Garuda Purana: ಈ ಗುಣಗಳಿಂದ ಸ್ವರ್ಗ ಅಥವಾ ನರಕದ ಹಾದಿ ನಿರ್ಧಾರವಾಗುತ್ತದೆ; ಗರುಡ ಪುರಾಣ ಏನು ಹೇಳುತ್ತದೆ?
ಗರುಡ ಪುರಾಣದಲ್ಲಿ ಕೂಡ ಸ್ವರ್ಗ ಹಾಗೂ ನರಕದ ಬಗ್ಗೆ ಉಲ್ಲೇಖವಿದೆ. ಸ್ವರ್ಗಕ್ಕೆ ನಮ್ಮನ್ನು ಕೊಂಡು ಹೋಗುವ ಅಥವಾ ನರಕಕ್ಕೆ ದೂಡುವ ವಿಚಾರಗಳೇನು ಎಂಬ ಕೆಲವು ಕಾರಣಗಳನ್ನೂ ಇಲ್ಲಿ ಹೇಳಲಾಗಿದೆ. ಅವುಗಳ ವಿವರ ಇಲ್ಲಿ ನೀಡಲಾಗಿದೆ.
ಬಾಲ್ಯದಿಂದಲೂ ನಾವು ಸ್ವರ್ಗ, ನರಕ ಎಂಬ ಪರಿಕಲ್ಪನೆಯ ಬಗ್ಗೆ, ಆ ಸ್ಥಾನ ಪ್ರಾಪ್ತಿ ಆಗುವುದರ ಬಗ್ಗೆ ಹಲವು ಬಾರಿ ಕೇಳಿಯೇ ಇರುತ್ತೇವೆ. ನಾವು ಯಾವತ್ತೂ ಒಳ್ಳೆಯದನ್ನೇ ಮಾಡಬೇಕು. ಕೆಟ್ಟದ್ದನ್ನು ಮಾಡಬಾರದು ಎಂಬ ನೆಲೆಯಲ್ಲಿ ಸ್ವರ್ಗ ನರಕದ ಕಥೆಯನ್ನು ನಮಗೆ ಹಿರಿಯರು ಹೇಳಿರುತ್ತಾರೆ. ಒಳ್ಳೆಯದನ್ನು ಮಾಡುವುದರಿಂದ ನಮಗೆ ಸ್ವರ್ಗ ಸಿಗುತ್ತದೆ ಹಾಗೂ ಕೆಟ್ಟತನದಿಂದ ನಮಗೆ ನರಕ ಪ್ರಾಪ್ತಿಯಾಗುತ್ತದೆ ಎಂದು ನಾವು ತಿಳಿದಿರುತ್ತೇವೆ.
ಗರುಡ ಪುರಾಣದಲ್ಲಿ ಕೂಡ ಸ್ವರ್ಗ ಹಾಗೂ ನರಕದ ಬಗ್ಗೆ ಉಲ್ಲೇಖವಿದೆ. ಸ್ವರ್ಗಕ್ಕೆ ನಮ್ಮನ್ನು ಕೊಂಡು ಹೋಗುವ ಅಥವಾ ನರಕಕ್ಕೆ ದೂಡುವ ವಿಚಾರಗಳೇನು ಎಂಬ ಕೆಲವು ಕಾರಣಗಳನ್ನೂ ಇಲ್ಲಿ ಹೇಳಲಾಗಿದೆ. ಅವುಗಳ ವಿವರ ಇಲ್ಲಿ ನೀಡಲಾಗಿದೆ.
ಇಂತಹ ಒಳ್ಳೆಯ ಕಾರ್ಯಗಳಿಂದ ಸ್ವರ್ಗ ಸಿಗುವುದು
- ಯಾವ ವ್ಯಕ್ತಿಗೆ ಪರಸ್ತ್ರೀಯರ ಬಗ್ಗೆ ಕಾಮ ಭಾವನೆ ಇರುವುದಿಲ್ಲವೋ, ಯಾರು ತನ್ನ ಪತ್ನಿಯನ್ನು ಬಿಟ್ಟು, ಇತರ ಹೆಣ್ಣು ಮಕ್ಕಳನ್ನು ತನ್ನ ತಾಯಿ, ಸಹೋದರಿ ಅಥವಾ ಮಗಳು ಎಂದು ಕಾಣುತ್ತಾರೋ ಅವರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ.
- ಆಸೆ, ಭಯ ಹಾಗೂ ಸಿಟ್ಟಿಗೆ ಸೋಲದ ವ್ಯಕ್ತಿಗಳಿಗೆ ಸ್ವರ್ಗ ಪ್ರಾಪ್ತಿ ಆಗಬಲ್ಲದು. ಅಂದರೆ, ಸಿಟ್ಟು, ಭಯ ಮತ್ತು ಆಸೆಯನ್ನು ನಿಯಂತ್ರಿಸಲು ಸಾಧ್ಯ ಇರುವವರಿಗೆ ಸ್ವರ್ಗ ಲಭ್ಯ ಆಗುವುದು.
- ಆಶ್ರಮ, ದೇವಾಲಯ, ಬಾವಿ ಅಥವಾ ಕೆರೆ ಕಟ್ಟಿಸುವ ಜನರಿಗೆ ಸ್ವರ್ಗ ಸಿಗುವುದು.
- ಯಾರು ಮತ್ತೊಬ್ಬರಲ್ಲಿ ಅಥವಾ ಪ್ರತಿಯೊಬ್ಬರಲ್ಲಿಯೂ ಒಳ್ಳೆಯ ಗುಣಗಳನ್ನು ಕಾಣುತ್ತಾರೋ ಅದಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಾರೋ ಅಂಥವರಿಗೆ ಸ್ವರ್ಗ ಸಿಗುತ್ತದೆ.
- ಮತ್ತೊಬ್ಬರ ಶ್ರೀಮಂತಿಕೆಯನ್ನು ನೋಡಿ ಆಸೆ ಪಡದೆ ತಮ್ಮ ಕೆಲಸ ಮತ್ತು ಗಳಿಕೆಯ ಬಗ್ಗೆ ಅಷ್ಟೇ ಗಮನ ಇಟ್ಟವರಿಗೆ ಮರಣಾನಂತರ ಸ್ವರ್ಗ ಸಿಗುತ್ತದೆ.
ಇಂತಹ ಪಾಪಕರ್ಮಗಳಿಂದ ನರಕ ಸಿಗುವುದು
- ಗರುಡ ಪುರಾಣದ ಪ್ರಕಾರ ಹಸಿದ ವ್ಯಕ್ತಿಯನ್ನು ಅವಮಾನಿಸುವ, ಅವರಿಗೆ ನೋವು ಉಂಟುಮಾಡುವ ಜನರಿಗೆ ನರಕ ಸಿಗುತ್ತದೆ.
- ಅನಾಥರನ್ನು, ಬಡವರನ್ನು, ಅನಾರೋಗ್ಯದಿಂದ ಇರುವವರನ್ನು, ಹಿರಿಯರನ್ನು ತಮಾಷೆ ಮಾಡುವ, ಅಪಹಾಸ್ಯ ಮಾಡುವ, ಅವರಿಗೆ ಎಂದೂ ಸಹಾಯ ಮಾಡದಂತಹ ಜನರಿಗೆ ನರಕ ಸಿಗುತ್ತದೆ.
- ಬ್ರಾಹ್ಮಣರಾಗಿದ್ದು ಮದ್ಯ ಮಾಂಸ ಸೇವನೆ ಮಾಡುವವರಿಗೆ, ಭ್ರೂಣಹತ್ಯೆ ಮಾಡುವವರಿಗೆ, ಆತ್ಮಹತ್ಯೆ ಮಾಡಿಕೊಳ್ಳುವವರಿಗೆ, ಸ್ತ್ರೀಹತ್ಯೆ ಮಾಡುವವರಿಗೆ, ಮತ್ತೊಬ್ಬರ ಆಸ್ತಿ ಹಾಳುಮಾಡುವವರಿಗೆ, ಸುಳ್ಳು ಹೇಳುವವರಿಗೆ ಕೂಡ ನರಕ ಸಿಗುತ್ತದೆ.
- ಕುಟುಂಬದವರಿಗೆ ಆಹಾರ, ನೀರು ನೀಡದೆ ತಮಗೆ ತಾವೇ ಊಟ ಮಾಡಿಕೊಂಡು ಕೂರುವ ಮನಸ್ಥಿತಿ ಉಳ್ಳವರಿಗೆ, ತಮ್ಮ ಹಿರಿಯರನ್ನು, ದೇವರನ್ನು ಗೌರವಿಸದವರಿಗೆ ನರಕ ಪ್ರಾಪ್ತಿ ಆಗುತ್ತದೆ.
- ಮತ್ತೊಬ್ಬರ ಗುಣದಲ್ಲಿ ತಪ್ಪನ್ನು ಕಂಡುಹಿಡಿಯುವವರಿಗೆ, ಮತ್ತೊಬ್ಬರ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವವರಿಗೆ ಕೂಡ ನರಕದಲ್ಲಿ ಸ್ಥಾನ ಸಿಗುತ್ತದೆ.
ಇದನ್ನೂ ಓದಿ: Garuda Purana: ಶವಸಂಸ್ಕಾರ ಮುಗಿಸಿ ಹೊರಟ ನಂತರ ಚಿತೆಯತ್ತ ತಿರುಗಿ ನೋಡಬಾರದು ಎನ್ನುವುದೇಕೆ? ಗರುಡ ಪುರಾಣ ಹೇಳುವುದೇನು?
Garuda Purana: ಹುಟ್ಟಿಗೂ ಮೊದಲು ನಾವು, ನೀವು ಅನುಭವಿಸಿದ ಕಷ್ಟ ಎಂಥದ್ದು? ಗರುಡ ಪುರಾಣ ಹೇಳುವುದೇನು?
Published On - 10:33 pm, Fri, 16 July 21