ಜಾರ್ಖಂಡ್​ ನ್ಯಾಯಾಧೀಶರ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ನೀಡಲು ಸಿಎಂ ಹೇಮಂತ್​ ಸೊರೆನ್​ ನಿರ್ಧಾರ

ಜಾರ್ಖಂಡ್​ ನ್ಯಾಯಾಧೀಶರ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ನೀಡಲು ಸಿಎಂ ಹೇಮಂತ್​ ಸೊರೆನ್​ ನಿರ್ಧಾರ
ಜಾರ್ಖಂಡ ಮುಖ್ಯಮಂತ್ರಿ

ಶುಕ್ರವಾರ ಮುಖ್ಯಮಂತ್ರಿ ಸೊರೆನ್​ ಅವರು ನ್ಯಾಯಾಧೀಶರ ಕುಟುಂಬವನ್ನು ಭೇಟಿಯಾಗಿ, ಸಾಂತ್ವನ ಹೇಳಿದ್ದರು. ಹಾಗೇ, ಜಡ್ಜ್​ ಸಾವಿನ ಹಿಂದಿನ ಕಾರಣವನ್ನು ಕಂಡು ಹಿಡಿದು ಶೀಘ್ರವೇ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

TV9kannada Web Team

| Edited By: Lakshmi Hegde

Aug 01, 2021 | 10:05 AM

ಇತ್ತೀಚೆಗೆ ಜಾರ್ಖಂಡ್​ನಲ್ಲಿ ನಡೆದ ನ್ಯಾಯಾಧೀಶ ಉತ್ತಮ್​ ಆನಂದ್​ ಹತ್ಯೆಯ ಪ್ರಕರಣವನ್ನು ಸಿಬಿಐಗೆ ವಹಿಸಲು ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್​ ನಿರ್ಧರಿಸಿದ್ದಾರೆ. ಧನ್​ಬಾಗ್​ ಜಿಲ್ಲಾ ಮತ್ತು ಸೆಶನ್ಸ್​ ಕೋರ್ಟ್​ ನ್ಯಾಯಾಧೀಶರಾದ ಉತ್ತಮ್​ ಆನಂದ್​ ಅವರು ಮುಂಜಾನೆ ಜಾಗಿಂಗ್​ ಮಾಡುತ್ತಿದ್ದಾಗ, ಟೆಂಪೋವೊಂದು ಅವರಿಗೆ ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದು ಹೋಗಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದಾದ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಕೇಸ್​ನ್ನು ಸಿಬಿಐಗೆ ವಹಿಸಲು ಸಿಎಂ ನಿರ್ಧರಿಸಿದ್ದಾರೆ.

49 ವರ್ಷದ ಈ ನ್ಯಾಯಾಧೀಶ ಇತ್ತೀಚೆಗೆ ಹೈಪ್ರೊಫೈಲ್​ ಪ್ರಕರಣದ ವಿಚಾರಣೆಯೊಂದನ್ನು ನಡೆಸಿ, ಅದರಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಹತ್ಯೆಗೀಡಾಗಿದ್ದಾರೆ. ಮೊದಲು ಸಹಜ ಅಪಘಾತ ಎಂದೇ ಹೇಳಲಾಗಿತ್ತು. ಆದರೆ ಸಿಸಿಟಿವಿ ದೃಶ್ಯ ನೋಡುತ್ತಿದ್ದಂತೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ಮಧ್ಯೆ ಜಾರ್ಖಂಡ ಸರ್ಕಾರ, ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT)ವನ್ನು ರಚಿಸಿತ್ತು.

ಶುಕ್ರವಾರ ಮುಖ್ಯಮಂತ್ರಿ ಸೊರೆನ್​ ಅವರು ನ್ಯಾಯಾಧೀಶರ ಕುಟುಂಬವನ್ನು ಭೇಟಿಯಾಗಿ, ಸಾಂತ್ವನ ಹೇಳಿದ್ದರು. ಹಾಗೇ, ಜಡ್ಜ್​ ಸಾವಿನ ಹಿಂದಿನ ಕಾರಣವನ್ನು ಕಂಡು ಹಿಡಿದು ಶೀಘ್ರವೇ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಘಟನೆಯ ಬಗ್ಗೆ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಕೂಡ ಈ ಬಗ್ಗೆ ಗಂಭೀರವಾಗಿ ಗಮನಹರಿಸಿದೆ. ನ್ಯಾಯಾಧೀಶರ ಹತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಾಗೇ, ಈ ಕೇಸ್​​ನ ತನಿಖೆ ಆದಷ್ಟು ಬೇಗ ಮುಗಿಸಿ, ತಪ್ಪಿತಸ್ಥರನ್ನು ಕಂಡುಹಿಡಿಯುವಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಿ ಎಂದು ಜಾರ್ಖಂಡ ಹೈಕೋರ್ಟ್​ಗೆ ಸೂಚನೆಯನ್ನೂ ನೀಡಿದೆ. ಪೊಲೀಸರು ಈಗಾಗಲೇ ಮೂವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಯನ್ನೂ ನಡೆಸಿದ್ದಾರೆ.

ಇದನ್ನೂ ಓದಿ: Viral Video: ಜಾರು ಬಂಡಿಯಲ್ಲಿ ಪಾಂಡಾಗಳ ಭರ್ಜರಿ ತುಂಟಾಟ; ಇದು ನಿಮ್ಮ ಬಾಲ್ಯವನ್ನು ನೆನಪಿಸೀತು!

Follow us on

Related Stories

Most Read Stories

Click on your DTH Provider to Add TV9 Kannada