AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಶಾ ಫೌಂಡೇಷನ್​​ನಲ್ಲಿ ಸದ್ಗುರು ಜೊತೆ ಶಿವರಾತ್ರಿ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಕಳೆದ ವರ್ಷ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್​​ನಲ್ಲಿ ನಡೆದ ಮಹಾ ಶಿವರಾತ್ರಿ ಉತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದು ಚರ್ಚೆಗೂ ಕಾರಣವಾಗಿತ್ತು. ಈ ವರ್ಷ ಫೆ. 15ರಂದು ಸದ್ಗುರು ನೇತೃತ್ವದಲ್ಲಿ ನಡೆಯುವ ಶಿವರಾತ್ರಿ ಉತ್ಸವದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಅಹೋರಾತ್ರಿ ಮಹಾ ಶಿವರಾತ್ರಿ ಉತ್ಸವ ನಡೆಯಲಿದೆ.

ಇಶಾ ಫೌಂಡೇಷನ್​​ನಲ್ಲಿ ಸದ್ಗುರು ಜೊತೆ ಶಿವರಾತ್ರಿ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್
Isha Foundation
ಸುಷ್ಮಾ ಚಕ್ರೆ
|

Updated on: Feb 12, 2026 | 8:31 PM

Share

ಕೊಯಮತ್ತೂರು, ಫೆಬ್ರವರಿ 12: ಈ ವರ್ಷ ಫೆಬ್ರವರಿ 15ರಂದು ಮಹಾ ಶಿವರಾತ್ರಿ (Maha Shivaratri 2026) ನಡೆಯಲಿದೆ. ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆಯುವ ಈ ಬಾರಿಯ ಉತ್ಸವದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂಸದೀಯ ವ್ಯವಹಾರಗಳ ಸಚಿವ ಎಲ್. ಮುರುಗನ್ ಮತ್ತು ಇತರ ಗಣ್ಯರು ಕೂಡ ಪಾಲ್ಗೊಳ್ಳಲಿದ್ದಾರೆ. ಮಹಾ ಶಿವರಾತ್ರಿ ಉತ್ಸವವು ಫೆ. 15ರಂದು ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಈ ವೇಳೆ ಧ್ಯಾನ, ಮಂತ್ರ ಪಠಣ, ಯೋಗೇಶ್ವರಲಿಂಗ ಮಹಾ ಅಭಿಷೇಕ ಮತ್ತು ಅತ್ಯುತ್ತಮ ಕಲಾವಿದರಿಂದ ಸಂಗೀತ ಪ್ರದರ್ಶನಗಳು ನಡೆಯಲಿವೆ.

ಈ ಮಹಾ ಶಿವರಾತ್ರಿ ಉತ್ಸವದ ಕುರಿತು ಇಂದು ಕೊಯಮತ್ತೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ದಕ್ಷಿಣ ಕೈಲಾಯ ಭಕ್ತಿ ಪೆರವೈ ಸ್ವಯಂಸೇವಕ ರವೀಂದ್ರನ್ ಮತ್ತು ಸ್ವಯಂಸೇವಕ ಸರವಣನ್ ಭಾಗವಹಿಸಿ ಮಾತನಾಡಿದರು. “32ನೇ ಮಹಾ ಶಿವರಾತ್ರಿ ಹಬ್ಬವನ್ನು ಫೆ. 15ರಂದು ಇಶಾ ಯೋಗ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲಕ್ಷಾಂತರ ಜನರು ಸಹ ಇದರಲ್ಲಿ ಭಾಗವಹಿಸಲಿದ್ದಾರೆ” ಎಂದು ಅವರು ಹೇಳಿದರು.

ಇದನ್ನೂ ಓದಿ: Maha Shivratri: ಇಶಾ ಫೌಂಡೇಶನ್‌ನಲ್ಲಿ ಸದ್ಗುರು ಜೊತೆ ಶಿವರಾತ್ರಿಯಲ್ಲಿ ಅಮಿತ್ ಶಾ ಭಾಗಿ

“ಇದಲ್ಲದೆ, ಈ ವರ್ಷ ಮೊದಲ ಬಾರಿಗೆ, ಸದ್ಗುರು ಆದಿಯೋಗಿ ಈ ಹಿಂದೆ ಸ್ಥಾಪಿಸಲಾದ ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕದ ಆಧ್ಯಾತ್ಮಿಕ ಕಾರ್ಯವನ್ನು ಮಾಡಲಿದ್ದಾರೆ” ಎಂದು ಅವರು ತಿಳಿಸಿದರು.

ಇಶಾದಲ್ಲಿ ನಡೆಯುವ ಮಹಾ ಶಿವರಾತ್ರಿ ಉತ್ಸವವನ್ನು ತಮಿಳುನಾಡಿನ 60 ಸ್ಥಳಗಳು ಮತ್ತು ಕೇರಳದ 29 ದೇವಾಲಯಗಳು ಸೇರಿದಂತೆ ಭಾರತದಾದ್ಯಂತ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಹಾಗೇ, ಇಶಾ ಫೌಂಡೇಷನ್​ನ ಯೂಟ್ಯೂಬ್ ಚಾನೆಲ್​ನಲ್ಲಿ ಕೂಡ ಇದರ ನೇರ ಪ್ರಸಾರ ಇರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ