲ್ಲವೂ ಇತ್ತೀಚೆಗೆ ಅಧಿಕವಾಗಿ ಕಂಡು ಬರುತ್ತಿರುವ ಸಮಸ್ಯೆಗಳು. ಪೌಷ್ಟಿಕಾಂಶಯುಕ್ತ ಆಹಾರವೇ ಇವೆಲ್ಲದಕ್ಕೆ ಮದ್ದು. ಇದೊಂದೇ ಅಲ್ಲ ಇದರ ಜತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಯುವತಿಯರು ತಮ್ಮ ಸಮಸ್ಯೆಗಳನ್ನು ನಿವಾರಣ ಮಾಡಿಕೊಳ್ಳಬಹುದು ಎಂದು ನ್ಯೂಟ್ರೀಷಿಯನಿಸ್ಟ್​ ತಜ್ಞರಾದ ವೀಣಾ ಭಟ್​ ಶಿರಸಿ ಟಿವಿ9 ಡಿಜಿಟಲ್ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪೌಷ್ಟಿಕ ಆಹಾರ ಸೇವಿಸಬೇಕು ಎಂದು ನಾವು ಹೇಳುತ್ತೇವೆ. ಆದರೆ ಯಾವುದು ಪೌಷ್ಟಿಕ ಆಹಾರ? ಎಂಬ ಪ್ರಶ್ನೆ ಎಲ್ಲರಲ್ಲಿ ಕೆರಳಿರಬಹುದು. ಹಸಿರು ಸೊಪ್ಪು, ತರಕಾರಿ, ಹಣ್ಣುಗಳು, ಡೈರಿ ಉತ್ಪನ್ನಗಳು ಇವೆಲ್ಲವೂ ಪೌಷ್ಟಿಕಾಂಶಯುಕ್ತ ಆಹಾರ. ಎಲ್ಲಾ ಪದಾರ್ಥಗಳಲ್ಲಿಯೂ ಸಹ ಆರೋಗ್ಯವನ್ನು ಸುಧಾರಿಸುವ ಶಕ್ತಿ ಇದೆ. ಆದರೆ ಕೆಲವರ ದೇಹ ಪ್ರಕೃತಿಗೆ ಅನುಸಾರವಾಗಿ ಅವರ ಆರೋಗ್ಯ ನಿರ್ಧಾವಾಗುತ್ತದೆ. ಯಾವುದೇ ಆಹಾರವಾದರೂ ಅಷ್ಟೇ ಹೆಚ್ಚಾಗಿ ಸೇವಿಸಿದಾಗ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ. ನಿಯಮಿತವಾಗಿ ಆಹಾರ ಸೇವಿಸುವ ಮೂಲಕ ಆರೋಗ್ಯದ ಕಾಳಜಿ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

‘ಕೆಲವರಿಗೆ ಯಾವ ಆಹಾರ ಸೇವಿಸಬೇಕು ಎಂಬುದೇ ಗೊಂದಲ’ ಪೌಷ್ಟಿಕ ಆಹಾರಗಳಲ್ಲಿ ಯಾವ ಅಹಾರ ಸೇವಿಸಬೇಕು ಎಂಬ ಗೊಂದಲ ತುಂಬಾ ಮಹಿಳೆಯರಲ್ಲಿದೆ. ನಿಮ್ಮ ಸುತ್ತ ಮುತ್ತಲು ಏನು ಬೆಳೆಯುತ್ತಿರೋ ಅದೇ ನಿಮ್ಮ ಆಹಾರವಾಗಿರಲಿ. ಅಂದರೆ ಕೆಲವು ಪ್ರದೇಶಗಳಲ್ಲಿ ಹೆಚ್ಚು ಜೋಳಗಳನ್ನು ಬೆಳೆದರೆ ಇನ್ನು ಕೆಲವೆಡೆ ಹಣ್ಣುಗಳು, ತರಕಾರಿಗಳನ್ನು ಬೆಳೆಯುತ್ತಾರೆ. ಆಹಾರವನ್ನು ಬೆಳೆಯಲು ಒಳ್ಳೆಯ ಜಾಗವಿರಬೇಕು, ಜತೆಗೆ ಉತ್ತಮ ವಾತಾವಣವಿರಬೇಕು. ಅಂದಾಗ ಮಾತ್ರ ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುತ್ತದೆ. ಅದೇ ರೀತಿ ಆರೋಗ್ಯವೂ ಸಹ. ನಾವು ವಾಸಿಸುತ್ತಿರುವ ಪ್ರದೇಶಕ್ಕೆ ಅನುಸಾರವಾಗಿ ಇರಬೇಕು. ನಮ್ಮ ಆರೋಗ್ಯವನ್ನು ನಿಯಂತ್ರಿಸುವ ಶಕ್ತಿ ನಮ್ಮಲ್ಲಿರಬೇಕು. ಹಾಗಾದಾಗ ದೇಹ ಅಥವಾ ಆರೋಗ್ಯ ನಾವು ಹೇಳಿದಂತೆ ಕೇಳುತ್ತದೆ ಜತೆಗೆ ಹಿಡಿತದಲ್ಲಿರುತ್ತದೆ.

ಯುವತಿಯರಲ್ಲಿ ಬೊಜ್ಜಿನ ಸಮಸ್ಯೆ ಬೊಜ್ಜು ನಿವಾರಣೆಗೆ ವ್ಯಾಯಾಮ ಅತ್ಯಗತ್ಯ. ನಮ್ಮ ದೇಹಕ್ಕೆ ಬೇಕಾದ ಕ್ಯಾಲೋರಿ ಅಥವಾ ಕೊಲೆಸ್ಟ್ರಾಲ್​ನ ಪೂರೈಕೆ ಹೆಚ್ಚಾದಾಗ ಬೊಜ್ಜಾಗಿ ಪರಿಣಮಿಸುತ್ತದೆ. ಇದು ದೇಹದ ಸುಸ್ತು, ಆಯಾಸಕ್ಕೆ ಕಾರಣವಾಗುತ್ತದೆ. ಹಾಗಾದಾಗ ದೇಹ ದುರ್ಬಲಗೊಳ್ಳುತ್ತದೆ. ಪುರುಷರಿಗಿಂತಲೂ ಮಹಿಳೆಯರಲ್ಲಿ ಬೊಜ್ಜು ಹೆಚ್ಚಾಗಿ ಕಂಡು ಬರುತ್ತದೆ. ಕಾಲಿನ ತೊಡೆಗಳು, ಹೊಟ್ಟೆ, ಕುತ್ತಿಗೆ ಭಾಗ, ಕೈ ಹೀಗೆ ದೇಹದ ದುರ್ಬಲತೆಗೆ ಕಾರಣವಾಗುತ್ತದೆ. ಮಹಿಳೆಯರು ನನ್ನ ಬಳಿ ಪರೀಕ್ಷೆಗೆ ಬಂದಾಗ ದೇಹದ ಒಂದೊಂದೇ ಭಾಗದ ಬೊಜ್ಜನ್ನು ಕರಗಿಸಬಹುದೇ? ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಇದು ಮಾತ್ರ ಸಾಧ್ಯವೆ ಇಲ್ಲ. ವ್ಯಾಯಾಮ ಮಾಡುವ ಮೂಲಕ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಆದರೆ ನಿರ್ದಿಷ್ಟವಾದ ಒಂದು ಭಾಗದ ಬೊಜ್ಜನ್ನು ಕರಗಿಸಲು ಸಾಧ್ಯವೇ ಇಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಮಾನಸಿಕ ಚಿಂತೆ ಯುವತಿಯರು ಹೆಚ್ಚು ಮೊಬೈಲ್​ಗೆ ಅಂಟಿಕೊಂಡಿದ್ದಾರೆ. ಇದು ಅವರ ಮಾನಸಿಕ ಸ್ಥಿತಿಯನ್ನು ಹಾಳು ಮಾಡುತ್ತಿದೆ. ಮೊದಲೆಲ್ಲಾ ಮನೆಯವರೊಡನೆ ಬೆರೆಯುವ ಅಭ್ಯಾಸ ಇರುತ್ತಿತ್ತು. ನಾಲ್ಕು ಜನರೊಡನೆ ಮಾತಾಡುವ ಮೂಲಕ ಮನಸ್ಸು ನಿರಾಳ ಅನ್ನಿಸುತ್ತಿತ್ತು. ಆದರೆ ಈಗಿನ ಯವ ಪೀಳಿಗೆ ಒಬ್ಬಂಟಿಯಾಗಿರಲು ಹೆಚ್ಚು ಇಷ್ಟಪಡುತ್ತಾರೆ. ಯಾವುದೇ ಆಟವಾಡುವುದಿಲ್ಲ, ಜನರೊಡನೆ ಬೆರೆಯುವುದಿಲ್ಲ. ಇದರಿಂದ ಮಾನಸಿಕ ಸ್ಥಿತಿ ಬದಲಾಗುತ್ತದೆ. ಹೆಚ್ಚು ಸೂಕ್ಷ್ಮರಾಗುತ್ತಾರೆ. ಹೆಚ್ಚು ಸಿಟ್ಟು, ಕೋಪ, ಉದ್ವೇಗ ಕಂಡು ಬರುತ್ತದೆ. ಇದಕ್ಕೆಲ್ಲಾ ಪರಿಹಾರವೆಂದರೆ ಯೋಗಾಸನ, ಧ್ಯಾನ. ಪ್ರತಿನಿತ್ಯ ಏಕಾಗ್ರತೆಯಿಂದ ಧ್ಯಾನ ಮಾಡುವ ಅಭ್ಯಾಸದಿಂದ ಮಾನಸಿಕ ಸ್ಥಿತಿ ಸುಧಾರಣೆ ಮಾಡಿಕೊಳ್ಳಬಹುದಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:

Women Health: ಯುವತಿಯರಿಗೆ ತಲೆ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ? ಪರಿಹಾರ ತಿಳಿಯಿರಿ

Women Health: ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಅನಿಯಮಿತ ಮುಟ್ಟಿನ ಸಮಸ್ಯೆಗೆ ಆಳ್ವಿ ಬೀಜ ಉತ್ತಮ ಪರಿಹಾರವಾಗಿದೆ

Published On - 8:33 pm, Tue, 20 July 21

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ