AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ಕೂದಲು-ಮುಖದ ಸೌಂದರ್ಯ ಹೆಚ್ಚಿಸುವ ಬೀಟ್​ರೂಟ್​; ಬಳಸುವ ವಿಧಾನ ಇಲ್ಲಿದೆ

ಕ್ಯಾಲ್ಸಿಯಂ, ಮೆಗ್ನೀಸಿಯಮ್ ಹಾಗು ಪೊಟಾಶಿಯಂ ಅಂಶಗಳನ್ನು ಹೊಂದಿರುವ ಬೀಟ್ ರೋಟ್​ನಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುದು. ಬೀಟ್ ರೋಟ್ ಕೇವಲ ರಕ್ತವನ್ನು ಹೆಚ್ಚಿಸುವುದು ಮಾತ್ರವಲ್ಲದೆ ದಟ್ಟವಾಗಿ ತಲೆ ಕೂದಲು ಬೆಳೆಯಲು ಹೆಚ್ಚು ಪ್ರಯೋಜನಕಾರಿಯಾಗಿದೆ.

Beauty Tips: ಕೂದಲು-ಮುಖದ ಸೌಂದರ್ಯ ಹೆಚ್ಚಿಸುವ ಬೀಟ್​ರೂಟ್​; ಬಳಸುವ ವಿಧಾನ ಇಲ್ಲಿದೆ
ಬೀಟ್ ರೋಟ್ ಮಾಸ್ಕ್
TV9 Web
| Edited By: |

Updated on: Jun 21, 2021 | 9:46 AM

Share

ತರಕಾರಿ ಎಂದರೆ ಜನ ಮೈ ಕೊಡವುತ್ತಾರೆ. ಹಾಗಂತ ಎಲ್ಲರೂ ತರಕಾರಿಯನ್ನು ಇಷ್ಟ ಪಡಲ್ಲ ಅಂತ ಅಲ್ಲ. ಕೆಲವರಿಗೆ ತರಕಾರಿ ಎಂದರೆ ತುಂಬಾ ಇಷ್ಟ. ಮಾಂಸ ಪ್ರಿಯರಿಗೆ ಮಾತ್ರ ತರಕಾರಿ ಸ್ವಲ್ಪ ದೂರ. ತರಕಾರಿ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶವನ್ನು ನೀಡುತ್ತದೆ. ಆದರೆ  ಇರುವ ಎಲ್ಲ ತರಕಾರಿಯನ್ನು ಇಷ್ಟಪಟ್ಟು ತಿನ್ನುವುದಿಲ್ಲ. ಈ ಸಾಲಿಗೆ ಬೀಟ್ ರೂಟ್​ ಕೂಡಾ ಸೇರಿದೆ. ಆದರೆ ಬೀಟ್ ರೂಟ್​​ನ  ಪ್ರಯೋಜಗಳು ಜನರಿಗೆ ಇನ್ನು ತಿಳಿದೇ ಇಲ್ಲ. ಆ ಪ್ರಯೋಜನಗಳನ್ನು ತಿಳಿದರೆ ನೀವು ಬೀಟ್​ರೂಟ್​​ನ್ನು ದೂರ ಇಡುವುದೇ ಇಲ್ಲ.

ಕ್ಯಾಲ್ಸಿಯಂ, ಮೆಗ್ನೀಸಿಯಮ್ ಹಾಗು ಪೊಟ್ಯಾಶಿಯಂ ಅಂಶಗಳನ್ನು ಹೊಂದಿರುವ ಬೀಟ್ ರೂಟ್​​​ನಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುದು. ಬೀಟ್ ರೂಟ್​​​ ಕೇವಲ ರಕ್ತವನ್ನು ಹೆಚ್ಚಿಸುವುದು ಮಾತ್ರವಲ್ಲದೆ ದಟ್ಟವಾಗಿ ತಲೆ ಕೂದಲು ಬೆಳೆಯಲು ಹೆಚ್ಚು ಪ್ರಯೋಜನಕಾರಿಯಾಗಿದೆ. ಕೂದಲ ಆರೋಗ್ಯ  ಮತ್ತು ಮುಖದ ಕಾಂತಿ ಹೆಚ್ಚಿಸಲು ಬೀಟ್ ರೂಟ್​​​ ಪ್ಯಾಕ್​ನ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ನಾವಿಲ್ಲಿ ತಿಳಿಸಿದ್ದೇವೆ ನೋಡಿ..

ಬೀಟ್ ರೂಟ್​​​ ಪ್ಯಾಕ್​ನ ಸಿದ್ಧಪಡಿಸಲು ಬೀಟ್ ರೂಟ್​​​, ಮೊಸರು, ಕಡಲೇ ಹಿಟ್ಟು ಮತ್ತು ನಿಂಬೆ ರಸ ಬೇಕಾಗುತ್ತದೆ. ಮೊದಲು ಬೀಟ್ ರೂಟ್​​​ನ ತುರಿಯಬೇಕು. ತುರಿದ ಬಳಿಕ ಅದರಿಂದ ರಸ ತೆಗೆದು ಅದಕ್ಕೆ , ಮೊಸರು, ಕಡಲೇ ಹಿಟ್ಟು ಮತ್ತು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ಮುಖಕ್ಕೆ ಹಚ್ಚಬೇಕು. ಇನ್ನು ತಲೆ ಕೂದಲಿಗೆ ಪ್ಯಾಕ್​ನ ತಯಾರಿಸುವಾಗ ಕಡಲೇ ಹಿಟ್ಟು ಬಳಸಬಾರದು. ನಿಂಬೆ ರಸ ಚರ್ಮ ಮತ್ತು ಕೂದಲನ್ನು ಶುದ್ಧಗೊಳಿಸಿದರೆ, ಮೊಸರು ಮುಖದ ಕಾಂತಿ ಹೆಚ್ಚಿಸುವುದು.

ಬೀಟ್ ರೂಟ್ ಫೇಸ್​ಪ್ಯಾಕ್​  ಮಾಡಿಕೊಳ್ಳುವುದು ಹೇಗೆ? * ಮೊದಲು ಮುಖವನ್ನು ತಣ್ಣೀರಿನಿಂದ ತೊಳೆಯಬೇಕು. ಒಂದು ಶುದ್ಧವಾದ ಬಟ್ಟೆಯಿಂದ ಚೆನ್ನಾಗಿ ಒರೆಸಬೇಕು. ಮುಖದಲ್ಲಿದ್ದ ನೀರು ಒಣಗಿದ ಬಳಿಕ ಸಿದ್ಧವಾಗಿರುವ ಬೀಟ್ ರೂಟ್​ ಫೇಸ್ ಪೇಸ್ಟ್​ ಹಚ್ಚಬೇಕು. ಸ್ವಲ್ಪ ಸಮಯ ಕೈಯಿಂದ ವೃತ್ತಾಕಾರವಾಗಿ ಮುಖಕ್ಕೆ ಮಸಾಜ್ ಮಾಡಬೇಕು. ಮಸಾಜ್ ಮಾಡಿ 20 ರಿಂದ 25 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.

ಕೂದಲು ಪ್ಯಾಕ್​ ಹೇಗೆ? * ಮೊದಲು ಕೂದಲಿಗೆ ಸ್ವಲ್ಪ ನೀರನ್ನು ಸಿಂಪಡಿಸಬೇಕು. ನಂತರ ಸ್ವಲ್ಪ ಸ್ವಲ್ಪ ಕೂದಲಿಗೆ ಸಿದ್ಧವಾಗಿರುವ ಬೀಟ್ ರೂಟ್​ ಪೇಸ್ಟ್​ನ್ನು ಹಚ್ಚಬೇಕು. ಈ ಪೇಸ್ಟ್​​ನ್ನು ಕೂದಲು ಬುಡದಿಂದ ತುದಿಯವರೆಗೂ ಹಚ್ಚಿ. ತಲೆಯ ಎಲ್ಲ ಕೂದಲಿಗೆ ಚೆನ್ನಾಗಿ ಹಚ್ಚಬೇಕು. ಸ್ವಲ್ಪ ಹೊತ್ತಿನ ಬಳಿಕ ನೀರಿನಿಂದ ತೊಳೆಯಿರಿ. ತೊಳೆಯುವಾಗ ನಿಮಗೆ ಸರಿ ಹೊಂದುವ ಶಾಂಪೂ ಮತ್ತು ಕಂಡಿಷನರ್​ನ ಬಳಸಿ.

ಇದನ್ನೂ ಓದಿ

Health Tips: ಸೈನಸ್ ಸಮಸ್ಯೆಯ ನಿವಾರಣೆಗೆ ಸರಳ ಉಪಾಯ; ಮನೆಯಲ್ಲೇ ತಯಾರಿಸಬಹುದಾದ ಔಷಧಿಗಳ ಬಗ್ಗೆ ಗಮನಹರಿಸಿ

Health Tips: ಆಸಿಡಿಟಿ ನಿವಾರಣೆಗೆ ಯೋಗಾಭ್ಯಾಸ; ಯಾವ ಯೋಗ ಭಂಗಿ ಸೂಕ್ತ?

(How to make Beetroot Mask for healthy skin and hair)