Tirupati Laddu History: ತಿರುಪತಿ ಲಡ್ಡುವನ್ನು ಹೇಗೆ ತಯಾರು ಮಾಡುತ್ತಾರೆ? ಇತಿಹಾಸವೇನು? ಕುತೂಹಲಕಾರಿ ಸಂಗತಿ ಇಲ್ಲಿದೆ

ತಿರುಪತಿಯಲ್ಲಿ ಪ್ರಸಾದವಾಗಿ ನೀಡಲಾಗುವ ಲಡ್ಡುವನ್ನು ಮೊದಲಿಗೆ 1715 ಆಗಸ್ಟ್ 2ರಲ್ಲಿ ತಯಾರಿಸಲಾಯಿತು. ಇದೀಗ 302ನೇ ವರ್ಷಕ್ಕೆ ಕಾಲಿಟ್ಟಿದೆ. ಹಿಟ್ಟು, ಸಕ್ಕರೆ ತುಪ್ಪ, ಎಣ್ಣೆ, ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್​ಗಳನ್ನು ಸೇರಿಸಿ ತಯಾರಿಸುವ ಲಡ್ಡು ಶ್ರೀಮಂತ ದೇವಾಲಯ ಅನಿಸಿಕೊಂಡಿರುವ ತಿರುಪತಿಯಲ್ಲಿ ನೀಡುವ ಪ್ರಸಾದವಾಗಿದೆ.

Tirupati Laddu History: ತಿರುಪತಿ ಲಡ್ಡುವನ್ನು ಹೇಗೆ ತಯಾರು ಮಾಡುತ್ತಾರೆ? ಇತಿಹಾಸವೇನು? ಕುತೂಹಲಕಾರಿ ಸಂಗತಿ ಇಲ್ಲಿದೆ
ತಿರುಪತಿ ಲಡ್ಡು
Follow us
TV9 Web
| Updated By: shruti hegde

Updated on:Aug 03, 2021 | 12:10 PM

ತಿರುಪತಿಯಲ್ಲಿನ ತಿರುಮಲ ವೆಂಕಟೇಶ್ವರ ದೇವಸ್ಥಾನ ಎಷ್ಟು ಪ್ರಸಿದ್ಧತೆ ಪಡೆದಿದೆಯೋ ಅಷ್ಟೇ ತಿರುಪತಿ ಲಡ್ಡು ಕೂಡಾ ಭಕ್ತರಿಗೆ ಇಷ್ಟವಾದ ಪ್ರಸಾದ. ತಿರುಪತಿಗೆ ಹೋಗಿದ್ದೆ ಅಂದಾಕ್ಷಣವೇ ಮೊದಲು ಕೇಳುವ ಪ್ರಶ್ನೆ ಲಡ್ಡು ತಂದಿದೀರಾ?! ಕೆಲವರು ತಿರುಮಲನ ಆಶೀರ್ವಾದ ಪಡೆಯಲು ತಿರುಪತಿಗೆ ಹೋದರೆ ಇನ್ನು ಕೆಲವರು ಜೀವನದಲ್ಲಿ ಒಂದು ಬಾರಿಯಾದರೂ ತಿರುಪತಿ ಲಡ್ಡು ಸವಿಯಲೇ ಬೇಕು ಅನ್ನುತ್ತಾರೆ. ತಿರುಪತಿಯಲ್ಲಿನ ಟಿಟಿಡಿ ಸ್ವಾಯತ್ತ ಟ್ರಸ್ಟ್ ಇದು ತಿರುಪತಿ ದೆವಸ್ಥಾನವನ್ನು ನೋಡಿಕೊಳ್ಳುವ ಟ್ರಸ್ಟ್ ಆಗಿದ್ದು, ರುಚಿಕರವಾದ ಪದಾರ್ಥವನ್ನು ತಯಾರಿಸಲು, ಭಕ್ತರಿಗೆ ಬಡಿಸಲು ಮತ್ತು ಮಾರಾಟ ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿದೆ.

ಇತಿಹಾಸ ತಿರುಪತಿಯಲ್ಲಿ ಪ್ರಸಾದವಾಗಿ ನೀಡಲಾಗುವ ಲಡ್ಡುವನ್ನು ಮೊದಲಿಗೆ 1715 ಆಗಸ್ಟ್ 2ರಲ್ಲಿ ತಯಾರಿಸಲಾಯಿತು. ಇದೀಗ 302ನೇ ವರ್ಷಕ್ಕೆ ಕಾಲಿಟ್ಟಿದೆ. ಹಿಟ್ಟು, ಸಕ್ಕರೆ ತುಪ್ಪ, ಎಣ್ಣೆ, ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್​ಗಳನ್ನು ಸೇರಿಸಿ ತಯಾರಿಸುವ ಲಡ್ಡು ಶ್ರೀಮಂತ ದೇವಾಲಯ ಅನಿಸಿಕೊಂಡಿರುವ ತಿರುಪತಿಯಲ್ಲಿ ನೀಡುವ ಪ್ರಸಾದವಾಗಿದೆ. ವೆಂಕಟೇಶ್ವರ ದೇವರಲ್ಲಿ ಇಷ್ಟಾರ್ಥಗಳನ್ನು ಬೇಡಿಕೊಂಡ ಬಳಿಕ ಬಾಯಿ ಸಿಹಿ ಮಾಡುವ ಈ ಲಡ್ಡುವಿಗೆ ವಿಶೇಷ ಬೇಡಿಕೆ ಇದೆ.

ದೇವಾಲಯವು ನೀಡುವ ಇತರ ಪ್ರಸಾದಗಳಿಗಿಂತ ಲಡ್ಡು ಯಾತ್ರಿಕರಲ್ಲಿ ಹೆಚ್ಚು ಜನಪ್ರಿಯವಾಗಿದೆ. 300 ಗ್ರಾಂ ಲಡ್ಡು ಸಾಮಾನ್ಯವಾಗಿ 25 ರೂಪಯಿ ಇದೆ. ಉತ್ತಮ ಸಬ್ಸಿಡಿ ದರದಲ್ಲಿ ಲಡ್ಡು ನೀಡುತ್ತಿದ್ದರೂ ಉತ್ತಮ ಗುಣಮಟ್ಟದ ಪದಾರ್ಥದ ಬಳಕೆಯು ದುಬಾರಿಯಿದೆ ಎಂದು ಟಿಟಿಡಿ ಟ್ರಸ್ಟ್ ಹೇಳಿದೆ. ಯಾತ್ರಾರ್ಥಿಗಳಿಗೆ ಕೇವಲ 10 ರೂಪಾಯಿಯಲ್ಲಿ ಕಡಿಮೆ ದರದಲ್ಲಿ ಎರಡು ಲಡ್ಡುಗಳನ್ನು ನೀಡಲಾಗುತ್ತದೆ.

ದೇವಾಲಯದಲ್ಲಿ ಹಣ ಪಡೆದ ಬಳಿಕ ಟೋಕನ್ ನೀಡುತ್ತಾರೆ. ಆ ಬಳಿಕ ಭಕ್ತರು ಲಡ್ಡು ಕೊಳ್ಳಬಹುದು. ಕೆಲವು ಬಾರಿ ಸಿಹಿ ಪದಾರ್ಥಗಳನ್ನು ದೆಹಲಿ ಸೇರಿದಂತೆ ಇತರ ಭಾಗಗಳಲ್ಲಿಯೂ ತಯಾರಿಸಲಾಗುತ್ತದೆ. ಪ್ರಸಾದ ಮಾರಾಟದ ಮೂಲಕ ದೇವಾಲಯವು ಹಣ ಗಳಿಸುತ್ತದೆ. ದೇವಸ್ಥಾನದ ಪ್ರಾಥಮಿಕ ಆದಾಯ ಮೂಲ ಇದಾಗಿದೆ.

ತಯಾರಿಸುವ ವಿಧಾನ ಟಿಟಿಡಿ ಟ್ರಸ್ಟ್ ಪ್ರತಿ ದಿನ 30,000 ಲಡ್ಡುಗಳನ್ನು ತಯಾರಿಸುತ್ತದೆ. ಬ್ರಹ್ಮ ಮಹೋತ್ಸವದ ಸಮಯದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಇನ್ನೂ ಹೆಚ್ಚಿನ ಲಡ್ಡುಗಳನ್ನು ತಯಾರಿಸಲಾಗುತ್ತದೆ.

ಲಡ್ಡು ಸೇರಿದಂತೆ ಇತರ ಸಿಹಿ ತಿಂಡಿಗಳ ತಯಾರಿಕೆಯಲ್ಲಿ 270 ರಿಂದ 620 ಜನರು ಕೆಲಸ ಮಾಡುತ್ತಾರೆ. ಹಾಗಿರುವಾಗ ಲಡ್ಡುವಿನ ತಯಾರಿಕೆಯ ವಿಶೇಷತೆ ಏನು? ಹೇಗೆ ಈ ವಿಶೇಷ ಲಡ್ಡುವನ್ನು ತಯಾರಿಸಲಾಗುತ್ತದೆ ಎಂಬ ಕುತೂಹಲ ಕೆರಳಿರಬೇಕಲ್ಲವೇ? ಈ ಕೆಳಗಿನಂತಿದೆ ತಯಾರಿಸುವ ವಿಧಾನ.

ತಿರುಪತಿಯಲ್ಲಿ ಒಂದು ದಿನಕ್ಕೆ ತಯಾರಿಸುವ ಲಡ್ಡುವಿನಲ್ಲಿ ಬಳಸುವ ಪದಾರ್ಥಗಳ ಪ್ರಮಾಣ

ಹಿಟ್ಟು – 10 ಟೋನ್ ಗೋಡಂಬಿ- 700 ಕೆಜಿ ಶುದ್ಧ ತುಪ್ಪ – 5—ಲೀಟರ್ ಸಕ್ಕರೆ- 10 ಟೋನ್ ಏಲಕ್ಕಿ- 150 ಗ್ರಾಂ ಸಕ್ಕರೆ ಕ್ಯಾಂಡಿ- 500 ಕೆಜಿ ಒಣದ್ರಾಕ್ಷಿ- 540ಕೆಜಿ

ಲಡ್ಡು ತಯಾರಿಕೆಗೆ ಉತ್ತಮವಾದ ಪಾಕ ವಿಧಾನ ಮತ್ತು ಅಳತೆಯ ಪ್ರಮಾಣದ ಮೇರೆಗೆ ರುಚಿ ಹೆಚ್ಚುತ್ತದೆ. ತಯಾರಿಸಿದ ಲಡ್ಡುವನ್ನು ಮುಚ್ಚಿದ ಪಾತ್ರೆಯಲ್ಲಿ ಶೇಖರಿಸಿಡಲಾಗುತ್ತದೆ. ಸರಿಸುಮಾರು 10 ರಿಂದ 15 ದಿನಗಳ ಕಾಲ ಸಂಗ್ರಹಿಸಿ ಇಡಬಹುದು.

ಇದನ್ನು ಓದಿ:

Tirupati Temple : ತಿರುಪತಿ ದೇವಾಲಯದ ಹುಂಡಿ ಹಣ ಎಣಿಕೆ; 24 ಗಂಟೆಗಳಲ್ಲಿ 1.53 ಕೋಟಿ ರೂ. ಸಂಗ್ರಹ

ತಿರುಪತಿ ವೆಂಕಟೇಶ್ವರ ಸ್ವಾಮಿ ದೇವರಿಗೆ 4 ಕೋಟಿ ರೂ.ಮೌಲ್ಯದ ಬಂಗಾರದ ಖಡ್ಗ ಸಮರ್ಪಣೆ; ಫೋಟೋಗಳು ಇಲ್ಲಿವೆ..

Published On - 11:57 am, Tue, 3 August 21

ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ