AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನಿಮ್ಮ‌ ಮೂಳೆಗಳನ್ನು ಶಕ್ತಿಯುತವಾಗಿಸಲು ಏನೆಲ್ಲಾ ಮಾಡಬಹುದು?

ಮೂಳೆಗಳನ್ನು ಆರೋಗ್ಯವಾಗಿಡಲು ವಿಟಮಿನ್ ಮತ್ತು ಖನಿಜಾಂಶಗಳು ಬೇಕಾಗುತ್ತದೆ. ಹೆಚ್ಚು ಜೀವಸತ್ವಗಳು ಮತ್ತು ಖನಿಜಾಂಶಯುಕ್ತ ಆಹಾರದಿಂದ ದೇಹವು ಸತ್ವವನ್ನು ಪಡೆಯುತ್ತದೆ. ವಿಟಮಿನ್ ಸಿ ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ.

Health Tips: ನಿಮ್ಮ‌ ಮೂಳೆಗಳನ್ನು ಶಕ್ತಿಯುತವಾಗಿಸಲು ಏನೆಲ್ಲಾ ಮಾಡಬಹುದು?
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Aug 02, 2021 | 6:57 AM

Share

ನಿಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ರೋಗಗಳು ಬಹುಬೇಗ ಹರಡುತ್ತಿವೆ. ಹೀಗಿರುವಾಗ ವೈರಸ್ ವಿರುದ್ಧ ಹೋರಾಡುವಷ್ಟು ನಿಮ್ಮ ದೇಹ ಬಲಿಷ್ಠವಾಗಿರಬೇಕು. ಜತೆಗೆ ನಿಮ್ಮ ಮೂಳೆಗಳು ಶಕ್ತಿಯುತವಾಗಿರಬೇಕು. ಆಹಾರ ಮತ್ತು ಜೀವನಶೈಲಿಯ ಕೆಲವು ಬದಲಾವಣೆಗಳಿಂದ ಮೂಳೆಗಳನ್ನು ಶಕ್ತಿಯುತವಾಗಿರುವಂತೆ ನೋಡಿಕೊಳ್ಳಬಹುದು. ನೀವು ನಿಮ್ಮ ಮೂಳೆಗಳನ್ನು ಬಲಿಷ್ಠಗೊಳಿಸಲು ಏನೆಲ್ಲಾ ಮಾಡಬಹುದು ಎಂಬುದರ ಕೆಲವು ಸಲಹೆಗಳು ಇಲ್ಲಿವೆ.

ಹೆಚ್ಚು ಪೌಷ್ಠಿಕ ತರಕಾರಿಗಳನ್ನು ಸೇವಿಸಿ ಮೂಳೆಗಳನ್ನು ಆರೋಗ್ಯವಾಗಿಡಲು ವಿಟಮಿನ್ ಮತ್ತು ಖನಿಜಾಂಶಗಳು ಬೇಕಾಗುತ್ತದೆ. ಹೆಚ್ಚು ಜೀವಸತ್ವಗಳು ಮತ್ತು ಖನಿಜಾಂಶಯುಕ್ತ ಆಹಾರದಿಂದ ದೇಹವು ಸತ್ವವನ್ನು ಪಡೆಯುತ್ತದೆ. ವಿಟಮಿನ್ ಸಿ ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ. ತರಕಾರಿಗಳನ್ನು ತಿನ್ನುವುದರಿಂದದ ಮೂಳೆಗಳು ಹೆಚ್ಚು ಶಕ್ತಿಯುತವಾಗುತ್ತವೆ.

ಹೆಚ್ಚು ಪ್ರೋಟೀನ್ ಸೇವಿಸಿ ನಿಮ್ಮ ಮೂಳೆಗಳಿಗೆ ಹೆಚ್ಚು ಪ್ರೋಟೀನ್ ಅವಶ್ಯಕತೆಯಿರುತ್ತವೆ. ಕಡಿಮೆ ಪ್ರೋಟೀನ್ ಹೊಂದಿರುವುದರಿಂದ ಕ್ಯಾಲ್ಸಿಯಂ ಅಂಶ ದೇಹದಲ್ಲಿ ಕಡಿಮೆಯಾಗುತ್ತದೆ. ನಿಮ್ಮ ಮೂಳೆಗಳು ಕ್ಯಾಲ್ಸಿಯಂ ಪಡೆಯುವುದರಿಂದ ಹೆಚ್ಚು ಬಲಿಷ್ಠಗೊಳ್ಳುತ್ತದೆ. ಹಾಗಾಗಿ ಪ್ರೋಟೀನ್​ಯುಕ್ತ ಆಹಾರವನ್ನು ಹೆಚ್ಚು ಸೇವಿಸಿ.

ವ್ಯಾಯಾಮ ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ದೇಹವನ್ನು ಸದೃಢವಾಗಿರಿಸಿಕೊಳ್ಳಬಹುದು. ಇದು ಮೂಳೆಗಳ ಬಲಿಷ್ಠತೆಗೆ ಸಹಾಯವಾಗುತ್ತದೆ. ಸಂಧಿ ನೋವು, ಕೀಲು ನೋವು, ಬೆನ್ನಿನ ಹುರಿ ಭಾಗ ಹೀಗೆ ಅನೇಕ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು. ಹಾಗಾಗಿ ನಿಮ್ಮ ಆರೋಗ್ಯವನ್ನು ಹೆಚ್ಚು ಸುಧಾರಿಸಲು ವ್ಯಾಯಾಮ ಮುಖ್ಯವಾದ ಮಾರ್ಗ.

ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸಿ ಕ್ಯಾಲ್ಸಿಯಂಯುಕ್ತ ಆಹಾರವನ್ನು ತಿನ್ನುವುದರ ಮೂಲಕ ಮೂಳೆಗಳು ಹೆಚ್ಚು ಶಕ್ತಿ ಪಡೆದುಕೊಳ್ಳುತ್ತದೆ. ಕ್ಯಾಲ್ಸಿಯಂ ನಿಮ್ಮ ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ಖನಿಜವಾಗಿದೆ. ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಮೀನು, ಬಾದಾಮಿ, ಹಸಿರು ತರಕಾರಿಗಳಲ್ಲಿ ಹೆಚ್ಚು ಪೌಷ್ಠಿಕ ಆಹಾರವನ್ನು ಪಡೆಯಬಹುದು. ಜತೆಗೆ ಮೂಳೆಗಳು ಶಕ್ತಿಯುತವಾಗಿರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

Dance Benefits: ಪ್ರತಿನಿತ್ಯ ನೃತ್ಯ ಮಾಡುವುದರಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?

Women Health: ಮಹಿಳೆಯರೇ ಟೈಟ್ ಡ್ರೆಸ್ ಅಂದ್ರೆ ಇಷ್ಟಾನಾ? ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?