ಮುಂಬೈನಲ್ಲಿ 185 ಕೋಟಿ ರೂ.ಬೆಲೆಯ ಬಂಗಲೆ ಖರೀದಿ ಮಾಡಿದ ಸೂರತ್ನ ವಜ್ರದ ವ್ಯಾಪಾರಿ; ಇದು ಅವರಿಗಲ್ಲವಂತೆ !
ಧೋಲಾಕಿಯಾ ಕುಟುಂಬದವರು ಮೂಲತಃ ಅಮ್ರೇಲಿ ಜಿಲ್ಲೆಯ ದುಧಾಲಾ ಮೂಲದವರು. ಆಭರಣ ತಯಾರಿಕೆ, ವಜ್ರ ರಫ್ತು ಉದ್ಯಮ ನಡೆಸುವ ಒಡೆತನದ ಹರೇ ಕೃಷ್ಣಾ ಎಕ್ಸಪೋರ್ಟ್ ವಾರ್ಷಿಕ 7000 ಕೋಟಿ ರೂ.ವಹಿವಾಟು ನಡೆಸುತ್ತದೆ.

ಸೂರತ್: ಗುಜರಾತ್ನ ಸೂರತ್ನ ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಮತ್ತವರ ಕುಟುಂಬದವರು ಸೇರಿ ಮುಂಬೈನ ವರ್ಲಿಯಲ್ಲಿ, 185 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಈ ಬಂಗಲೆ ವರ್ಲಿಯಲ್ಲಿ ಕಡಲ ತೀರದಲ್ಲಿಯೇ ಇದೆ. ಒಟ್ಟು ಆರು ಅಂತಸ್ತಿನ ಬಂಗಲೆಯಾಗಿದ್ದು, 20 ಸಾವಿರ ಚದರ ಅಡಿ ಪ್ರದೇಶದಲ್ಲಿದೆ. ಈ ಹಿಂದೆ ಎಸ್ಸಾರ್ (Essar Group) ಗ್ರೂಪ್ ಮಾಲೀಕತ್ವದಲ್ಲಿದ್ದ ಬಂಗಲೆ ಇದೀಗ ಸಾವ್ಜಿ ಧೋಲಾಕಿಯಾ ತಮ್ಮ ಘನಶ್ಯಾಮ ಧೋಲಾಕಿಯಾ ಹೆಸರಿಗೆ ರಿಜಿಸ್ಟರ್ ಆಗಿದೆ. ಅಂದರೆ ಬಂಗಲೆ ಮಾಲೀಕರು ಘನಶ್ಯಾಮ ಅವರಾಗಿದ್ದಾರೆ.
ನಾವು ನಮ್ಮಲ್ಲಿ ಕೆಲಸ ಮಾಡುವ ಕೆಲಸಗಾರರು ಮತ್ತು ಅವರ ಕುಟುಂಬಗಳು ಉಳಿಯಲೆಂದು ಒಂದು ವಸತಿ ಕಟ್ಟಡವನ್ನು ಹುಡುಕುತ್ತಿದ್ದೆವು. ನಾವೀಗ ಅದನ್ನು ಖರೀದಿಸಿದ್ದೇವೆ. ಈ ಬಂಗಲೆ ನಮ್ಮ ಕೆಲಸದ ಸ್ಥಳ ಮತ್ತು ಕಚೇರಿಗೆ ಹತ್ತಿರದಲ್ಲೇ ಇದ್ದು, ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗಿದೆ ಎಂದು ಧೋಲಾಕಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಧೋಲಾಕಿಯಾ ಕುಟುಂಬದವರು ಮೂಲತಃ ಅಮ್ರೇಲಿ ಜಿಲ್ಲೆಯ ದುಧಾಲಾ ಮೂಲದವರು. ಆಭರಣ ತಯಾರಿಕೆ, ವಜ್ರ ರಫ್ತು ಉದ್ಯಮ ನಡೆಸುವ ಒಡೆತನದ ಹರೇ ಕೃಷ್ಣಾ ಎಕ್ಸಪೋರ್ಟ್ ವಾರ್ಷಿಕ 7000 ಕೋಟಿ ರೂ.ವಹಿವಾಟು ನಡೆಸುತ್ತದೆ. ಕಳೆದ 30ವರ್ಷಗಳಲ್ಲಿ ಇದೇ ಉದ್ಯಮದಲ್ಲೇ ತೊಡಗಿದ್ದಾರೆ. ತಮ್ಮಲ್ಲಿ ಕೆಲಸ ಮಾಡುವವರಿಗೆ ಪ್ರತಿವರ್ಷವೂ ಬೋನಸ್ ನೀಡುವ ಸಾವ್ಜಿ ಧೋಲಾಕಿಯಾ ಕುಟುಂಬ ಅತ್ಯುತ್ತಮವಾಗಿ ಕೆಲಸ ಮಾಡುವವರಿಗೆ ಕಾರು, ಮನೆಗಳನ್ನೆಲ್ಲ ಉಡುಗೋರೆ ರೂಪದಲ್ಲಿ ಕೊಡುತ್ತದೆ.
ಇದನ್ನೂ ಓದಿ: ಪೊಲೀಸರು ನನ್ನಿಂದ ಬಲವಂತವಾಗಿ ರಾಜ್ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ
Surat diamantaire Savji Dholakia buys Rs 185 crore Bungalow In Mumbai