ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿರುವವರನ್ನು ಪ್ರೇರೇಪಿಸಲು ಕಸ್ಟಮೈಸ್ಡ್ ಮರ್ಕಂಡೈಸ್ ಲಾಂಚ್ ಮಾಡಿದ ಇಸ್ರೋ

ಈ ಕಾರ್ಯಕ್ರಮವನ್ನು ವರ್ಚ್ಯುಯಲ್ ಆಗಿ ಲಾಂಚ್​ ಮಾಡಲಾಗುವುದು. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಚೇರ್ಮನ್  ಕೆ ಸಿವನ್ ಅವರು, ಅಲ್ಪಾವಧಿಯಲ್ಲೇ ಈ ಕಾರ್ಯಕ್ರಮ ಬಹಳಷ್ಟು ಜನರ ಗಮನ ಸೆಳೆದಿರುವುದು ತಮಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿರುವವರನ್ನು ಪ್ರೇರೇಪಿಸಲು ಕಸ್ಟಮೈಸ್ಡ್ ಮರ್ಕಂಡೈಸ್ ಲಾಂಚ್ ಮಾಡಿದ ಇಸ್ರೋ
ಇಸ್ರೋ ಮರ್ಕಂಡೈರ್ಸ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 01, 2021 | 12:28 AM

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಥೀಮ್ ಆಧಾರಿತ ಮರ್ಚಂಡೈಸ್ ಪ್ರೋಗ್ರಾಂ ಅನ್ನು ಇಸ್ರೋ ಮರ್ಕಂಡೈಸ್​ನೊಂದಿಗೆ ನೋಂದಾಯಿಸಲ್ಪಟ್ಟಿರುವ ಒಂಬತ್ತರಲ್ಲಿ ಮೊದಲನೆಯದನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅಧಿಕೃತವಾಗಿ ಲಾಂಚ್​ ಮಾಡಿದೆ ಎಂದು ಪ್ರೆಸ್ ಟ್ರಸ್ಟ್​ ಆಫ್ ಇಂಡಿಯಾ ಸುದ್ದಿಸಂಸ್ಥೆಯು ಗುರುವಾರದಂದು ವರದಿ ಮಾಡಿದೆ.ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು, ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಆಸಕ್ತಿಯನ್ನು ಮೂಡಿಸುವಲ್ಲಿ ಕಸ್ಟಮೈಸ್ಡ್ ಮಾಡಿದ ಥೀಮ್-ಆಧಾರಿತ ಉತ್ಪನ್ನಗಳು ಮಹತ್ವದ ಮತ್ತು ‘ಗೇಮ್-ಚೇಂಜಿಂಗ್’ ಪಾತ್ರವನ್ನು ನಿರ್ವಹಿಸುತ್ತವೆ ಎಂದು ಇಸ್ರೋ ತಾನು ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಕಾರ್ಯಕ್ರಮವನ್ನು ವರ್ಚ್ಯುಯಲ್ ಆಗಿ ಲಾಂಚ್​ ಮಾಡಲಾಗುವುದು. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಚೇರ್ಮನ್  ಕೆ ಸಿವನ್ ಅವರು, ಅಲ್ಪಾವಧಿಯಲ್ಲೇ ಈ ಕಾರ್ಯಕ್ರಮ ಬಹಳಷ್ಟು ಜನರ ಗಮನ ಸೆಳೆದಿರುವುದು ತಮಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

‘ನಿಮ್ಮ ಪ್ರಯತ್ನಗಳ ಮೂಲಕ ತಯಾರಾಗಿರುವ ಉತ್ಪನ್ನಗಳು ಈಶಾನ್ಯ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಪ್ರತಿ ಮೂಲೆಗೆ ತಲುಪುತ್ತವೆ ಮತ್ತ ಇಸ್ರೋದ ಕತೆಯನ್ನು ಯುವಕರು ಮತ್ತು ಮಕ್ಕಳಲ್ಲಿ ಪ್ರಚುರ ಪಡಿಸುತ್ತವೆ ಎಂಬ ಬಲವಾದ ನಂಬಿಕೆ ನನಗಿದೆ,’ ಎಂದು ಸಿವನ್ ಹೇಳಿದ್ದಾರೆ.

ಮುಂದುವರಿದು ಹೇಳಿರುವ ಸಿವನ್ ಅವರು, ಮರ್ಕಂಡೈಸ್ ಕಾರ್ಯಕ್ರಮದ ಉದ್ದೇಶ ವ್ಯಾಪಾರ ಅಥವಾ ಲಾಭಾಂಶವಾಗಿರದೆ, ಆಟಿಕೆ, ನೀವೇ-ಮಾಡಿ-ನೋಡಿ ಕಿಟ್​ ಮತ್ತು ಟಿ-ಶರ್ಟ್​ಗಳ ಮೂಲಕ ಎಲ್ಲರನ್ನು ತಲುಪುವುದು ಮತ್ತು ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.

ಇಲ್ಲಿಯವರೆಗೆ ನೋಂದಾಯಿತ ಇಸ್ರೋ ಮರ್ಕಂಡೈಸರ್​ಗಳೆಂದರೆ, ಅಂಕುರ್ ಹಾಬಿ ಸೆಂಟರ್, (ಗುಜರಾತ್), ಬ್ಲ್ಯಾಕ್ ವೈಟ್ ಆರೆಂಜ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್ (ಮಹಾರಾಷ್ಟ್ರ), ಇಂಡಿಕ್ ಇನ್ಸ್‌ಪಿರೇಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಮಹಾರಾಷ್ಟ್ರ), ಧ್ರುವ ಸ್ಪೇಸ್ ಪ್ರೈವೇಟ್ ಲಿಮಿಟೆಡ್ (ತೆಲಂಗಾಣ), ಇಇಎನ್​ಜಿಎನ್ ಖಾಸಗಿ ಲಿಮಿಟೆಡ್ (ತಮಿಳುನಾಡು), ಇಮ್ಯಾಜಿಕ್ ಕ್ರಿಯೇಟಿವ್ಸ್ ಪ್ರೈವೇಟ್ ಲಿಮಿಟೆಡ್ (ಕರ್ನಾಟಕ), ಟಚ್‌ಸ್ಟೋನ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ (ಕರ್ನಾಟಕ), ಮಂಕುತಿಮ್ಮ ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್ (ಕರ್ನಾಟಕ) ಮತ್ತು ನಿರ್ದಿಷ್ಟ ಇಂಪಲ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಪಂಜಾಬ್).

ಇದನ್ನೂ ಓದಿ: ಭೂಮಿಯ ಮೇಲೆ ನಿಗಾ ಇಡಲು ಬಾಹ್ಯಾಕಾಶಕ್ಕೆ ಉಪಗ್ರಹಗಳ ರೂಪದಲ್ಲಿ ಎರಡು ಕಣ್ಣುಗಳನ್ನು ಇಸ್ರೋ ಕಳಿಸಲಿದೆ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ