Health Benefits: ಗ್ಯಾಸ್ಟಿಕ್​ನಿಂದಲೇ ಎದೆ ನೋವು ಕಾಣಿಸಿಕೊಂಡಿದೆ ಎಂದು ನಿರ್ಲಕ್ಷ್ಯ ವಹಿಸುವ ಮುನ್ನ, ನೋವಿನ ಲಕ್ಷಣಗಳ ಬಗ್ಗೆ ತಿಳಿಯುವುದು ಸೂಕ್ತ

ಗ್ಯಾಸ್ಟಿಕ್​ ನೋವು ಅಥವಾ ಎದೆ ನೋವಿನ ವ್ಯತ್ಯಾಸ ಕಂಡುಹಿಡಿಯುವುದು ಹೇಗೆ? ಗ್ಯಾಸ್ಟಿಕ್​ ನೋವಿಗೆ ಮನೆಯಲ್ಲಿ ಮಾಡಬಹುದಾದ ಪ್ರಥಮ ಚಿಕಿತ್ಸೆ ಯಾವುದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

Health Benefits: ಗ್ಯಾಸ್ಟಿಕ್​ನಿಂದಲೇ ಎದೆ ನೋವು ಕಾಣಿಸಿಕೊಂಡಿದೆ ಎಂದು ನಿರ್ಲಕ್ಷ್ಯ ವಹಿಸುವ ಮುನ್ನ, ನೋವಿನ ಲಕ್ಷಣಗಳ ಬಗ್ಗೆ ತಿಳಿಯುವುದು ಸೂಕ್ತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jul 12, 2021 | 6:44 AM

ಗ್ಯಾಸ್ಟ್ರಿಕ್ ಅಥವಾ ಗ್ಯಾಸ್​ ಟ್ರಬಲ್​ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಕಾಯಿಲೆ. ಚಿಕ್ಕವರಿಂದ ವಯಸ್ಕರವರೆಗೆ ಎಲ್ಲರೂ ಗ್ಯಾಸ್ಟ್ರಿಕ್ ಬಾಧೆಯಿಂದ ಬಳಲಿಯೇ ಇರುತ್ತೇವೆ. ಆದಾಗ್ಯೂ ಕೆಲವೊಮ್ಮೆ ಗ್ಯಾಸ್ಟ್ರಿಕ್ ನೋವು ಮತ್ತು ಎದೆ ನೋವು ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ. ಏಕೆಂದರೆ ಗ್ಯಾಸ್ಟ್ರಿಕ್ ನೋವು ಹೃದಯದ ಭಾಗದಲ್ಲಿಯೇ ಕೆಲವೊಮ್ಮೆ ಕಾಡುತ್ತದೆ. ಹೀಗಾಗಿಯೇ ಅನೇಕರು ಎದೆ ನೋವು ಕಾಣಿಸಿಕೊಂಡರು ಗ್ಯಾಸ್ಟಿಕ್​ ಇರಬೇಕು ಎಂದು ನಿರ್ಲಕ್ಷ್ಯ ಮಾಡಿ ಕೊನೆಗೆ ಅಪಾಯಕ್ಕೆ ಸಿಲುಕುತ್ತಾರೆ. ಆದರೆ ನೀವು ಗ್ಯಾಸ್ಟಿಕ್​ನಿಂದ ಉಂಟಾಗುವ ನೋವನ್ನು ಸೂಕ್ಷ್ಮವಾಗಿ ಗಮನಿಸಿ ಅರ್ಥ ಮಾಡಿಕೊಳ್ಳಬಹುದು ಮತ್ತು ಗೊಂದಲದಿಂದ ದೂರ ಉಳಿಯಬಹುದು. ಗ್ಯಾಸ್ಟಿಕ್​ ನೋವು ಅಥವಾ ಎದೆ ನೋವಿನ ವ್ಯತ್ಯಾಸ ಕಂಡುಹಿಡಿಯುವುದು ಹೇಗೆ? ಗ್ಯಾಸ್ಟಿಕ್​ ನೋವಿಗೆ ಮನೆಯಲ್ಲಿ ಮಾಡಬಹುದಾದ ಪ್ರಥಮ ಚಿಕಿತ್ಸೆ ಯಾವುದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಲಕ್ಷಣ ಎದೆಯ ಜತೆಗೆ ಎಡಗೈಯ ಎಡಭಾಗವು ನೋವಾಗುತ್ತಿದ್ದರೆ ಅದು ಹೃದಯಕ್ಕೆ ಸಂಬಂಧಿಸಿದ ಅಪಾಯದ ಮುನ್ನೆಚ್ಚರಿಕೆಯಾಗಿರುತ್ತದೆ. ಅಸಹನೀಯ ತೂಕವಿದೆ ಎಂದು ಅನಿಸುವುದು. ನಿದ್ರೆ ಮತ್ತು ಅರೆನಿದ್ರಾವಸ್ಥೆ ಉಂಟುಮಾಡುವುದು, ದೇಹ ಬೆವರುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಸೂಚನೆಯಾಗಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಗ್ಯಾಸ್ಟಿಕ್​ನಿಂದ ಉಂಟಾಗುವ ಎದೆ ನೋವು ಕೆಲವೊಮ್ಮೆ ಎದೆ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಗ್ಯಾಸ್ಟಿಕ್​ನಿಂದ ಉಂಟಾಗಿರುತ್ತದೆ. ದೇಹ ಮುಂದಕ್ಕೆ ಬಾಗಿದಾಗ ಎದೆ ನೋವು ಮತ್ತು ಮಲಗಿರುವಾಗ ಅದೇ ನೋವು ಹಿಂಭಾಗದಲ್ಲಿ ಅನುಭವಿಸಿದರೆ ಅದು ಗ್ಯಾಸ್ಟಿಕ್​ನಿಂದ ಉಂಟಾದ ನೋವಾಗಿರುತ್ತದೆ. ಅಂದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಲಕ್ಷಣವಾದರೆ ಕುಳಿತಾಗ, ಮಲಗಿದಾಗ ಒಂದೇ ಜಾಗದಲ್ಲಿ ನೋವಿರುತ್ತದೆ. ಆದರೆ ಗ್ಯಾಸ್ಟಿಕ್​ನಿಂದ ಉಂಟಾಗುವ ನೋವು ಮಲಗಿದಾಗ ಮತ್ತು ಕುಳಿತಾಗ ಬೇರೆ ಬೇರೆ ಭಾಗಕ್ಕೆ ಬದಲಾಗುತ್ತದೆ.

ಗ್ಯಾಸ್ಟಿಕ್​ ನೋವಿನ ಪರಿಹಾರಕ್ಕೆ ಮನೆಮದ್ದು ಗ್ಯಾಸ್ಟಿಕ್​ ನೋವಿಗೆ ಮೊದಲ ಚಿಕಿತ್ಸೆ ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದು ಅಥವಾ ಎರಡು ಗ್ಲಾಸ್ ಮಜ್ಜಿಗೆಯನ್ನು ಕುಡಿಯಬಹುದು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಸೂಪ್, ಬೇಳೆಕಾಳುಗಳು ಮತ್ತು ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ದೂರವಿರಬೇಕು. ಅದಕ್ಕೆ ಬದಲಾಗಿ ತಮ್ಮ ಆಹಾರದಲ್ಲಿ ಫೈಬರ್ ಅಂಶ ಇರುವ ಪದಾರ್ಥಗಳನ್ನು ಸೇವಿಸಬೇಕು. ಪ್ರತಿದಿನ ಬೆಳಿಗ್ಗೆ ಬಿಸಿ ನೀರನ್ನು ಕುಡಿಯುವುದರಿಂದ ಕೂಡ ಗ್ಯಾಸ್ಟಿಕ್​ ಸಮಸ್ಯೆ ದೂರವಾಗುತ್ತದೆ.

ಇದನ್ನೂ ಓದಿ: Health Benefits: ಕಿತ್ತಳೆ ಹಣ್ಣಿನಲ್ಲಿ ಅಡಗಿದ ಅನೇಕ ಆರೋಗ್ಯಕರ ಗುಣ; ಅನಾರೋಗ್ಯದಿಂದ ದೂರ ಇರಲು ದಿನನಿತ್ಯ ಒಂದು ಹಣ್ಣು ಸೇವಿಸಿ

Jaggery Benefits: ಬೆಲ್ಲದ ಔಷಧೀಯ ಗುಣಗಳ ಬಗ್ಗೆ ನೀವು ತಿಳಿದರೆ, ಸಕ್ಕರೆ ಬದಲು ಸಿಹಿಗಾಗಿ ಇದನ್ನೇ ಬಳಸುತ್ತೀರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್