Anemia: ರಕ್ತಹೀನತೆ ಸಮಸ್ಯೆ ಎಂದು ಚಿಂತಿಸುವ ಅಗತ್ಯ ಇಲ್ಲ, ಈ ಐದು ಆಹಾರವನ್ನು ದಿನಕ್ಕೆ ಒಂದು ಬಾರಿ ಸೇವಿಸಿ
ದೇಹದಲ್ಲಿ ಕಡಿಮೆ ರಕ್ತದೊತ್ತಡವನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ಇದು ತಲೆತಿರುಗುವಿಕೆ, ನಿಶಕ್ತಿ, ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು. ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿಯೂ ರಕ್ತದ ಕೊರತೆ ಉಂಟಾಗುತ್ತದೆ.

ದೇಹದಲ್ಲಿ ರಕ್ತ ಕಡಿಮೆ ಪ್ರಮಾಣದಲ್ಲಿ ಇದೆ ಎಂದರೆ ರಕ್ತಹೀನತೆಯಿಂದ ನಾವು ಬಳಲುತ್ತಿದ್ದೇವೆ ಎಂದು ಅರ್ಥ. ಇದು ಕ್ರಮೇಣವಾಗಿ ಅನೇಕ ರೋಗಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಜೀವಕ್ಕೆ ಹೆಚ್ಚು ಅಪಾಯಕಾರಿ. ದೇಹದಲ್ಲಿ ಕಡಿಮೆ ರಕ್ತದೊತ್ತಡವನ್ನು ರಕ್ತಹೀನತೆ (Anemia) ಎಂದು ಕರೆಯಲಾಗುತ್ತದೆ. ಇದು ತಲೆತಿರುಗುವಿಕೆ, ನಿಶಕ್ತಿ, ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು. ದೇಹದಲ್ಲಿ ಕಬ್ಬಿಣಾಂಶದ ಕೊರತೆ (Iron deficiency) ಯಿಂದಾಗಿಯೂ ರಕ್ತದ ಕೊರತೆ ಉಂಟಾಗುತ್ತದೆ. ಇದಕ್ಕಾಗಿ ನೀವು ಪ್ರತಿ ಬಾರಿಯೂ ವೈದ್ಯರ ಬಳಿ ಹೋಗಬೇಕಾಗಿಲ್ಲ. ಬದಲಾಗಿ ಕೆಲವು ಆಹಾರಗಳನ್ನು ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಯಾವೆಲ್ಲಾ ಆಹಾರವನ್ನು ಸೇವಿಸಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
1. ಬೀಟ್ರೂಟ್ ಸೇವಿಸಿ ಬೀಟ್ರೂಟ್ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಪ್ರಮಾಣದ ಕಬ್ಬಿಣಾಂಶವನ್ನು ಹೊಂದಿದೆ. ಬೀಟ್ರೂಟ್ ದೇಹವನ್ನು ನಿರ್ವಿಷಗೊಳಿಸುವುದಲ್ಲದೆ, ಹಿಮೋಗ್ಲೋಬಿನ್‌ನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುತ್ತದೆ.
2. ಸೇಬು ದಿನಕ್ಕೆ ಒಂದು ಸೇಬು ತಿನ್ನುವುದರಿಂದ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ ಎಂದು ಹೇಳಲಾಗುತ್ತದೆ. ಸೇಬನ್ನು ತಿನ್ನುವುದರಿಂದ ದೇಹ ಆರೋಗ್ಯವಾಗಿರಿಸುವುದಲ್ಲದೆ, ದೇಹದಲ್ಲಿ ರಕ್ತದ ಹರಿವನ್ನು ಇದು ಹೆಚ್ಚಿಸುತ್ತದೆ. ಸೇಬು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ.
3. ದಾಳಿಂಬೆ ದಾಳಿಂಬೆಯಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಮೆಗ್ನೀಸಿಯಮ್, ಪೊಟ್ಯಾಶಿಯಂ, ಕಬ್ಬಿಣ ಮತ್ತು ವಿಟಮಿನ್ ಗಳಂತಹ ಪೋಷಕಾಂಶಗಳು ಹೇರಳವಾಗಿವೆ. ದಾಳಿಂಬೆ ದೇಹದಲ್ಲಿ ರಕ್ತವನ್ನು ಹೆಚ್ಚಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ.
4. ನಟ್ಸ್ ಖರ್ಜೂರ, ವಾಲ್ನಟ್ಸ್, ಬಾದಾಮಿ ಮೊದಲಾದ ಒಣಗಿದ ಹಣ್ಣುಗಳಲ್ಲಿ ಕಬ್ಬಿಣದಂತಹ ಅಂಶ ಸಮೃದ್ಧವಾಗಿವೆ. ಇವುಗಳು ಕೆಂಪು ರಕ್ತ ಕಣಗಳು ರಕ್ತದಲ್ಲಿ ವೇಗವಾಗಿ ಬೆಳೆಯಲು ಕಾರಣವಾಗುತ್ತವೆ.
5. ಪಾಲಕ್ ಸೊಪ್ಪು ದೇಹದಲ್ಲಿ ರಕ್ತಹೀನತೆ ಇರುವ ಜನರು ಪಾಲಕ್ ಸೊಪ್ಪು ತಿನ್ನಬೇಕು. ಇದರಲ್ಲಿ ಲೆಟಿಸ್ ಕಬ್ಬಿಣದಂತಹ ಅಂಶ ಸಮೃದ್ಧವಾಗಿದೆ. ದೇಹಕ್ಕೆ ಬೇಕಾದಷ್ಟು ರಕ್ತವನ್ನು ಪೂರೈಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಇದನ್ನೂ ಓದಿ: Health Tips: ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಬೀಟ್ರೂಟ್ ಉಪಯೋಗದ ಬಗ್ಗೆ ತಿಳಿಯಲೇಬೇಕು..
Green Chili Benefits: ಹಸಿರು ಮೆಣಸಿನಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಮೆಣಸನ್ನು ಬಿಡುವುದಿಲ್ಲ
Published On - 7:23 am, Sun, 1 August 21