Health Tips: ನಾಲಿಗೆಯ ಮೇಲಿನ ಈ ಲಕ್ಷಣಗಳು, ದೇಹದ ಆರೋಗ್ಯ ಸ್ಥಿತಿಯ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತವೆ

ನಾಲಿಗೆ ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಂಡರೆ, ಅದು ತೇವಾಂಶ ಮತ್ತು ಮೃದುವಾಗಿರುತ್ತದೆ ಎಂದರ್ಥ ಮತ್ತು ಯಾವುದೇ ತೊಂದರೆ ಇಲ್ಲ. ನಾಲಿಗೆಯಲ್ಲಿ ನೋವು ಇದ್ದರೆ ಅದು ಕೆಲವು ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿದೆ.

Health Tips: ನಾಲಿಗೆಯ ಮೇಲಿನ ಈ ಲಕ್ಷಣಗಳು, ದೇಹದ ಆರೋಗ್ಯ ಸ್ಥಿತಿಯ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತವೆ
ಪ್ರಾತಿನಿಧಿಕ ಚಿತ್ರ
Follow us
| Updated By: shruti hegde

Updated on: Jul 14, 2021 | 8:16 AM

ಸಾಮಾನ್ಯವಾಗಿ ಅನಾರೋಗ್ಯಕ್ಕೆ ಒಳಗಾದಾಗ ನಾವು ವೈದ್ಯರ ಬಳಿ ಹೋಗುತ್ತೇವೆ. ಆಗ ಅವರು ನಮ್ಮ ಕಣ್ಣು ಮತ್ತು ನಾಲಿಗೆಯನ್ನು ಮೊದಲು ಪರೀಕ್ಷೆ ಮಾಡುತ್ತಾರೆ. ಏಕೆಂದರೆ ನಮ್ಮ ಅರೋಗ್ಯ ಹೇಗಿದೆ ಎಂದು ಹೇಳುವುದಕ್ಕೆ ನಾಲಿಗೆ ಮತ್ತು ಕಣ್ಣು ಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ನಾಲಿಗೆ ಆರೋಗ್ಯದ ಗುಣಲಕ್ಷಣಗಳ ಬಗ್ಗೆ ತಿಳಿಸುವ ನಿರ್ಣಾಯಕವಾಗಿ ಕೆಲಸ ಮಾಡುತ್ತದೆ. ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ನಾಲಿಗೆಯಿಂದ ನಿರ್ಣಯಿಸುವುದು ವೈದ್ಯರಿಗೆ ತುಂಬಾ ಸುಲಭ. ಉದಾಹರಣೆಗೆ ನಾಲಿಗೆ ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಂಡರೆ, ಅದು ತೇವಾಂಶ ಮತ್ತು ಮೃದುವಾಗಿರುತ್ತದೆ ಎಂದರ್ಥ ಮತ್ತು ಯಾವುದೇ ತೊಂದರೆ ಇಲ್ಲ. ನಾಲಿಗೆಯಲ್ಲಿ ನೋವು ಇದ್ದರೆ ಅದು ಕೆಲವು ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿದೆ. ಹಾಗಿದ್ದರೆ ವೈದ್ಯರು ಹೇಗೆ ಅದನ್ನು ತಿಳಿಯುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು ಅದಕ್ಕೆ ಉತ್ತರ ಇಲ್ಲಿದೆ.

1. ಬಿಳಿ ಬಣ್ಣದ ಕಣಗಳು ನಾಲಿಗೆಯ ಮೇಲಿನ ಬಿಳಿ ಲೇಪನ ಅಥವಾ ಬಿಳಿ ಕಣಗಳು ಓರಲ್ ಕ್ಯಾಂಡಿಡಿಯಾಸಿಸ್ ಕ್ಯಾಂಡಿಡಾ ಅಲ್ಬಿಕಾನ್ಸ್ ಎಂಬ ಶಿಲೀಂಧ್ರ. ಇದರ ಬೆಳೆವಣಿಗೆಯು ಬಾಯಿಗೆ ಸಂಬಂಧಿಸಿದ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಶಿಲೀಂಧ್ರವು ಯಾವಾಗಲೂ ಬಾಯಿಯಲ್ಲಿರುತ್ತದೆ ಮತ್ತು ಸಂಪೂರ್ಣವಾಗಿ ನಿರುಪದ್ರವವಾಗಿದೆ. ಅಲ್ಲದೆ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ ಎಂಬ ಮುನ್ಸೂಚನೆಯನ್ನು ಕೂಡ ಇದು ನೀಡುತ್ತದೆ.

* ಲ್ಯುಕೋಪ್ಲಾಕಿಯಾ ಇದು ಸಾಮಾನ್ಯವಾಗಿ ಬಾಯಿಯ ಲೋಳೆಯ ಪೊರೆಗಳಲ್ಲಿ ಕಂಡುಬರುತ್ತದೆ. ಬಿಳಿ ಅಥವಾ ಬೂದು ಬಣ್ಣದ ತೇಪೆಗಳು ಇದರಿಂದಾಗಿ ರೂಪುಗೊಳ್ಳುತ್ತವೆ. ಲ್ಯುಕೋಪ್ಲಾಕಿಯಾ ಅಷ್ಟೊಂದು ಅಪಾಯಕಾರಿ ಅಲ್ಲ. ಆದರೆ ಬಿಳಿ ಬಣ್ಣಕ್ಕೆ ತಿರುಗುವುದು ಬಾಯಿಯ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು.

* ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಂಡಾಗ ಬಾಯಿಯಲ್ಲಿ ಈ ರೀತಿಯ ಬಿಳಿ ಕಣಗಳು ಉತ್ಪತ್ತಿಯಾಗುತ್ತವೆ. ಇದು ಬಾಯಿಯ ಲೋಳೆ ಪೊರೆಯ ಮೇಲೆ ಪರಿಣಾಮ ಬೀರುತ್ತದೆ. ನಾಲಿಗೆಯ ಹಾನಿಗೂ ಕೂಡ ಇದು ಕಾರಣವಾಗುವ ಸಾಧ್ಯತೆ ಇದೆ.

2. ಕೆಂಪಾದ ನಾಲಿಗೆ ಕೆಂಪು ನಾಲಿಗೆ ಎಂದರೆ ಅಪೌಷ್ಟಿಕತೆ ಎಂದರ್ಥ. ಇದಕ್ಕಾಗಿ ಹೆಚ್ಚು ಪೋಷಕಾಂಶವುಳ್ಳ ಆಹಾರ ಸೇವಿಸುವುದು ಸೂಕ್ತ.

*ವಿಟಮಿನ್ ಬಿ -12 ದೋಷ ಫೋಲಿಕ್ ಆಮ್ಲ ಅಥವಾ ವಿಟಮಿನ್ ಬಿ -12 ಕೊರತೆಯು ನಿಮ್ಮ ನಾಲಿಗೆಯನ್ನು ಕೆಂಪಾಗಿ ಕಾಣುವಂತೆ ಮಾಡುತ್ತದೆ. ಇದಕ್ಕಾಗಿ ಸರಿಯಾದ ಪೌಷ್ಠಿಕಾಂಶವನ್ನು ತೆಗೆದುಕೊಳ್ಳುವುದರ ಜತೆಗೆ ವಿಟಮಿನ್ ಅಧಿಕವಾಗಿರುವ ಆಹಾರವನ್ನು ತೆಗೆದುಕೊಳ್ಳಬೇಕು.

* ನಾಲಿಯಲ್ಲಿ ರಂಧ್ರ ಅಥವಾ ನಾಲಿಗೆ ಚರ್ಮ ಹೋದಂತೆ ಕಾಣುವುದು, ಅಲರ್ಜಿ, ಅಸ್ವಸ್ಥತೆ, ಮಧುಮೇಹ ಅಥವಾ ಒತ್ತಡದ ಪ್ರಮುಖ ಲಕ್ಷಣವಾಗಿರುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

* ಜ್ವರ ನಾಲಿಗೆ ಕೆಂಪಾಗಿ ಕಾಣುವಂತೆ ಮಾಡುವ ಬ್ಯಾಕ್ಟೀರಿಯಾಗಳು ಅನಾರೋಗ್ಯಕ್ಕೆ ಕಾರಣ. ಕಡುಗೆಂಪು ನಾಲಿಗೆ ಜ್ವರದ ಲಕ್ಷಣವೂ ಹೌದು. ಹೃದಯ, ಮೂತ್ರಪಿಂಡ ಮತ್ತು ಇತರ ಅಂಗಗಳ ಮೇಲೆ ಪರಿಣಾಮ ಬೀರುವ ಗಂಭೀರ ಕಾಯಿಲೆಗಳಿಗೆ ಇದು ಕಾರಣವಾಗಬಹುದು.

* ಮಕ್ಕಳಲ್ಲಿ, ಅಧಿಕ ಜ್ವರ ಮತ್ತು ರಕ್ತನಾಳಗಳ ಉರಿಯೂತದಿಂದಾಗಿ ನಾಲಿಗೆ ಸಾಮಾನ್ಯವಾಗಿ ಕೆಂಪಾಗಿ ಕಾಣುತ್ತದೆ.

3. ನಾಲಿಗೆಯಲ್ಲಿನ ಚುಕ್ಕೆಗಳು ನಾಲಿಗೆ ಸ್ನಾಯುವಿನ ಎಪಿಥೀಲಿಯಂ ಮೇಲಿನ ಚುಕ್ಕೆಗಳು ಕೆಲವು ಬಾರಿ ಜೀವನದುದ್ದಕ್ಕೂ ಬೆಳೆಯುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಲ್ಲಿ ಕಪ್ಪು ನಾಲಿಗೆ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಕೀಮೋಥೆರಪಿಯಲ್ಲಿರುವವರು, ಮಧುಮೇಹಿಗಳು ಕಪ್ಪು ನಾಲಿಗೆಯನ್ನು ಹೊಂದಿರುತ್ತಾರೆ. ಈ ರೀತಿಯ ಸಮಸ್ಯೆ ಇರುವವರು ವೈದ್ಯರನ್ನು ಕಾಣುವುದು ಉತ್ತಮ. ಅದರಲ್ಲೂ ನಾಲಿಗೆಯ ಮೇಲೆ ಹೆಚ್ಚು ಗುಳ್ಳೆ ಹೊಂದಿರುವವರು ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದು ಸೂಕ್ತ.

ಇದನ್ನೂ ಓದಿ: Health Benefits: ಗ್ಯಾಸ್ಟಿಕ್​ನಿಂದಲೇ ಎದೆ ನೋವು ಕಾಣಿಸಿಕೊಂಡಿದೆ ಎಂದು ನಿರ್ಲಕ್ಷ್ಯ ವಹಿಸುವ ಮುನ್ನ, ನೋವಿನ ಲಕ್ಷಣಗಳ ಬಗ್ಗೆ ತಿಳಿಯುವುದು ಸೂಕ್ತ

Health Tips: ಟೀ -ಕಾಫಿ ಜತೆಗೆ ಸಕ್ಕರೆ ಬೆರೆಸಿ ಕುಡಿಯುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ