AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಯುವ ಭಾರತೀಯ ಆಟಗಾರನಿಗೆ ನಾಯಕತ್ವದ ಪಟ್ಟಕಟ್ಟಿದ ರಾಜಸ್ಥಾನ್ ರಾಯಲ್ಸ್

IPL 2026: ಯುವ ಭಾರತೀಯ ಆಟಗಾರನಿಗೆ ನಾಯಕತ್ವದ ಪಟ್ಟಕಟ್ಟಿದ ರಾಜಸ್ಥಾನ್ ರಾಯಲ್ಸ್

ಪೃಥ್ವಿಶಂಕರ
|

Updated on: Feb 13, 2026 | 6:46 PM

Share

Rajasthan Royals' New Captain: 2026ರ ಐಪಿಎಲ್ ಮಾರ್ಚ್‌ನಲ್ಲಿ ಆರಂಭವಾಗಲಿದೆ. ರಾಜಸ್ಥಾನ್ ರಾಯಲ್ಸ್ ತಂಡ 2026ರ ಆವೃತ್ತಿಗೆ ಯುವ ಆಟಗಾರ ರಿಯಾನ್ ಪರಾಗ್‌ರನ್ನು ನೂತನ ನಾಯಕರನ್ನಾಗಿ ಘೋಷಿಸಿದೆ. ಹಿಂದಿನ ನಾಯಕರಾಗಿದ್ದ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡ ನಂತರ, ಫೆಬ್ರವರಿ 13ರಂದು ರಾಯಲ್ಸ್ ಫ್ರಾಂಚೈಸಿ ಈ ನಿರ್ಧಾರ ಪ್ರಕಟಿಸಿದೆ. ದೇಶೀಯ ಕ್ರಿಕೆಟ್ ಹಾಗೂ ಹಿಂದಿನ ಐಪಿಎಲ್ ಪಂದ್ಯಗಳಲ್ಲಿ ನಾಯಕತ್ವದ ಅನುಭವ ಪರಾಗ್‌ಗಿದೆ.

2026 ರ ಐಪಿಎಲ್ ಇದೇ ಮಾರ್ಚ್​ ತಿಂಗಳ ಕೊನೆಯ ವಾರದಿಂದ ಆರಂಭವಾಗಲಿದೆ. ಈ ಮಿಲಿಯನ್ ಡಾಲರ್ ಟೂರ್ನಿಗೆ ಎಲ್ಲಾ ತಂಡಗಳು ಈಗಾಗಲೇ ತಯಾರಿ ಆರಂಭಿಸಿವೆ. ಅದರಂತೆ ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಮುಂಬರುವ ಆವೃತ್ತಿಗೆ ತನ್ನ ತಂಡಕ್ಕೆ ನೂತನ ನಾಯಕನನ್ನು ನೇಮಿಸಿದೆ. ಕಳೆದ ಆವೃತ್ತಿಯವರೆಗೂ ಸಂಜು ಸ್ಯಾಮ್ಸನ್ ರಾಜಸ್ಥಾನ್ ತಂಡವನ್ನು ಮುನ್ನಡೆಸಿದ್ದರು. ಆದರೆ ಈ ಬಾರಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ತಂಡಕ್ಕೆ ನೂತನ ನಾಯಕನನ್ನು ಹುಡುಕುತ್ತಿದ್ದ ರಾಯಲ್ಸ್ ಫ್ರಾಂಚೈಸಿ ಭಾರತದ ಯುವ ಆಟಗಾರ ರಿಯಾನ್ ಪರಾಗ್​ಗೆ ತಂಡದ ನಾಯಕತ್ವದ ಪಟ್ಟಕ್ಕಟ್ಟಿದೆ.

ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಫೆಬ್ರವರಿ 13 ರಂದು ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ರಿಯಾನ್ ಪರಾಗ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಿದೆ. ಸೋಶಿಯಲ್ ಮೀಡಿಯಾ ಖಾತೆಯಲ್ಲಿ 11 ನಿಮಿಷಗಳ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಬಡಾಳೆ ಮತ್ತು ಸಂಗಕ್ಕಾರ ನಾಯಕ ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿದ್ದಾರೆ.

ರಿಯಾನ್ ಪರಾಗ್ ನಾಯಕತ್ವವಹಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಗಾಯಗೊಂಡು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದಾಗ ರಿಯಾನ್ ಪರಾಗ್ ನಾಯಕನಾಗಿ ತಂಡವನ್ನು ಕೆಲವು ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಇದು ಮಾತ್ರವಲ್ಲದೆ ಪರಾಗ್ ದೇಶೀಯ ಕ್ರಿಕೆಟ್‌ನಲ್ಲಿ ಅಸ್ಸಾಂ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.