AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಮತ್ತೊಂದು ವಿಮಾನ: ಇಲ್ಲಿಯವರೆಗೆ ತಾಯ್ನಡಿಗೆ ಬಂದ 1,053 ಪ್ರಯಾಣಿಕರು

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀತಿಯಿಂದ ಅತಂತ್ರರಾಗಿದ್ದ 1053 ಅನಿವಾಸಿ ಕನ್ನಡಿಗರನ್ನು ಯಶಸ್ವಿಯಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ದುಬೈ ಮತ್ತು ಅಬುಧಾಬಿಯಿಂದ ಬಂದ ವಿಮಾನಗಳಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಈ ರಕ್ಷಣಾ ಕಾರ್ಯ ಸಾಗಿದ್ದು, ಕುಟುಂಬಗಳಲ್ಲಿ ಸಂತಸ ಮೂಡಿಸಿದೆ. ಇದು ಕನ್ನಡಿಗರ ಪಾಲಿಗೆ ನಿಟ್ಟುಸಿರಿನ ಕ್ಷಣ.

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಮತ್ತೊಂದು ವಿಮಾನ: ಇಲ್ಲಿಯವರೆಗೆ ತಾಯ್ನಡಿಗೆ ಬಂದ 1,053 ಪ್ರಯಾಣಿಕರು
ಸಾಂದರ್ಭಿಕ ಚಿತ್ರ
ನವೀನ್ ಕುಮಾರ್ ಟಿ
| Edited By: |

Updated on: Mar 03, 2026 | 8:48 PM

Share

ದೇವನಹಳ್ಳಿ, ಮಾ.3: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಭೀತಿಯ ನಡುವೆ ಅತಂತ್ರರಾಗಿದ್ದ ಅನಿವಾಸಿ ಕನ್ನಡಿಗರನ್ನು ರಕ್ಷಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ. ಇಂದು ದುಬೈನಿಂದ ಹೊರಟಿದ್ದ ಎಮಿರೇಟ್ಸ್ (Emirates) EK-566 ವಿಮಾನವು 350 ಪ್ರಯಾಣಿಕರೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ಇಂದು ಮುಂಜಾನೆಯಷ್ಟೇ ದುಬೈನಿಂದ 490 ಪ್ರಯಾಣಿಕರನ್ನು ಹೊತ್ತು ಮೊದಲ ವಿಮಾನ ಬಂದಿಳಿದಿತ್ತು. ಇದೀಗ ಮಧ್ಯಾಹ್ನ 3 ಗಂಟೆಗೆ ದುಬೈನಿಂದ ಹೊರಟಿದ್ದ ಎರಡನೇ ವಿಮಾನ (EK-566) ಸಂಜೆ ಬೆಂಗಳೂರಿಗೆ ಆಗಮಿಸಿದೆ.

ಈ ವಿಮಾನದಲ್ಲಿ ಒಟ್ಟು 350 ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಅಧಿಕಾರಿಗಳು ಸಂತ್ರಸ್ತ ಪ್ರಯಾಣಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕಳೆದ ರಾತ್ರಿ ಅಬುಧಾಬಿಯಿಂದಲೂ 213 ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಈ ‘ರೆಸ್ಕ್ಯೂ ಮಿಷನ್’ ಸಾಗುತ್ತಿದೆ. ಯುದ್ಧದ ಭೀತಿಯಿಂದಾಗಿ ಆತಂಕದಲ್ಲಿದ್ದ ಪ್ರಯಾಣಿಕರು ಬೆಂಗಳೂರಿನ ಮಣ್ಣಿಗೆ ಕಾಲಿಡುತ್ತಿದ್ದಂತೆ ನಿಟ್ಟುಸಿರು ಬಿಟ್ಟರು. ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ಕುಟುಂಬ ಸದಸ್ಯರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ ಮೌಲಾನಾ ಹಸನ್ ಅಲಿ

ಕಳೆದ ರಾತ್ರಿಯಿಂದ ಇಲ್ಲಿಯವರೆಗೆ 1,053 ಪ್ರಯಾಣಿಕರು ಆಗಮಿಸಿದ್ದಾರೆ. ಅಬುಧಾಬಿಯಿಂದ ಮೊದಲ ವಿಮಾನದಲ್ಲಿ ಆಗಮಿಸಿದ್ದ 213 ಜನ ಬಂದಿದ್ದರು. ಮುಂಜಾನೆ ದುಬೈನಿಂದ ಆಗಮಿಸಿದ್ದ ವಿಮಾನದಲ್ಲಿ 490 ಪ್ರಯಾಣಿಕರು ಇದ್ದರು. ಇದೀಗ ದುಬೈನಿಂದ ಬಂದಿಳಿದ ವಿಮಾನದಲ್ಲಿ 350 ಜನರ ಆಗಮನ ಆಗಿದೆ. ಇನ್ನು ಈ ಪ್ರಯಾಣಿಕರನ್ನು ಕೆಐಎಬಿ ಸಿಬ್ಬಂದಿಗಳು ಆತ್ಮೀಯತೆಯಿಂದ ಬರಮಾಡಿಕೊಂಡಿದ್ದಾರೆ. ಇನ್ನು ಪ್ರಯಾಣಿಕರನ್ನು ಅವರವರ ಮನೆಗಳಿಗೆ ಕಳುಹಿಸಿದ ಕೆಲಸವನ್ನೂ ಕೂಡ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್
ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್
ಚಂದ್ರ ಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳು ನಿತ್ಯ ಪೂಜೆಯ ಬಳಿಕ ಬಂದ್
ಚಂದ್ರ ಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳು ನಿತ್ಯ ಪೂಜೆಯ ಬಳಿಕ ಬಂದ್
ದುಬೈನಿಂದ ಜೀವಂತ ಮರಳಿದ್ದೇ ಪವಾಡ: ಭಯಾನಕ ಅನುಭವ ಬಿಚ್ಚಿಟ್ಟ ಭೋಜೇಗೌಡ
ದುಬೈನಿಂದ ಜೀವಂತ ಮರಳಿದ್ದೇ ಪವಾಡ: ಭಯಾನಕ ಅನುಭವ ಬಿಚ್ಚಿಟ್ಟ ಭೋಜೇಗೌಡ