AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೋಸ್ತಿ ಜತೆ ಎಣ್ಣೆ ಪಾರ್ಟಿ ಮಾಡುವಾಗ ಎಚ್ಚರ: ಕುಡಿದ ಮತ್ತಿನಲ್ಲಿ ಗೆಳಯನನ್ನೇ ಕಲ್ಲು ಎತ್ತಿ ಹಾಕಿ ಕೊಂದ ಸ್ನೇಹಿತರು

ಶಿವಮೊಗ್ಗದ ಗಾಜನೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಂದಲೇ ಶ್ರೀನಿವಾಸ್ (36) ಎಂಬುವವರ ಭೀಕರ ಕೊಲೆಯಾಗಿದೆ. ಮದ್ಯಪಾನದ ವೇಳೆ ಜಗಳ ಶುರುವಾಗಿ, ಅಮಲಿನಲ್ಲಿದ್ದ ಸ್ನೇಹಿತರು ಕಲ್ಲಿನಿಂದ ಜಜ್ಜಿ ಶ್ರೀನಿವಾಸ್‌ನನ್ನು ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆಯನ್ನು ನಡೆಸಿದರು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದೋಸ್ತಿ ಜತೆ ಎಣ್ಣೆ ಪಾರ್ಟಿ ಮಾಡುವಾಗ ಎಚ್ಚರ: ಕುಡಿದ ಮತ್ತಿನಲ್ಲಿ ಗೆಳಯನನ್ನೇ ಕಲ್ಲು ಎತ್ತಿ ಹಾಕಿ ಕೊಂದ ಸ್ನೇಹಿತರು
ಗೆಳೆಯನ್ನು ಕೊಲೆ ಮಾಡಿದ ಸ್ನೇಹಿತರು
Basavaraj Yaraganavi
| Edited By: |

Updated on: Feb 13, 2026 | 10:46 PM

Share

ಶಿವಮೊಗ್ಗ, ಫೆ.13: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ (Shivamogga) ಭೀಕರ ಕೊಲೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೇ ಸೇರಿ ತನ್ನವನನ್ನೇ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ನಡೆದಿದೆ. ಶ್ರೀನಿವಾಸ (36) ಎಂಬುವವರೇ ಕೊಲೆಯಾದ ದುರ್ದೈವಿ. ಶಿವಮೊಗ್ಗ ನಗರದ ಹೊಸಮನೆ ನಿವಾಸಿಯಾಗಿದ್ದ ಶ್ರೀನಿವಾಸ್ ಕಳೆದ ಒಂದು ವರ್ಷದಿಂದ ಗಾಜನೂರಿನಲ್ಲಿ ನೆಲೆಸಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ಸ್ನೇಹ ಬಾರ್ ಎದುರಿಗಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಂಗಳದಲ್ಲಿ ಶ್ರೀನಿವಾಸ್ ಮತ್ತು ಅವರ ಇಬ್ಬರು ಸ್ನೇಹಿತರು ಸೇರಿ ಮದ್ಯದ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಅಮಲಿನಲ್ಲಿದ್ದ ಸ್ನೇಹಿತರ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಶುರುವಾಗಿದೆ.

ಗಲಾಟೆ ವಿಕೋಪಕ್ಕೆ ಹೋದಾಗ ಸ್ನೇಹಿತರಿಬ್ಬರು ಸೇರಿ ಶ್ರೀನಿವಾಸ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಆತನ ಕಾಲು ಟ್ವಿಸ್ಟ್ ಮಾಡಿ, ಪ್ಯಾಂಟ್ ಬಿಚ್ಚಿ ಅರೆನಗ್ನಗೊಳಿಸಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ವಿಕೃತವಾಗಿ ಕೊಲೆ ಮಾಡಿದ್ದಾರೆ. ಕೃತ್ಯದ ಬಳಿಕ ಹಂತಕರಿಬ್ಬರು ಸ್ಥಳದಿಂದ ಪರಾರಿಯಾಗಿದ್ದರು. ಇಂದು ಬೆಳಿಗ್ಗೆ ಶ್ರೀನಿವಾಸ್ ಹೆಣವಾಗಿ ಬಿದ್ದಿರುವುದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಶಿವಮೊಗ್ಗ ಎಸ್ಪಿ ನಿಖಿಲ್ ಬಿ. ಹಾಗೂ ತುಂಗಾ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: ಒಡಿಶಾದಲ್ಲಿ ಆಸಿಡ್ ದಾಳಿ ನಡೆಸಿ ಪತ್ನಿಯನ್ನು ಕೊಂದ ವ್ಯಕ್ತಿಗೆ ಗಲ್ಲು ಶಿಕ್ಷೆ

ನನ್ನ ತಮ್ಮನನ್ನು ಅವನ ಸ್ನೇಹಿತರೇ ಕೊಂದಿದ್ದಾರೆ, ಅವರಿಗೆ ತಕ್ಕ ಶಿಕ್ಷೆಯಾಗಬೇಕು” ಎಂದು ಮೃತನ ಸಹೋದರಿ ಸುಮಾ ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ. ಶ್ರೀನಿವಾಸ್‌ನನ್ನು ವಿವಸ್ತ್ರಗೊಳಿಸಿ ಹತ್ಯೆ ಮಾಡಿರುವುದು ಪ್ರಕರಣಕ್ಕೆ ಬೇರೆಯದೇ ಆಯಾಮ ನೀಡಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ . ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾರ್ಕೆಟ್​ನಲ್ಲಿ ಟೊಮ್ಯೊಟೋ ಬೆಲೆ ತೀವ್ರ ಕುಸಿತ! ರೈತರು ಕಂಗಾಲು
ಮಾರ್ಕೆಟ್​ನಲ್ಲಿ ಟೊಮ್ಯೊಟೋ ಬೆಲೆ ತೀವ್ರ ಕುಸಿತ! ರೈತರು ಕಂಗಾಲು
ಎಲ್​ಪಿಜಿ ಬೆಲೆ ಏರಿಕೆ, ಹೋಟೆಲ್​​ಗಳಲ್ಲಿ ತಿಂಡಿಗಳ ಬೆಲೆ ಏರಿಕೆ ಸಾಧ್ಯತೆ
ಎಲ್​ಪಿಜಿ ಬೆಲೆ ಏರಿಕೆ, ಹೋಟೆಲ್​​ಗಳಲ್ಲಿ ತಿಂಡಿಗಳ ಬೆಲೆ ಏರಿಕೆ ಸಾಧ್ಯತೆ
ಮಾರಿ ಹಬ್ಬದಲ್ಲಿ ನೂರಾರು ಕುರಿಗಳ ಬಲಿ, ರಕ್ತ ಹೀರಿದ ಅರ್ಚಕ: ವಿಡಿಯೋ ವೈರಲ್
ಮಾರಿ ಹಬ್ಬದಲ್ಲಿ ನೂರಾರು ಕುರಿಗಳ ಬಲಿ, ರಕ್ತ ಹೀರಿದ ಅರ್ಚಕ: ವಿಡಿಯೋ ವೈರಲ್
ಟಿವಿ9 ಎಕ್ಸ್​​ಪೋದಲ್ಲಿ ಹಯಗ್ರೀವ ಯಶಸ್ಸಿನ ಬಗ್ಗೆ ಧನ್ವೀರ್​-ಸಂಜನಾ ಮಾತು
ಟಿವಿ9 ಎಕ್ಸ್​​ಪೋದಲ್ಲಿ ಹಯಗ್ರೀವ ಯಶಸ್ಸಿನ ಬಗ್ಗೆ ಧನ್ವೀರ್​-ಸಂಜನಾ ಮಾತು
ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ
ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ
ಮಾರ್ಚ್ 7 ಶನಿವಾರ, ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಾರ್ಚ್ 7 ಶನಿವಾರ, ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಪೊಲೀಸರಿಗೆ ಗಾಯ
ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಪೊಲೀಸರಿಗೆ ಗಾಯ
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ರಾಜ್ಯದ ಬೆಳವಣಿಗೆ ಉತ್ತಮ; ಸಿಎಂ
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ರಾಜ್ಯದ ಬೆಳವಣಿಗೆ ಉತ್ತಮ; ಸಿಎಂ
ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ!
ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ!