Neck Pain: ಕುತ್ತಿಗೆ ನೋವು ಜೀವವನ್ನೇ ಹಿಂಡುತ್ತಿದೆಯೇ? ಇಲ್ಲಿದೆ ಸಮಸ್ಯೆಗೆ ಪರಿಹಾರ
ಕುತ್ತಿಗೆಯ ಮೇಲಿನ ಸ್ನಾಯುಗಳ ಸೆಳೆತ, ಬೆನ್ನು ಮೂಳೆ ಅಥವಾ ನರಗಳ ಮೇಲಿನ ಒತ್ತಡದಿಂದ ನೋವು ಕಾಣಿಸಿಕೊಳ್ಳುವುದು ಸಹಜ. ಕುತ್ತಿಗೆಯನ್ನು ಹೆಚ್ಚು ಅಲ್ಲಾಡಿಸಿದಾಗ ಅಥವಾ ಒಂದೇ ಕಡೆಗೆ ಬಾಗಿದ ಸಮಯದಲ್ಲಿ ನರ ಹಿಡಿದುಕೊಳ್ಳುವುದರಿಂದ ಕುತ್ತಿಗೆ ನೋವು ಕಂಡು ಬರುತ್ತದೆ. ಈ ಸಮಸ್ಯೆಗೆ ಪರಿಹಾರ ಇಲ್ಲಿದೆ.
ಈಗಿನ ಯುವ ಪೀಳಿಗೆಯಲ್ಲಂತೂ ಪದೇ ಪದೇ ಕುತ್ತಿಗೆ ನೋವು ಸಮಸ್ಯೆ ಕಾಡುತ್ತಿದೆ. ನರ ಹಿಡಿದುಕೊಳ್ಳುವುದು, ಕುತ್ತಿಗೆ ಸೋತಂತೆ ಅನುಭವವಾಗುವುದು ಇದರಿಂದ ಭುಜ ನೋವು ಕಾಡುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದೇ ಕಡೆ ಕುತ್ತಿಗೆ ಬಾಗಿಸಿ ನೋಡುವುದರಿಂದ ಕುತ್ತಿಗೆ ನೋವು ಕಾಡುತ್ತದೆ. ಇದರಿಂದ ಹೆಚ್ಚಿನವರಿಗೆ ತಲೆ ತಿರುಗುವ ಸಮಸ್ಯೆ ಕಾಡುತ್ತದೆ. ಹೀಗಿರುವಾಗ ಕುತ್ತಿಗೆ ನೋವು ಸಮಸ್ಯೆಯಿಂದ ಆದಷ್ಟು ಬೇಗ ಪರಿಹಾರ ಪಡೆಯುವ ವಿಧಾನವನ್ನು ತಿಳಿಯಿರಿ.
ಕುತ್ತಿಗೆಯ ಮೇಲಿನ ಸ್ನಾಯುಗಳ ಸೆಳೆತ, ಬೆನ್ನು ಮೂಳೆ ಅಥವಾ ನರಗಳ ಮೇಲಿನ ಒತ್ತಡದಿಂದ ನೋವು ಕಾಣಿಸಿಕೊಳ್ಳುವುದು ಸಹಜ. ಕುತ್ತಿಗೆಯನ್ನು ಹೆಚ್ಚು ಅಲ್ಲಾಡಿಸಿದಾಗ ಅಥವಾ ಒಂದೇ ಕಡೆಗೆ ಬಾಗಿದ ಸಮಯದಲ್ಲಿ ನರ ಹಿಡಿದುಕೊಳ್ಳುವುದರಿಂದ ಕುತ್ತಿಗೆ ನೋವು ಕಂಡು ಬರುತ್ತದೆ. ಹಾಗಿರುವಾಗ ಈ ಸಮಸ್ಯೆಯಿಂದ ಪರಿಹಾರ ಪಡೆಯುವುದು ಹೇಗೆ ಎಂಬುದರ ಕೆಲವು ಟಿಪ್ಸ್ಗಳು ಹೀಗಿವೆ.
*ಕುತ್ತಿಗೆ ನೋವಿರುವ ಭಾಗಕ್ಕೆ ಐಸ್ ಪೀಸ್ ಇಟ್ಟುಕೊಳ್ಳುವ ಮೂಲಕ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು. ಬಟ್ಟೆಯನ್ನು ಸ್ವಲ್ಪ ಬೆಂಕಿಯ ಶಾಖದಲ್ಲಿ ಬೆಚ್ಚಗೆ ಮಾಡಿ ನೋವು ಉಂಟಾಗಿರುವ ಜಾಗಕ್ಕೆ ಇಟ್ಟುಕೊಳ್ಳಿ. ಇದರಿಂದ ಕುತ್ತಿಗೆ ನೋವು ನಿವಾರಣೆ ಮಾಡಿಕೊಳ್ಳಲು ಸಾಧ್ಯ.
*ಉಗುರು ಬೆಚ್ಚಗಿನ ಎಣ್ಣೆಯಿಂದ ಕುತ್ತಿಗೆಗೆ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಕುತ್ತಿಗೆ ಭಾಗದ ಸ್ನಾಯುಗಳು ಸಡಿಲಗೊಳ್ಳುತ್ತದೆ. ನೋವು ನಿವಾರಣೆಯಾಗುತ್ತದೆ.
*ತಲೆಕೂದಲನ್ನು ಬಿಗಿಯಾಗಿ ಕಟ್ಟಬೇಡಿ. ಕುತ್ತಿಗೆಯನ್ನು ಹಿಂದಕ್ಕೆ ಅಥವಾ ಮುಂದಕ್ಕೆ ಆಗಾಗ ತಿರಗಿಸಬೇಡಿ. ಹಾಗೆ ಮಾಡುವುದರಿಂದ ಕುತ್ತಿಗೆ ಸ್ನಾಯುಗಳಿಗೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರ ಪರಿಣಾಮವಾಗಿ ನೋವು ಇನ್ನಷ್ಟು ಹೆಚ್ಚಾಗುತ್ತದೆ.
*ಬಿಳಿ ಬಟ್ಟೆಯಲ್ಲಿ ಊಟ ಮಾಡುವ ಒಂದು ಮುಷ್ಟಿ ಅಕ್ಕಿಯನ್ನು ಬಿಗಿಯಾಗಿ ಕಟ್ಟಿ ಬೆಂಕಿಯ ಶಾಖದಲ್ಲಿ ಬಿಸಿ ಮಾಡಿ. ಅದನ್ನು ನೋವು ಇರುವ ಜಾಗದಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡುವ ಮೂಲಕ ನಿಮ್ಮ ಕುತ್ತಿಗೆ ನೋವು, ಬೆನ್ನು ನೋವು ಅಥವಾ ಕೀಲು ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಇದನ್ನೂ ಓದಿ:
ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?
Published On - 7:46 am, Tue, 20 July 21