Health Tips: ಅರಿಶಿಣ ನೀರು ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ತಿಳಿಯಿರಿ
ಮನೆಯಲ್ಲಿ ಬಳಸುವ ಅರಿಶಿಣವನ್ನು ಸೇವಿಸುವ ಮೂಲಕ ಆರೋಗ್ಯ ಸುಧಾರಿಸುತ್ತದೆ. ಅದೆಷ್ಟೋ ಅರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಹಾಗಿರುವಾಗ ಅರಿಶಿಣವನ್ನು ಹೇಗೆ ಸೇವಿಸಬೇಕು ಮತ್ತು ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಪ್ರತಿನಿತ್ಯವೂ ನಾವು ಆರೋಗ್ಯದ ಕುರಿತಾಗಿಯೇ ಹೆಚ್ಚು ಯೋಚಿಸುತ್ತೇವೆ. ದೇಹದ ಆರೋಗ್ಯ ಸುಧಾರಿಸಲು ಎಷ್ಟೆಲ್ಲಾ ಮನೆ ಮದ್ದುಗಳನ್ನು ಸೇವಿಸುತ್ತೇವೆ. ಹಾಗಿರುವಾಗ ಮನೆಯಲ್ಲಿಯೇ ಸಿಗುವ ಕೆಲ ಪದಾರ್ಥಗಳಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಮನೆಯಲ್ಲಿ ಬಳಸುವ ಅರಿಶಿಣವನ್ನು ಸೇವಿಸುವ ಮೂಲಕ ಆರೋಗ್ಯ ಸುಧಾರಿಸುತ್ತದೆ. ಅದೆಷ್ಟೋ ಅರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಹಾಗಿರುವಾಗ ಅರಿಶಿಣವನ್ನು ಹೇಗೆ ಸೇವಿಸಬೇಕು ಮತ್ತು ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಆಯುರ್ವೇದದಲ್ಲಿ ಅರಿಶಿಣಕ್ಕೆ ಮಹತ್ವದ ಸ್ಥಾನವಿದೆ. ಆರೋಗ್ಯದ ಜತೆಗೆ ಚರ್ಮದ ಆರೋಗ್ಯಕ್ಕೂ ಸಹ ಅನೇಕ ಪ್ರಯೋಜನಗಳಿವೆ. ಅರಿಶಿಣ ಕಷಾಯ ಮಾಡಿ ಸವಿಯುವುದರ ಮೂಲಕ ಅರಿಶಿಣದ ಆರೋಗ್ಯ ಪ್ರಯೋಜನಗಳನ್ನು ಪಡೆಯಲಾಗುತ್ತದೆ.
ಒಂದು ಚಿಟಿಕೆ ನೀರನ್ನು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಬೇಕು. ಈ ಪಾನೀಯವನ್ನು ತಯಾರಿಸಲು ತಾಜಾ ಅರಿಶಿಣ ಅಥವಾ ಮನೆಯಲ್ಲಿಯೇ ಬೆಳೆದ ಅರಿಶಿಣವನ್ನು ಬಳಸುವುದು ಉತ್ತಮ. ಈ ಅರಿಶಿಣದ ನೀರನ್ನು ಸೇವಿಸುವುದರ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆರಂಭದಲ್ಲಿ ಅರಿಶಿಣದ ನೀರು ಸೇವಿಸಲು ಹೆಚ್ಚು ಇಷ್ಟವಾಗುವುದಿಲ್ಲ. ಕೆಲವರಿಗೆ ಅರಿಶಿಣದ ರುಚಿ ಹಿಡಿಸದಿರಬಹುದು. ಆದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನವನ್ನು ನೀಡುವ ಇವುಗಳ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬೇಕು.
ಉರಿಯೂತವನ್ನು ಕಡಿಮೆ ಮಾಡುತ್ತದೆ ಅರಿಶಿಣದಲ್ಲಿ ಉರಿಯೂತ ನಿವಾರಕ ಗುಣಗಳಿದ್ದು ದೇಹದಲ್ಲಿನ ಉರಿಯೂತ ಸಮಸ್ಯೆಯನ್ನು ಕಡಿಮೆ ಮಡಲು ಸಹಾಯ ಮಾಡುತ್ತದೆ. ಜತೆಗೆ ಕೀಲು ನೋವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಯಕೃತ್ತಿನ ಸೋಂಕು ಯಕೃತ್ತಿನ ಸಮಸ್ಯೆಯನ್ನು ಅನುಭವಿಸುತ್ತಿರುವವರು ಅರಿಶಿಣ ನೀರನ್ನು ಕುಡಿಯುವ ಅಭ್ಯಾಸ ಮಾಡುವುದು ಒಳ್ಳೆಯದು. ಅರಿಶಿಣವು ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕುವ ಕೆಲಸ ಮಾಡುತ್ತದೆ.
ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಪ್ರತಿನಿತ್ಯ ಅರಿಶಿಣ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ವಾಯು ಸಮಸ್ಯೆ ಇದ್ದವರಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಚರ್ಮದ ಆರೋಗ್ಯಕ್ಕೆ ಪ್ರಯೋಜಕಾರಿ ಅರಿಶಿಣವು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ವಾರಕ್ಕೊಮ್ಮೆಯಾದರೂ ಅರಿಶಿಣವನ್ನು ಮುಖಕ್ಕೆ ಹಚ್ಚುವ ಮೂಲಕ ಎಣ್ಣೆಯಾಂಶವನ್ನು ಮುಖದಿಂದ ತೆಗೆದು ಹಾಕಿಕೊಳ್ಳಬಹುದು. ಜತೆಗೆ ಮೊಡವೆಗಳಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ:
ಅತಿಯಾದ ಅರಿಶಿಣ ಬಳಕೆ ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದಿದೆಯೇ?
ಒಂದು ಚಿಟಿಕೆ ಅರಿಶಿಣ ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ; ಈ ಕೆಲಸವನ್ನು ಗುರುವಾರವೇ ಮಾಡುವುದು ಶ್ರೇಷ್ಠ!
Published On - 8:22 am, Mon, 2 August 21