ಮಹಾರಾಷ್ಟ್ರದಲ್ಲಿ ಸಾಲುಸಾಲು ವೈರಸ್​ಗಳು; ಮೊದಲ ಝಿಕಾ ಪ್ರಕರಣ ಪತ್ತೆ, 25 ಮಂದಿಯಲ್ಲಿ ಚಿಕೂನ್​ಗುನ್ಯಾ, ಡೆಂಘೆ ಆತಂಕ

ಮಹಾರಾಷ್ಟ್ರದಲ್ಲಿ ಸಾಲುಸಾಲು ವೈರಸ್​ಗಳು; ಮೊದಲ ಝಿಕಾ ಪ್ರಕರಣ ಪತ್ತೆ, 25 ಮಂದಿಯಲ್ಲಿ ಚಿಕೂನ್​ಗುನ್ಯಾ, ಡೆಂಘೆ ಆತಂಕ
ಪ್ರಾತಿನಿಧಿಕ ಚಿತ್ರ

Zika Virus: ಹೀಗೆ ಡೆಂಘೆ, ಝಿಕಾ, ಚಿಕೂನ್​ಗುನ್ಯಾ ಕಾಯಿಲೆಗಳು ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದ ಕ್ಷಿಪ್ರ ಪ್ರತಿಕ್ರಿಯಾ ತಂಡ ಹಳ್ಳಿಗಳಿಗೆ ತೆರಳಿ, ಸ್ಥಳೀಯರ ಬಳಿ ಮಾತುಕತೆ ನಡೆಸಿದೆ. ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದೆ.

TV9kannada Web Team

| Edited By: Lakshmi Hegde

Aug 01, 2021 | 12:59 PM

ಪುಣೆ: ಮಹಾರಾಷ್ಟ್ರ (Maharashtra)ದಲ್ಲಿ ಮೊದಲ ಝಿಕಾ ವೈರಸ್ (Zika Virus)​ ಪ್ರಕರಣ ಪತ್ತೆಯಾಗಿದೆ. ಪುಣೆಯ ಪುರಂದರ ಏರಿಯಾದ 50 ವರ್ಷದ ಮಹಿಳೆಯೊಬ್ಬರಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಅಷ್ಟೇ ಅಲ್ಲ, ಇವರಿಗೆ ಚಿಕೂನ್​ಗುನ್ಯಾ(Chikungunya) ಕೂಡ ಕಾಣಿಸಿಕೊಂಡಿದೆ. ಸದ್ಯ ಮಹಿಳೆ ಬಹುತೇಕ ಚೇತರಿಕೆ ಕಂಡಿದ್ದು, ಆಕೆಯ ಮನೆಯಲ್ಲಿ ಮತ್ಯಾರಿಗೂ ಝಿಕಾ ಲಕ್ಷಣಗಳಿಲ್ಲ ಎಂದು ಆರೋಗ್ಯ ಇಲಾಖೆ (Health Department) ತಿಳಿಸಿದೆ. ಪುರಂದರ ತೆಹ್ಸಿಲ್​​ನ ಬೆಲ್ಸಾರ್ ಗ್ರಾಮದಲ್ಲಿ ಜುಲೈ ಮೊದಲ ವಾರದಿಂದಲೂ ಹಲವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಅದರಲ್ಲಿ ಅನುಮಾನ ಹುಟ್ಟಿಸಿದ್ದ ಐವರ ಮಾದರಿಗಳನ್ನು ತಪಾಸಣೆಗಾಗಿ ಪುಣೆಯ ವೈರಾಲಜಿಯ ನ್ಯಾಶನಲ್​ ಇನ್​ಸ್ಟಿಟ್ಯೂಟ್​ಗೆ (NIV) ಕಳಿಸಲಾಗಿತ್ತು. ಮೂವರಿಗೆ ಚಿಕೂನ್​ಗುನ್ಯಾ ಪಾಸಿಟಿವ್​ ಬಂದಿತ್ತು.

ಚಿಕೂನ್​ಗುನ್ಯಾ ಪ್ರಕರಣ ಹೆಚ್ಚುತ್ತಿರುವುದು ಕಂಡುಬಂದ ಬೆನ್ನಲ್ಲೇ ಎನ್​ಐವಿಯ ತಜ್ಞರ ತಂಡ ಬೆಲ್ಸಾರ್​ ಮತ್ತು ಪರಿಂಚೆ ಗ್ರಾಮಗಳಿಗೆ ಭೇಟಿ ನೀಡಿ, 41 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ, ತೆಗೆದುಕೊಂಡು ಹೋಗಿ ತಪಾಸಣೆ ಮಾಡಿತ್ತು. ಅದರಲ್ಲೀಗ 25 ಜನರಲ್ಲಿ ಚಿಕೂನ್​ಗುನ್ಯಾ ಪಾಸಿಟಿವ್ ಬಂದಿದೆ. ಮೂವರಲ್ಲಿ ಡೆಂಘೆ ಜ್ವರ ಕಾಣಿಸಿಕೊಂಡಿದೆ ಹಾಗೂ 50ವರ್ಷದ ಈ ಮಹಿಳೆಯಲ್ಲಿ ಝಿಕಾ ವೈರಸ್​ ಪತ್ತೆಯಾಗಿದೆ.

ಹೀಗೆ ಡೆಂಘೆ, ಝಿಕಾ, ಚಿಕೂನ್​ಗುನ್ಯಾ ಕಾಯಿಲೆಗಳು ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದ ಕ್ಷಿಪ್ರ ಪ್ರತಿಕ್ರಿಯಾ ತಂಡ ಹಳ್ಳಿಗಳಿಗೆ ತೆರಳಿ, ಸ್ಥಳೀಯರ ಬಳಿ ಮಾತುಕತೆ ನಡೆಸಿದೆ. ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದೆ. ಪ್ರತಿ ಮನೆಗೂ ಹೋಗಿ ಸರ್ವೇ ನಡೆಸುತ್ತಿದೆ. ಜಿಲ್ಲಾಡಳಿತದಿಂದ ಎಲ್ಲ ರೀತಿಯ ಕ್ರಮಗಳನ್ನೂ ತೆಗೆದುಕೊಂಡು, ಸೊಳ್ಳೆ ನಿರ್ಮೂಲನೆ ಮಾಡಲಾಗುವುದು ಜನರು ಯಾವ ಕಾರಣಕ್ಕೂ ಗಾಬರಿಗೊಳ್ಳಬಾರದು ಎಂದು ಪುಣೆ ಜಿಲ್ಲಾಡಳಿತ ತಿಳಿಸಿದೆ.

ಇದನ್ನೂ ಓದಿ: ಜಮೀನಿಗೆ ಹಾಕಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು: ಮಾಲೀಕನನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ

The first Zika virus Case detect In Maharashtra

Follow us on

Related Stories

Most Read Stories

Click on your DTH Provider to Add TV9 Kannada