Garuda Purana: ನಿಮ್ಮ ಜೀವನದಲ್ಲಿ ಸಂತೋಷವೇ ತುಂಬಿರಬೇಕೆ? ಗರುಡ ಪುರಾಣದ ಈ ವಿಷಯಗಳನ್ನು ತಿಳಿಯಿರಿ

ಗರುಡ ಪುರಾಣ: ಮನುಷ್ಯನು ಧರ್ಮದ ಹಾದಿಯಲ್ಲಿ ನಡೆಯುವ ಕುರಿತಾಗಿ ಹಾಗೂ ಜೀವನದಲ್ಲಿ ಸಂತೋಷವನ್ನು ಅನುಭವಿಸಲು ಬೇಕಾಗುವ ಕೆಲವು ನೀತಿಗಳನ್ನು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.

Garuda Purana: ನಿಮ್ಮ ಜೀವನದಲ್ಲಿ ಸಂತೋಷವೇ ತುಂಬಿರಬೇಕೆ? ಗರುಡ ಪುರಾಣದ ಈ ವಿಷಯಗಳನ್ನು ತಿಳಿಯಿರಿ
ವಿಷ್ಣು ದೇವರು-ಗರುಡವಾಹನ
Follow us
TV9 Web
| Updated By: ಆಯೇಷಾ ಬಾನು

Updated on: Jul 29, 2021 | 6:44 AM

ಸಾವಿನ ಹಿಂದಿರುವ ಹಾಗೂ ಸಾವಿನ ನಂತರದ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಗರುಡ ಪುರಾಣದ ಕಥೆಗಳನ್ನು ತಿಳಿದುಕೊಳ್ಳಿ. ಮರಣದ ನಂತರದ ಜಗತ್ತು ಹೇಗಿದೆ? ಎಂಬ ಕುತೂಹಲ ಇದ್ದೇ ಇರುತ್ತದೆ. ವಿಷ್ಣು ಮತ್ತು ಗರುಡನ ನಡುವಿನ ಸಂಭಾಷಣೆಯನ್ನು ಗರುಡ ಪುರಾಣ(Garuda Purana) ತಿಳಿಸುತ್ತದೆ. ಜನನ, ಮರಣ ಮತ್ತು ಮರಣಾಂತರದ ಸಂದರ್ಭಗಳಿಗೆ ಸಂಬಂಧಿಸಿದಂತೆ ಗರುಡ ಪ್ರಶ್ನೆಯನ್ನು ಕೇಳುತ್ತಾನೆ, ಅದಕ್ಕೆ ವಿಷ್ಣು ವಿವರವಾಗಿ ಉತ್ತರಿಸುತ್ತಾನೆ.

ಗರುಡ ಪುರಾಣದ ಪ್ರಕಾರ ಸಾವಿನ ನಂತರ, ಸ್ವರ್ಗ, ನರಕ ಮತ್ತು ಪಿತೃ ಲೋಕವನ್ನು ಪಡೆಯುವ ಬಗ್ಗೆ ತಿಳಿಸಲಾಗಿದೆ. ಆತ್ಮವು ಹೇಗೆ ದೇಹವನ್ನು ಮತ್ತೆ ಪಡೆಯುತ್ತದೆ, ಆತ್ಮವು ಹೇಗೆ ಮೋಕ್ಷವನ್ನು ಪಡೆಯುತ್ತದೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಗರುಡ ಪುರಾಣದಲ್ಲಿದೆ. ಮನುಷ್ಯನು ಧರ್ಮದ ಹಾದಿಯಲ್ಲಿ ನಡೆಯುವ ಕುರಿತಾಗಿ ಹಾಗೂ ಜೀವನದಲ್ಲಿ ಸಂತೋಷವನ್ನು ಅನುಭವಿಸಲು ಬೇಕಾಗುವ ಕೆಲವು ನೀತಿಗಳನ್ನು ತಿಳಿಸಲಾಗಿದೆ.

*ಪ್ರತಿಯೊಬ್ಬರೂ ಸಹ ಜನರ ನಡುವೆ ಗೌರವ ಸಿಗಬೇಕು ಎಂದು ಬಯಸುತ್ತಾರೆ. ಈ ಕುರಿತಂತೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ನಿಮ್ಮ ವಯಸ್ಸಿಗಿಂತ ಹಿರಿಯರು ಅಥವಾ ನಿಮ್ಮ ವಯಸ್ಸಿನವರು ನಿಮಗೇನಾದರೂ ಹೇಳಿದರೆ ಅದನ್ನು ಸಹಿಸಿಕೊಳ್ಳಬಹುದು. ಆದರೆ ನಿಮಗಿಂತ ಚಿಕ್ಕವರು ಹೇಳಿದಾಗ ಅವಮಾನಕ್ಕೆ ಒಳಗಾಗುತ್ತೀರಿ. ಅಂತಹ ಸಮಯದಲ್ಲಿ ಹೆಚ್ಚು ತಾಳ್ಮೆಯಿಂದ ನಡೆದುಕೊಳ್ಳಬೇಕು. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಕೋಪ ಸಮಸ್ಯೆಗಳನ್ನು ತಂದೊಡ್ಡುತ್ತದೆ.

*ಯಾವುದೋ ಕೆಲಸವನ್ನು ಮಾಡಲು ಹೊರಟಾಗ ಕೆಲಸದಲ್ಲಿ ಯಶಸ್ಸು ಸಿಗಲಿ ಎಂಬ ಆಶಯವಿರುತ್ತದೆ. ಆದರೆ ಮತ್ತೆ ಮತ್ತೆ ಪ್ರಯತ್ನದಲ್ಲಿ ವಿಫಲನಾಗುತ್ತಿದ್ದರೆ ಎಲ್ಲೋ ನಮ್ಮ ಪ್ರಯತ್ನಗಳಲ್ಲಿ ಕೊರತೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ಅಂತಹ ಪರಿಸ್ಥಿತಿಯಲ್ಲಿ ತಪ್ಪುಗಳನ್ನು ಸರಿಪಡಿಸುವ ಮೂಲಕ ಮುನ್ನಡೆಯಬಹುದು.

*ಮದುವೆಯ ಬಳಿಕ ಗಂಡ- ಹೆಂಡತಿ ಸಂಬಂಧ ನಂಬಿಕೆ ಎಂಬ ಅಡಿಪಾಯದಲ್ಲಿ ನಿಂತಿರುತ್ತದೆ. ಹಾಗಿರುವಾಗ ಪರಸ್ಪರ ನಂಬಿಕೆಯನ್ನು ಒಡೆಯುವ ಯಾವುದೇ ಕೆಲಸವನ್ನು ಮಾಡಬೇಡಿ. ಒಬ್ಬರಿಗೊಬ್ಬರ ನಡುವಿನ ವಿಶ್ವಾಸ ಕಳೆದು ಹೋದರೆ ದಾಂಪತ್ಯ ಜೀವನ ಹಾಳಾಗುತ್ತದೆ.

*ನಿಮ್ಮ ಸಂಗಾತಿ ಅನಾರೋಗ್ಯಕ್ಕೆ ಒಳಗಾದಾಗ ಅವರು ಆರೋಗ್ಯವಾಗಿರಲು ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ಮಾಡಿ. ಇದು ಇಬ್ಬರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಸಂತೋಷದ ಜೀವನಕ್ಕಾಗಿ ಗಂಡ ಮತ್ತು ಹೆಂಡತಿ ಆರೋಗ್ಯವಾಗಿರುವುದು ಅವಶ್ಯಕ.

ಇದನ್ನೂ ಓದಿ:

Garuda Purana: ಗರುಡ ಪುರಾಣದಲ್ಲಿ ಹೇಳಿರುವ ಈ 5 ಸಂಗತಿಗಳನ್ನು ಅಳವಡಿಸಿಕೊಂಡರೆ ಬದುಕು ಬದಲಿಸಬಹುದು

Garuda Purana: ಈ ಗುಣಗಳಿಂದ ಸ್ವರ್ಗ ಅಥವಾ ನರಕದ ಹಾದಿ ನಿರ್ಧಾರವಾಗುತ್ತದೆ; ಗರುಡ ಪುರಾಣ ಏನು ಹೇಳುತ್ತದೆ?

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್