Health Tips: ಮಾವಿನ ಎಲೆಗಳಲ್ಲಿಯೂ ಎಷ್ಟೊಂದು ಔಷಧೀಯ ಗುಣಗಳಿವೆ ಗೊತ್ತಾ?

ಮಾವಿನ ಎಲೆಗಳು: ಹಣ್ಣುಗಳಿಂದ ಸಲಾಡ್​, ಸ್ವೀಟ್​ ಮಾಡಿ ಸವಿಯುತ್ತೇವೆ. ಜತೆಜತೆಗೆ ಮಾವಿನ ಎಲೆಗಳಲ್ಲಿಯೂ ಸಹ ಔಷದೀಯ ಗುಣಗಳಿವೆ. ಮಾವಿನ ಎಲೆಗಳು ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ.

Health Tips: ಮಾವಿನ ಎಲೆಗಳಲ್ಲಿಯೂ ಎಷ್ಟೊಂದು  ಔಷಧೀಯ ಗುಣಗಳಿವೆ ಗೊತ್ತಾ?
ಮಾವಿನ ಎಲೆಗಳು
Follow us
TV9 Web
| Updated By: preethi shettigar

Updated on: Jul 14, 2021 | 7:33 AM

ಹಣ್ಣಿನ ರಾಜ ಮಾವು ಎಂದರೆ ಎಲ್ಲರಿಗೂ ಇಷ್ಟ. ಮಾವಿನ ಸೀಸನ್​ಗಾಗಿಗೆಯೇ (Mango) ಅದೆಷ್ಟೋ ಜನ ಕಾದುಕುಳಿತಿರುತ್ತಾರೆ. ರಸಭರಿತ ಹಣ್ಣಿನ ಪ್ರಯೋಜನಗಳು ಸಾಕಷ್ಟಿವೆ. ಹಾಗೆಯೇ ಮಾವಿನ ಎಲೆಗಳಿಂದಲೂ(Mango leaves) ಸಹ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮಾವಿನ ಎಲೆಗಳಲ್ಲಿ ಎಷ್ಟೊಂದು ಅರೋಗ್ಯ ಪ್ರಯೋಜನಗಳಿವೆ (Health Tips) ಮತ್ತು ಔಷಧೀಯ ಗುಣಗಳ ಕುರಿತಾಗಿ ಹೇಳಿದ್ದೇವೆ. ಸಾಮಾನ್ಯವಾಗಿ ಮಾವಿನ ಕಾಯಿಯಿಂದ ಅಡುಗೆ ಪದಾರ್ಥಗಳನ್ನು ಮಾಡಿ ಸವಿಯುತ್ತೇವೆ. ಅದೇ ರೀತಿ ಹಣ್ಣುಗಳಿಂದ ಸಲಾಡ್​, ಸ್ವೀಟ್​ ಮಾಡಿ ಸವಿಯುತ್ತೇವೆ. ಜತೆಜತೆಗೆ ಮಾವಿನ ಎಲೆಗಳಲ್ಲಿಯೂ ಸಹ ಔಷದೀಯ ಗುಣಗಳಿವೆ. ಮಾವಿನ ಎಲೆಗಳು ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ.

ಕ್ಯಾನ್ಸರ್ ಮತ್ತು ಗಡ್ಡೆಗಳು ಬೆಳೆಯದಂತೆ ತಡೆಯುತ್ತದೆ ಮಾವಿನ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುತ್ತದೆ. ದೇಹದಿಂದ ಸ್ವತಂತ್ರ ರಾಡಿಕಲ್​ಗಳನ್ನು ತೆಗೆದುಹಾಕುವ ಮೂಲಕ ಕ್ಯಾನ್ಸರ್​ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದು ಕ್ಯಾನ್ಸರ್​, ಗಡ್ಡೆಗಳಂತಹ ಮಾರಣಾಂತಿಕ ಖಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುವುದರ ಮೂಲಕ ಆರೋಗ್ಯವನ್ನು ಸುಧಾರಿಸುತ್ತದೆ.

ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿ ಮಾವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ದೇಹದಲ್ಲಿನ ಸೋಂಕು ನಿವಾರಣೆಗೆ ಸಹಾಯಕವಾಗಿದೆ. ಇದು ವಯಸ್ಸಿನನಿಂದ ಉಂಟಾಗುವ ಚರ್ಮದ ಮಡಿಕೆಯನ್ನು ನಿವಾರಿಸಲು ಸಹಾಯಕವಾಗಿದೆ. ಮಾವಿನ ಎಲೆಗಳು ವಿಟಮಿನ್​ ಎ ಮತ್ತು ಸಿ ಯಿಂದ ಸಮೃದ್ಧವಾಗಿದೆ ಹಾಗೂ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮಾವಿನ ಎಲೆಗಳ ಪೇಸ್ಟ್​ ತಯಾರಿಸುವ ಮೂಲಕ ನಿಮ್ಮ ತಲೆ ಕೂದಲು ಬೆಳವಣಿಗೆಗೆ ಬಳಕೆ ಮಾಡಬಹುದು. ಇದರಿಂದ ಕೂದಲು ದಪ್ಪ ಮತ್ತು ಕಪ್ಪಾಗಿ ಬೆಳೆಯಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯಕ ಮಾವಿನ ಎಲೆಗಳು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬು ನಿವಾರಣೆಗೆ ಸಹಾಯಕವಾಗಿದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ಆಹಾರದಲ್ಲಿ ಮಾವಿನ ಎಲೆಗಳನ್ನು ಬಳಸಿ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಮಾವಿನ ಎಲೆಗಳ ಬಳಕೆ ಉತ್ತಮ. ಜತೆಗೆ ಮಾವಿನ ಎಲೆಗಳನ್ನು ಬಳಸುವುದರ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಮಧುಮೇಹ ನಿಯಂತ್ರಣಕ್ಕೂ ಸಹ ಮಾವಿನ ಎಲೆಗಳು ಸಹಾಯ ಮಾಡುತ್ತವೆ. ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಾವಿನ ಎಲೆಗಳನ್ನು ಬಳಸುತ್ತಾರೆ.

ಸೂಚನೆ: ಆರೋಗ್ಯದಲ್ಲಿ ಏನೇ ಏರು-ಪೇರು ಉಂಟಾದರೂ ತಕ್ಷಣ ವೈದ್ಯರ ಸಮಹೆಯನ್ನು ಪಡೆದುಕೊಳ್ಳಿ. ನಿಮ್ಮ ಆಹಾರ ಕ್ರಮವೂ ಸಹ ವೈದ್ಯರು ಸೂಚಿಸಿದಂತೆಯೇ ಇರಲಿ. ಆರೋಗ್ಯಕ್ಕೆ ತಕ್ಕಂತೆ ವೈದ್ಯರು ಸಲಹೆ ನೀಡುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿ. ಈ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ:

ವಿಶ್ವದಲ್ಲಿ ಅತಿ ದುಬಾರಿ ಮಾವಿನ ಹಣ್ಣು ಯಾವುದು ಗೊತ್ತೇ? ಹಣ್ಣಿನ ಬೆಲೆ ಕೇಳಿದ್ರೆ ಹುಬ್ಬೇರುವುದು ಗ್ಯಾರೆಂಟಿ!

ಹಾವೇರಿ: ಹೊಟ್ಟೆ ಪಾಡಿಗೆ ಮಾವಿನ ಹಣ್ಣು ವ್ಯಾಪಾರ, ಉದ್ಯೋಗ ಖಾತ್ರಿಯತ್ತ ಮುಖ ಮಾಡಿದ ಅತಿಥಿ ಉಪನ್ಯಾಸಕರು

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!