Covid 19 Updates: ದೇಶದಲ್ಲಿ ಇಂದೂ 40 ಸಾವಿರ ದಾಟಿದ ಕೊರೊನಾ ಕೇಸ್​; ಚೇತರಿಕೆ ಪ್ರಮಾಣ ಶೇ.97

ದೇಶದಲ್ಲಿ 24ಗಂಟೆಯಲ್ಲಿ 39,258 ಮಂದಿ ಕೊರೊನಾದಿಂದ ಚೇತರಿಸಿಕೊಂದಿದ್ದಾರೆ. ಅಂದರೆ ಒಂದು ದಿನದಲ್ಲಿ ದಾಖಲಾದ ಕೊರೊನಾ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಕಡಿಮೆಯಾಗಿದೆ.

Covid 19 Updates: ದೇಶದಲ್ಲಿ ಇಂದೂ 40 ಸಾವಿರ ದಾಟಿದ ಕೊರೊನಾ ಕೇಸ್​; ಚೇತರಿಕೆ ಪ್ರಮಾಣ ಶೇ.97
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Aug 01, 2021 | 11:20 AM

ದೇಶದಲ್ಲಿ ಕೊರೊನಾ ಸೋಂಕಿನ (Covid 19)  ಪ್ರಮಾಣ ಮತ್ತೆ ಹೆಚ್ಚುತ್ತಿದೆ. ಇಂದು ಒಂದೇ ದಿನ 41,831 ಪ್ರಕರಣಗಳು ಪತ್ತೆಯಾಗಿದ್ದು, 541 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲ(Unionಯ ಮಾಹಿತಿ ನೀಡಿದೆ. ಒಂದು ದಿನದಲ್ಲಿ ಪತ್ತೆಯಾಗುವ ಕೊರೊನಾ ಪ್ರಕರಣಗಳಲ್ಲಿ ತುಸು ಇಳಿಮುಖ ಕಂಡಿತ್ತು. ಆದರೆ ಇದೀಗ ಸತತ ಐದನೇ ದಿನಕ್ಕೆ 40 ಸಾವಿರಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿದ್ದು, ಕೊರೊನಾ ಮೂರನೇ ಅಲೆ ಶುರುವಾಗಿಬಿಟ್ಟಿದೆಯಾ ಎಂಬ ಅನುಮಾನ ಕಾಡುತ್ತಿದೆ.

ಕೇರಳದಲ್ಲಿ ಕೊರೊನಾ ಮತ್ತೆ ಮಿತಿಮೀರುತ್ತಿದೆ. ಇಂದು 20,624 ಪ್ರಕರಣಗಳು ದಾಖಲಾಗಿವೆ. ಅದು ಬಿಟ್ಟರೆ ಮಹಾರಾಷ್ಟ್ರದಲ್ಲಿ 6959, ಆಂಧ್ರಪ್ರದೇಶದಲ್ಲಿ 2058, ಕರ್ನಾಟಕದಲ್ಲಿ 1987 ಮತ್ತು ತಮಿಳುನಾಡಿನಲ್ಲಿ 1986 ಕೇಸ್​ಗಳು ದಾಖಲಾಗಿವೆ. ದೇಶದಲ್ಲಿ ದಾಖಲಾದ ಒಟ್ಟು ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಈ ಐದು ರಾಜ್ಯಗಳ ಪಾಲು ಶೇ.80.36ರಷ್ಟಿದೆ. ಅದರಲ್ಲೂ ಕೇರಳ ರಾಜ್ಯವೇ ಶೇ.49.3 ಪಾಲು ಹೊಂದಿದೆ.

ಇನ್ನು ದೇಶದಲ್ಲಿ 24ಗಂಟೆಯಲ್ಲಿ 39,258 ಮಂದಿ ಕೊರೊನಾದಿಂದ ಚೇತರಿಸಿಕೊಂದಿದ್ದಾರೆ. ಅಂದರೆ ಒಂದು ದಿನದಲ್ಲಿ ದಾಖಲಾದ ಕೊರೊನಾ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಕಡಿಮೆಯಾಗಿದೆ. ಆದಾಗ್ಯೂ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 97.36ರಷ್ಟಿರುವುದು ತುಸು ಸಮಾಧಾನಕರ ಸಂಗತಿಯಾಗಿದೆ. ಇನ್ನೊಂದೆಡೆ ಕೊರೊನಾ ಲಸಿಕೆ ಅಭಿಯಾನವೂ ಭರದಿಂದ ಸಾಗುತ್ತಿದ್ದು, ಇದುವರೆಗೆ 47,02,98,596 ಮಂದಿ ವ್ಯಾಕ್ಸಿನ್​ ಪಡೆದಿದ್ದಾರೆ.

ಇದನ್ನೂ ಓದಿ: Poetry : ಅವಿತಕವಿತೆ ; ಹಸಿವಿನ ಮುಂದೆ ಧ್ಯಾನ, ಮುದ್ರಿಕೆ, ನಾಥಪಟ್ಟ ಇವೆಲ್ಲವೂ ಶೂನ್ಯ

India Report over 40 thousand covid 19 cases in 24 hours