Women Health: ಯುವತಿಯರಿಗೆ ತಲೆ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ? ಪರಿಹಾರ ತಿಳಿಯಿರಿ

ಜಂಕ್​ಫುಡ್​ಗಳು, ರಸ್ತೆ ಬದಿಯಲ್ಲಿನ ತಿಂಡಿಗಳು, ವಿಪರೀತ ಚಾಟ್ಸ್​ ಐಟಮ್ಸ್​ಗಳ ಸೇವನೆ, ಚಾಕಲೇಟ್, ಹೊಟ್ಟೆ ಒಣಗುವ ತಿಂಡಿಗಳಿಂದ ಆರೋಗ್ಯವು ಹದಗೆಡುತ್ತಿದೆ. ಇದರಿಂದ ಆರೋಗ್ಯದ ಸಮಸ್ಯೆಯಲ್ಲಿ ಒಂದಾದ ಕೂದಲುದುರುವ ಸಮಸ್ಯೆ ಯುವತಿಯರಲ್ಲಿ ಹೆಚ್ಚು ಕಾಡುತ್ತಿದೆ.

Women Health: ಯುವತಿಯರಿಗೆ ತಲೆ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ? ಪರಿಹಾರ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
| Updated By: preethi shettigar

Updated on: Jul 19, 2021 | 7:19 AM

ಬದಲಾಗುತ್ತಿರುವ ವಾತಾವರಣದಿಂದ ಹಾಗೂ ಈಗಿನ ಯುವಜನತೆ ಸೇವಿಸುತ್ತಿರುವ ಆಹಾರ ಕ್ರಮದಿಂದಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಯುವತಿಯರಿಗೆ ತಲೆ ಕೂದಲು ಎಂದರೆ ಸ್ವಲ್ಪ ಹೆಚ್ಚು ಕಾಳಜಿ. ಸುಂದರವಾದ ಕಪ್ಪು ಕೂದಲುಗಳಿಂದ ಅಲಂಕಾರ ಮಾಡಿಕೊಳ್ಳುತ್ತಾರೆ. ಫ್ರೀ ಹೇರ್​, ಉದ್ದವಾದ ಜಡೆ ಹೀಗೆ ನಾನಾ ವಿನ್ಯಾಸದ ಮೂಲಕ ಸುಂದರವಾಗಿ ಕಾಣಲು ಹೆಚ್ಚು ಇಷ್ಟಪಡುತ್ತಾರೆ. ಆದರೆ ಈಗಿನ ಯುವತಿಯರಲ್ಲಿ ಅಥವಾ ಚಿಕ್ಕ ವಯಸ್ಸಿನಲ್ಲಿರುವ ಹೆಣ್ಣು ಮಕ್ಕಳಲ್ಲಿ ಕಾಡುತ್ತಿರುವ ಸಮಸ್ಯೆಯೆಂದರೆ ತಲೆ ಕೂದಲು ಉದುರುವ ಸಮಸ್ಯೆ.

ಜಂಕ್​ಫುಡ್​ಗಳು, ರಸ್ತೆ ಬದಿಯಲ್ಲಿನ ತಿಂಡಿಗಳು, ವಿಪರೀತ ಚಾಟ್ಸ್​ ಐಟಮ್ಸ್​ಗಳ ಸೇವನೆ, ಚಾಕಲೇಟ್, ಹೊಟ್ಟೆ ಒಣಗುವ ತಿಂಡಿಗಳಿಂದ ಆರೋಗ್ಯವು ಹದಗೆಡುತ್ತಿದೆ. ಇದರಿಂದ ಆರೋಗ್ಯದ ಸಮಸ್ಯೆಯಲ್ಲಿ ಒಂದಾದ ಕೂದಲುದುರುವ ಸಮಸ್ಯೆ ಯುವತಿಯರಲ್ಲಿ ಹೆಚ್ಚು ಕಾಡುತ್ತಿದೆ. ನಮ್ಮ ಸುತ್ತಮುತ್ತಲು ಸಿಗುವ ಮನೆಮದ್ದುಗಳಿಂದಲೇ ಅದೆಷ್ಟೋ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಹಾಗಿರುವಾಗ ಈಗಲೇ ಸಮಸ್ಯೆ ಕಂಡುಕೊಳ್ಳುವುದು ಉತ್ತಮ.

ಆಹಾರ ಕ್ರಮ ಮಕ್ಕಳಲ್ಲಿ ಪೌಷ್ಠಿಕ ಆಹಾರದ ಕೊರತೆ ಕಂಡು ಬಂದಾಗ ಕೂದಲು ಉದುರುವ ಸಮಸ್ಯೆ ಕಾಡುತ್ತದೆ. ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳುವುದು ಅತ್ಯಶ್ಯಕ. ಜಂಕ್​ಫುಡ್​ಗಳನ್ನು ತ್ಯಜಿಸುವ ಮೂಲಕ ಆದಷ್ಟು ಹೆಚ್ಚು ಹಸಿರು ಸೊಪ್ಪು, ತರಕಾರಿ ಜತೆಗೆ ಹಣ್ಣುಗಳನ್ನು ಸೇವಿಸುವುದು ಉತ್ತಮ.

ಅತಿಯಾದ ಟೆನ್ಷನ್​ ಯುವತಿಯರು ಸಮಸ್ಯೆಯ ಬಗ್ಗೆ ಚಿಂತಿಸುವುದು ಹೆಚ್ಚು. ಚಿಂತೆ ಆರೋಗ್ಯವನ್ನು ಹಾಳು ಮಾಡುತ್ತದೆ. ಇದು ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ. ಯುವತಿಯರು ಹೆಚ್ಚು ಸೂಕ್ಷ್ಮವಾಗಿರುತ್ತಾರೆ. ಜತೆಗೆ ಭಯ, ಆತಂಕ ಹೆಚ್ಚು. ಇದು ಅವರ ಆರೋಗ್ಯ ಸ್ಥಿತಿಯನ್ನು ಬದಲಾಯಿಸುತ್ತದೆ. ವಿಪರೀತವಾಗಿ ಟೆನ್ಷನ್​ ಮಾಡಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.

ವ್ಯಾಯಾಮ ನಿಯಮಿತವಾದ ವ್ಯಾಯಾಮ ಆರೋಗ್ಯವನ್ನು ಸುಧಾರಿಸುತ್ತದೆ. ಜತೆಗೆ ರಕ್ತ ಸಂಚಾರ ಸುಲಭವಾಗುತ್ತದೆ. ಈ ಮೂಲಕ ನಿಮ್ಮ ಆರೋಗ್ಯ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಕೇವಲ ಕೂದಲುದುರುವ ಸಮಸ್ಯೆಗೆ ಮಾತ್ರವಲ್ಲದೇ ಆರೋಗ್ಯವನ್ನೂ ಸುಧಾರಿಸಿಕೊಳ್ಳಬಹುದು.

ಮಸಾಜ್​ ಮಾಡಿ ವಾರಕ್ಕೊಮ್ಮೆ ತಲೆ ಸ್ನಾನ ಮಾಡುವ ಅಭ್ಯಾಸ ಒಳ್ಳೆಯದು. ಧೂಳಿನ ಕಣಗಳು ತಲೆ ಕೂದಲಿನ ಮಧ್ಯದಲ್ಲಿ ಸಿಲುಕಿಕೊಂಡು ಕೂದಲುದುರುವ ಸಮಸ್ಯೆಯನ್ನು ತಂದೊಡ್ಡಬಹುದು. ಜತೆಗೆ ಪ್ರತಿ ವಾರವೂ ತಲೆ ಸ್ನಾನ ಮಾಡಿವ ಮುನ್ನ ನೈಸರ್ಗಿಕವಾಗಿ ಸಿಗುವ ಅಲೋವೆರಾ ಜೆಲ್​ ಹಚ್ಚಿ ಮಸಾಜ್​ ಮಾಡಿ. ಕೂದಲು ದಪ್ಪವಾಗಿ ಬೆಳೆಯುವುದರ ಜತೆಗೆ ಕಪ್ಪು ಕೂದಲಿಗೆ ಸಹಾಯಕವಾಗುತ್ತದೆ. ಜತೆಗೆ ತಲೆಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುವುದರಿಂದ ಹೊಸ ಕೂದಲು ಹುಟ್ಟಿಕೊಳ್ಳಲು ಸಹಾಯಕವಾಗಿದೆ.

ದಾಸವಾಳದ ಎಣ್ಣೆ ಕೆಂಪು ದಾಸವಾಳದಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೂದಲು ವೃದ್ಧಿಸುತ್ತದೆ. ತಲೆನೋವು, ತಲೆಯಲ್ಲಿ ಹೊಟ್ಟು ನಿವಾರಣೆಗೆ ಇದು ಸಹಾಯಕವಾಗಿದೆ. ಹೆಣ್ಣುಮಕ್ಕಳು ಸುಂದರವಾದ ದಪ್ಪನೇಯ ಉದ್ದ ಜಡೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಹೀಗಿರುವಾಗ ಇವುಗಳನ್ನು ನಿಮ್ಮ ದಿನನಿತ್ಯದ ಅಭ್ಯಾಸದಲ್ಲಿ ತೊಡಗಿಸಿಕೊಂಡರೆ ನಿಮ್ಮ ಕೂದಲು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಇದನ್ನೂ ಓದಿ:

Hair Care Tips: ನಿಮಗೆ ಉದ್ದ ಕೂದಲು ಇಷ್ಟನಾ? ಆಲಿವ್ ಎಣ್ಣೆಯನ್ನು ಹೀಗೆ ಬಳಸಿ

Beauty Tips: ಕೂದಲು-ಮುಖದ ಸೌಂದರ್ಯ ಹೆಚ್ಚಿಸುವ ಬೀಟ್​ರೂಟ್​; ಬಳಸುವ ವಿಧಾನ ಇಲ್ಲಿದೆ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ