AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಗರ್ಭಿಣಿಯರು ಪಾರ್ಲರ್​ಗೆ ಹೋಗುವುದು ಒಳ್ಳೆಯದಲ್ಲ! ಕಾರಣ ತಿಳಿಯಲೇಬೇಕು

ಸಾಮಾನ್ಯವಾಗಿ ಐ-ಬ್ರೋ, ಮೇಕಪ್, ಹೇರ್​ಕಟಿಂಗ್​, ಉಗುರಿಗೆ ಶೇಪ್​ ಕೊಡುವ ಫ್ಯಾಷನ್​ಗಾಗಿ ಬ್ಯೂಟಿ ಪಾರ್ಲರ್​ಗಳಿಗೆ ಮಹಿಳೆಯರು ಹೋಗುತ್ತಾರೆ. ಅಂದವಾಗಿ ಕಾಣಬೇಕು ಎಂಬುದು ಸರಿ. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಇವುಗಳಿಂದ ದೂರವಿರುವುದು ಉತ್ತಮ.

Women Health: ಗರ್ಭಿಣಿಯರು ಪಾರ್ಲರ್​ಗೆ ಹೋಗುವುದು ಒಳ್ಳೆಯದಲ್ಲ! ಕಾರಣ ತಿಳಿಯಲೇಬೇಕು
ಸಾಂದರ್ಭಿಕ ಚಿತ್ರ
TV9 Web
| Updated By: ganapathi bhat|

Updated on:Jul 26, 2021 | 9:04 PM

Share

ಇತ್ತೀಚೆಗೆ ಯುವತಿಯರು ಕೈ-ಕಾಲುಗಳಿಗೆ ಉದ್ದವಾದ ಉಗುರು ಬಿಡುವುದು ಟ್ರೆಂಡ್ ಆಗಿಬಿಟ್ಟಿದೆ. ಉಗುರುಗಳಿಗೆ ಶೇಪ್ ಕೊಡುವುದು, ನೇಲ್​ಪಾಲಿಶ್​ ಹಚ್ಚುವುದರ ಮೂಲಕ ಕೈಗಳನ್ನು ಸುಂದರವಾಗಿಸಲು ಪ್ರಯತ್ನಿಸುತ್ತಾರೆ. ಕೇವಲ ಯುವತಿಯರು ಮಾತ್ರವಲ್ಲ ಇತ್ತೀಚೆಗೆ ಮಹಿಳೆಯರೂ ಕೂಡಾ ಹೊಸ ಹೊಸ ಟ್ರೆಂಡ್​ಗಳಿಗೆ(Trend) ಹೊಂದಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಆರೋಗ್ಯ ದೃಷ್ಟಿಯಿಂದ ಕೆಲವು ಪ್ಯಾಷನ್​ಗಳನ್ನು ಮಾಡದಿರುವುದು ಒಳ್ಳೆಯದು. ಅದಯಲ್ಲಿಯೂ ಗರ್ಭಾವಸ್ಥೆಯ(Pregnancy) ಸಮಯದಲ್ಲಿ ಆರೋಗ್ಯ ತುಂಬಾ ಸೂಕ್ಷವಾಗಿರುವುದರಿಂದ ಫ್ಯಾಷನ್​ಗೆ(Fashion) ಹೆಚ್ಚು ಮೊರೆ ಹೋಗದಿರುವುದು ಒಳ್ಳೆಯರು.

ಸಾಮಾನ್ಯವಾಗಿ ಐ-ಬ್ರೋ, ಮೇಕಪ್, ಹೇರ್​ಕಟಿಂಗ್​, ಉಗುರಿಗೆ ಶೇಪ್​ ಕೊಡುವ ಫ್ಯಾಷನ್​ಗಾಗಿ ಬ್ಯೂಟಿ ಪಾರ್ಲರ್​ಗಳಿಗೆ ಮಹಿಳೆಯರು ಹೋಗುತ್ತಾರೆ. ಅಂದವಾಗಿ ಕಾಣಬೇಕು ಎಂಬುದು ಸರಿ. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಇವುಗಳಿಂದ ದೂರವಿರುವುದು ಉತ್ತಮ. ಅದರಲ್ಲಿಯೂ ಮುಖ್ಯವಾಗಿ ಗರ್ಭಿಣಿಯರು ಕೊವಿಡ್ ಸಮಯದಲ್ಲಿ ಹೊರಹೋಗದಿರುವುದು ಒಳಿತು.

ಸಾಮಾನ್ಯವಾಗಿ ಫ್ಯಾಷನ್ ಕಾರಣದಿಂದ ಉದ್ದವಾದ ಉಗುರು ಬಿಡುತ್ತಾರೆ. ಆದರೆ ಕೆಲಸದ ಸಮಯದಲ್ಲಿ ಉಗುರಿನ ಒಳಗೆ ಸಿಲುಕಿಕೊಳ್ಳುವ ಮಣ್ಣು, ಧೂಳು ನಾವು ಕೈಯಿಂದ ಸೇವಿಸುವ ಆಹಾರದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದು ಅನಾರೋಗ್ಯವನ್ನು ಉಂಟು ಮಾಡುತ್ತದೆ. ಹಾಗಾಗಿ ಮುಖ್ಯವಾಗಿ ಗರ್ಭಿಣಿಯರು ಆದಷ್ಟು ಉಗುರು ಬಿಡುವುದನ್ನು ತಪ್ಪಿಸಿ.

ಉಗುರುಗಳಿಗೆ ಶೇಪ್ ಕೊಡುವುದು ಬೇಡ ಸಾಮಾನ್ಯವಾಗಿ ಕೈಗಳು ಅಂದವಾಗಿ ಕಾಣಿಸಲಿ ಎಂಬ ಕಾರಣಕ್ಕೆ ಉಗುರುಗಳಿಗೆ ಶೇಪ್ ಕೊಡುತ್ತೇವೆ. ಆದರೆ ಗರ್ಭಿಣಿಯರು ಉಗುರಿಗಳಿಗೆ ಶೇಪ್ ಕೊಡುವ ಸಂದರ್ಭದಲ್ಲಿ ಹಾನಿಯುಂಟಾಗಬಹುದು. ಇರಿಂದರ ಅವರ ಆರೋಗ್ಯ ಸಮಸ್ಯೆಗೆ ಪೆಟ್ಟು ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಐ-ಬ್ರೋ ಮಾಡಿಸರಿದಿರುವುದು ಉತ್ತಮ ಸಾಮಾನ್ಯವಾಗಿ ನೋಡಲು ಸುಂದರವಾಗಿ ಕಾಣಿಸಲಿ ಎಂದು ಐ-ಬ್ರೋ ಮಾಡಿಸಿಕೊಳ್ಳುತ್ತಾರೆ. ಆದರೆ ಕೂದಲು ಕೀಳುವ ಸಂದರ್ಭದಲ್ಲಿ ನೋವು ಉಂಟಾಗುವುದು ಸಹಜ. ದೇಹವನ್ನು ಬಿಗಿ ಹಿಡಿಯುವ ಸಂದರ್ಭ ಎದುರಾದಾಗ ಗರ್ಭಾವಸ್ಥೆಗೆ ಹಾನಿಯುಂಟಾಗುತ್ತದೆ. ಹಾಗಾಗಿ ಗರ್ಭಿಣಿಯರು ಪಾರ್ಲರ್​ಗೆ ಹೋಗುವುದನ್ನು ಆದಷ್ಟು ತಪ್ಪಿಸಿ.

ಮೇಕಪ್ ಬೇಡ ಸುಂದರವಾಗಿ ಕಾಣಿಸುವ ದೃಷ್ಟಿಯಿಂದ ಮೇಕಪ್ ಮಾಡಿಕೊಳ್ಳುವುದು ಸಹಜ. ಆದರೆ ಬಣ್ಣಗಳಲ್ಲಿರುವ ರಾಸಾಯನಿಕಗಳು ಚರ್ಮಕ್ಕೆ ಹಾನಿಯುಂಟು ಮಾಡುತ್ತದದೆ. ಚರ್ಮದ ಸುಕ್ಕು, ಅಲರ್ಜಿಯಂತಹ ಸಮಸ್ಯೆಗಳು ಕಂಡು ಬರಬಹುದು. ಅದರಲ್ಲಿಯೂ ಗರ್ಭಿಣಿಯರ ಆರೋಗ್ಯ ತುಂಬಾ ಸೂಕ್ಷ್ಮವಾಗಿರುವುದರಿಂದ ಬಹುಬೇಗ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಹಾಗಾಗಿ ಗರ್ಭಾವಸ್ಥೆಯಲ್ಲಿ ಇಂತಹ ಕೆಲವು ಫ್ಯಾಷನ್​ಗಳಿಂದ ದೂರವಿರುವುದು ಒಳಿತು.

ಇದನ್ನೂ ಓದಿ:

Women Health: ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವಕ್ಕೆ ಕಾರಣವೇನು ಗೊತ್ತಾ? ಪರಿಹಾರವೂ ಇಲ್ಲಿದೆ

Women Health: ಗರ್ಭಿಣಿಯರಿಗೆ ವಾಕಿಂಗ್ ಎಷ್ಟು ಮುಖ್ಯ? ಹಾಕುವ ಪ್ರತಿ ಹೆಜ್ಜೆ ಜತೆಗೆ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ

Published On - 9:00 pm, Mon, 26 July 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ