Delta Varient: ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಡೆಲ್ಟಾ ರೂಪಾಂತರಿ ವೈರಸ್; ವರದಿ ಹೇಳುತ್ತಿರುವುದೇನು?

Corona: ಲಸಿಕೆಯನ್ನು ಪಡೆಯದ ವ್ಯಕ್ತಿಗಳಷ್ಟೇ ಲಸಿಕೆ ಪಡೆದ ವ್ಯಕ್ತಿಗಳೂ ಸಹ ಕೊರೊನಾ ಡೆಲ್ಟಾ ರೂಪಾಂತರಿ ವೈರಾಣುವನ್ನು ಹರಡುತ್ತಾರೆ ಎನ್ನುತ್ತದೆ ಅಮೇರಿಕಾದ ಒಂದು ಅಧ್ಯಯನ ವರದಿ.

Delta Varient: ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಡೆಲ್ಟಾ ರೂಪಾಂತರಿ ವೈರಸ್; ವರದಿ ಹೇಳುತ್ತಿರುವುದೇನು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Aug 01, 2021 | 1:20 PM

ಕೊರೊನಾ ವಿರುದ್ಧದ ಹೋರಾಟಕ್ಕೆ ಲಸಿಕೆ ಒಂದು ಪ್ರಮುಖ ಅಸ್ತ್ರ ನಿಜ. ಆದರೆ ಲಸಿಕೆ ಪಡೆದವರು ಪೂರ್ಣ ಸುರಕ್ಷಿತರೇ ಎಂದರೆ ಅವರೂ ಎಚ್ಚರದಿಂದಿರಬೇಕು ಎನ್ನುತ್ತದೆ ಅಮೇರಿಕಾದ ಅಧ್ಯಯನ ವರದಿ. ಕೊರೊನಾ ರೂಪಾಂತರಿ ತಳಿಯಾದ ಡೆಲ್ಟಾ ಮಾದರಿಯ ಲಕ್ಷಣಗಳನ್ನು ಅಧ್ಯಯನ ಮಾಡಿದ ಅಮೇರಿಕಾದ ರೋಗ ತಡೆ ಮತ್ತು ನಿರ್ಮೂಲನಾ ಸಂಸ್ಥೆಯು (US CDC) ಈ ಕುರಿತು ಅಧ್ಯಯನ ವರದಿಯನ್ನು ಬಹಿರಂಗಪಡಿಸಿದೆ. ಕೊರೊನಾ ಲಸಿಕೆ ಪಡೆಯದ ವ್ಯಕ್ತಿಗಳಷ್ಟೇ, ಲಸಿಕೆ ಪಡೆದ ವ್ಯಕ್ತಿಗಳೂ ಡೆಲ್ಟಾ ತಳಿಯ ಸೋಂಕು ಪ್ರಸರಣಕ್ಕೆ ಕಾರಣರಾಗುತ್ತಾರೆ. ಆದರೆ ಲಸಿಕೆ ಪಡೆಯದ ವ್ಯಕ್ತಿಗಳಿಗೆ ಹೋಲಿಸಿದರೆ, ಲಸಿಕೆ ಪಡೆದವರು ಸುರಕ್ಷಿತರಾಗಿರುತ್ತಾರೆ ಎಂದು ವರದಿ ತಿಳಿಸಿದೆ.

ಲಸಿಕೆ ಪಡೆದವರೂ ರೋಗಕ್ಕೆ ತುತ್ತಾಗುತ್ತಾರೆ ಎಂಬ ಅಂಧ ಭಯವೂ ಇದಕ್ಕೆ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರವು, ಎಲ್ಲರೂ ಲಸಿಕೆ ಪಡೆಯುವುದು ಮುಖ್ಯವಾಗಿದ್ದು, ಅದು ರೋಗ ತಗುಲಿದರೂ ಅದರ ಪರಿಣಾಮಗಳನ್ನು ತಗ್ಗಿಸುತ್ತದೆ. ಆದ್ದರಿಂದ ಲಸಿಕೆ ಪಡೆದವರು ಭಯಪಡಬೇಕಾಗಿಲ್ಲ; ಆದರೆ ಅವರು ಪ್ರಸರಣಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಸಾಮಾಜಿಕ ಜವಾಬ್ದಾರಿಯ ಹೊಣೆ ಹೊತ್ತು ಕೊರೊನಾ ಮುನ್ನೆಚ್ಚರಿಕೆಯ ನಿಯಮಗಳನ್ನು ಕಠಿಣವಾಗಿ ಪಾಲಿಸಬೇಕು ಎಂದು ತಿಳಿಸಿದೆ.

ಲಸಿಕೆ ಪಡೆದವರಿಗೆ ಮತ್ತೆ ಸೋಂಕು ತಗುಲಿದರೆ ಯಾವ ಲಕ್ಷಣಗಳಿರುತ್ತವೆ?

ಲಸಿಕೆಗಳು ಸಾಮಾನ್ಯವಾಗಿ ಪ್ರಬಲ ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ರೂಪಿಸುತ್ತವೆ. ಅದಾಗ್ಯೂ ಸೋಂಕು ತಗುಲಿದರೆ ತಲೆ‌ನೋವು, ನೆಗಡಿ, ವಾಸನೆಯ ಗ್ರಹಿಕೆ ಕಳೆದುಕೊಳ್ಳುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ, ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಸೋಂಕು ತೀವ್ರವಾಗುವ ಸಾಧ್ಯತೆ ತೀರಾ ಕಡಿಮೆ. ಆದರೆ ಅವರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. ಆದ ಕಾರಣ, ಲಸಿಕೆ ಪಡೆದವರಿಗೆ ಸೋಂಕು ಲಕ್ಷಣಗಳು ಪತ್ತೆಯಾದರೆ ತಕ್ಷಣ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಪ್ರತ್ಯೇಕ ವಾಸ ಮಾಡಬೇಕು. ಆಗ ಡೆಲ್ಟಾ ಮಾದರಿ ಸೋಂಕಿನ ಪ್ರಸರಣವನ್ನು ತಡೆಗಟ್ಟಬಹುದು ಎಂದು ವರದಿ ತಿಳಿಸಿದೆ.

ಈ ಕುರಿತ ವಿಡಿಯೊ ವರದಿ ಇಲ್ಲಿದೆ:

ಲಸಿಕೆ ಪಡೆದ ವ್ಯಕ್ತಿಗಳು ಭಯಭೀತರಾಗುವ ಅವಶ್ಯಕತೆ ಇಲ್ಲ. ಸೋಂಕು ತೀವ್ರ ಪರಿಣಾಮ ಉಂಟು ಮಾಡದ ಕಾರಣ ಅವರು ಆಸ್ಪತ್ರೆಗೆ ಸೇರುವ ಪ್ರಸಂಗ ಬರುವ ಸಾಧ್ಯತೆ ಕಡಿಮೆ ಎಂದು ವರದಿ ಹೇಳಿದೆ. ಆದ್ದರಿಂದ ಲಸಿಕೆ ಪಡೆಯದವರು ತುರ್ತಾಗಿ‌ ಲಸಿಕೆ ಪಡೆಯಬೇಕು. ಜೊತೆಗೆ ಎಲ್ಲರೂ ಸೋಂಕು ವಿರುದ್ಧದ ಹೋರಾಟಕ್ಕೆ ರೂಪಿಸಲಾಗುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:

Delta Variant: ಕೊರೊನಾ ಲಸಿಕೆ ಪಡೆದ ನಂತರವೂ ಹಬ್ಬಿದ ಸೋಂಕಿನಲ್ಲಿ ಶೇ.86.09 ಪಾಲು ಡೆಲ್ಟಾ ತಳಿಯದ್ದು – ಐಸಿಎಂಆರ್

ಮಹಾರಾಷ್ಟ್ರದಲ್ಲಿ ಸಾಲುಸಾಲು ವೈರಸ್​ಗಳು; ಮೊದಲ ಝಿಕಾ ಪ್ರಕರಣ ಪತ್ತೆ, 25 ಮಂದಿಯಲ್ಲಿ ಚಿಕೂನ್​ಗುನ್ಯಾ, ಡೆಂಘೆ ಆತಂಕ

(US CDC says that even vaccinated people should be aware of Delta variant)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ