ಒಂದು ಚಿಟಿಕೆ ಅರಿಶಿಣ ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ; ಈ ಕೆಲಸವನ್ನು ಗುರುವಾರವೇ ಮಾಡುವುದು ಶ್ರೇಷ್ಠ!

ಒಂದು ಚಿಟಿಕೆ ಅರಿಶಿಣ ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ; ಈ ಕೆಲಸವನ್ನು ಗುರುವಾರವೇ ಮಾಡುವುದು ಶ್ರೇಷ್ಠ!
ಸಾಂದರ್ಭಿಕ ಚಿತ್ರ

Turmeric: ನೀರಿನಲ್ಲಿ ಒಂದು ಚಿಟಿಕೆ ಅರಿಶಿಣವನ್ನು ಸೇರಿಸಿ ಗುರುವಾರ ಸ್ನಾನ ಮಾಡಿದರೆ, ಗುರುಗ್ರಹದ ಸ್ಥಾನವನ್ನು ಬಲಗೊಳಿಸಬಹುದು. ಇದರಿಂದ ವಿವಾಹಕ್ಕೆ ಎದುರಾಗುತ್ತಿರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಬಹುದು.

TV9kannada Web Team

| Edited By: shruti hegde

Jul 29, 2021 | 10:05 AM

ಆಯುರ್ವೇದದಲ್ಲಿ ಅರಿಶಿಣವನ್ನು ಔಷಧವೆಂದು ಪರಿಗಣಿಸಲಾಗಿದೆ. ಅರಿಶಿಣ(Turmeric) ಸೇವನೆಯಿಂದ ಸಾಮಾನ್ಯವಾದ ಎಲ್ಲಾ ರೋಗಗಳನ್ನು ತಡೆಯಬಹುದು. ಅದೇ ರೀತಿ ಧಾರ್ಮಿಕ ಕಾರ್ಯಗಳಲ್ಲಿಯೂ ಸಹ ಅರಿಶಿಣಕ್ಕೆ ವಿಶೇಷವಾದ ಸ್ಥಾನ-ಮಾನವಿದೆ. ಅರಿಶಿಣವನ್ನು ದೇವರ ಪೂಜಾ ಸಮಯದಲ್ಲಿ, ಮದುವೆ ಸಮಾರಂಭಗಳಲ್ಲಿ ಬಳಸಲಾಗತ್ತದೆ. ವರ-ವಧು ಎಲ್ಲಾ ಅಡೆತಡೆಗಳನ್ನು ಮೀರಿ ಜೀವನದಲ್ಲಿ ಮುನ್ನುಗ್ಗಲಿ ಎಂಬ ನಂಬಿಕೆಯೊಂದಿಗೆ ಅರಿಶಿಣ ಹಚ್ಚುವ ಶಾಸ್ತ್ರ ಸಾಂಪ್ರದಾಯಿಕವಾಗಿ ಬಂದಿದೆ. ಜ್ಯೋತಿಷ್ಯದ ಪ್ರಕಾರ ಅರಿಶಿಣ ಸಂಬಂಧವು ಗುರುಗ್ರಹದೊಂದಿಗಿದೆ ಎಂದು ನಂಬಲಾಗಿದೆ. ಗುರುವನ್ನು ದೇವರು ಎಂದು ಪರಿಗಣಿಸಲಾಗಿದ್ದು ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗಿದ್ದ ವ್ಯಕ್ತಿಯು ಜೀವನದಲ್ಲಿ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುತ್ತಾನೆ. ಹಾಗಿರುವಾಗ ಜೀವನದ ಸಮಸ್ಯೆಗಳ್ನು ನಿವಾರಿಸುವ ಶಕ್ತಿಯಿರುವ ಅರಿಶಿಣದ ಬಗ್ಗೆ ತಿಳಿದುಕೊಳ್ಳಿ. ಇದು ನಿಮ್ಮ ಗುರು ಗ್ರಹದ ಬಲವನ್ನು ಹೆಚ್ಚಿಸುತ್ತದೆ.

*ನೀರಿನಲ್ಲಿ ಒಂದು ಚಿಟಿಕೆ ಅರಿಶಿಣವನ್ನು ಸೇರಿಸಿ ಗುರುವಾರ ಸ್ನಾನ ಮಾಡಿದರೆ, ಗುರುಗ್ರಹದ ಸ್ಥಾನವನ್ನು ಬಲಗೊಳಿಸಬಹುದು. ಇದರಿಂದ ವಿವಾಹಕ್ಕೆ ಎದುರಾಗುತ್ತಿರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಬಹುದು. ಜತೆಗೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದು

*ಪೂಜೆಯ ಸಮಯದಲ್ಲಿ ಮಣಿಕಟ್ಟು ಅಥವಾ ಕುತ್ತಿಗೆಯ ಭಾಗದಲ್ಲಿ ಅರಿಶಿಣ ಹಚ್ಚುವ ಮೂಲಕ ಗುರುವು ಬಲಶಾಲಿಯಾಗುತ್ತಾನೆ. ಜತೆಗೆ ನಿಮ್ಮ ಮಾತಿನಲ್ಲಿ ಹಿಡಿತದ ಜತೆಗೆ ಸತ್ಯತೆ ತುಂಬಿರುತ್ತದೆ.

*ಗುರುವಾರದಂದು ಅರಿಶಿಣ ದಾನ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ

*ನಿಮ್ಮ ಮನೆಯಲ್ಲಿ ವಾಸ್ತುದೋಷವಿದ್ದರೆ ಪ್ರತಿ ಗುರುವಾಗ ನಿಮ್ಮ ಕೋಣೆಯ ಮೂಲೆಯಲ್ಲಿ ಅರಿಶಿಣವನ್ನು ಸಿಂಪಡಿಸಿ. ಇದು ವಾಸ್ತುದೋಷದಿಂದ ಪರಿಹಾರ ಪಡೆಯಲು ಸಹಾಯಕವಾಗುತ್ತದೆ

*ನೀವು ಕೆಲವು ಶುಭ ಕೆಲಸಗಳಿಗಾಗಿ ಹೊರಗಡೆ ಹೋಗುವ ಸಂದರ್ಭ ಎದುರಾದಾಗ ಗಣೇಶನಿಗೆ ಅರಿಶಿಣದಿಂದ ಪೂಜೆ ಮಾಡಿದ ಬಳಿಕ ಅದನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಕೆಲಸದಲ್ಲಿ ಎದುರಾಗುವ ಅಡೆತಡೆಗಳೆಲ್ಲ ನಿವಾರಣೆಯಾಗುತ್ತವೆ

*ಮನೆಯ ಗೋಡೆಯ ಮೇಲೆ ಅರಿಶಿಣ ರೇಖೆಯನ್ನು ಹಾಕಿದರೆ ನಿಮ್ಮ ಮನೆಯೊಳಗೆ ಕೆಟ್ಟಶಕ್ತಿಗಳ ಪ್ರವೇಶವನ್ನು ತಡೆಗಟ್ಟಬಹುದು

*ಜಾತಕದಲ್ಲಿ ಗುರುವಿನ ಬಲವಿಲ್ಲದಿದ್ದರೆ ಅರಿಶಿಣ ಹಾರ ಹಿಡಿದು ಮಂತ್ರವನ್ನು ಪಠಿಸಿ. ನಾರಾಯಣನ ಮಂತ್ರ ಪಠಿಸುವ ಮೂಲಕ ನಿಮ್ಮ ಬುದ್ಧಿಶಕ್ತಿ ಹೆಚ್ಚಳವಾಗುತ್ತದೆ. ಜತೆಗೆ ಗುರುವಿನ ಸ್ಥಾನವನ್ನು ಬಲಗೊಳಿಸುತ್ತದೆ

ಇದನ್ನೂ ಓದಿ:

Beauty Tips: ಹಳದಿ ಹಲ್ಲುಗಳಿಂದಾಗಿ ನಗಲು ಮುಜುಗರ ಪಡುತ್ತಿದ್ದೀರಾ?-ಈ ಸರಳ ವಿಧಾನಗಳ ಮೂಲಕ ಪಡೆಯಿರಿ ಬಿಳಿ ಹಲ್ಲು

Astrology: ನಿಮ್ಮ ಜಾತಕದಲ್ಲಿ ಇದೆಯೇ ಬುಧಾದಿತ್ಯ ಯೋಗ? ಏನು ಈ ಯೋಗ ಫಲಾಫಲ ಎಂಬುದು ಗೊತ್ತೆ?

Follow us on

Related Stories

Most Read Stories

Click on your DTH Provider to Add TV9 Kannada