Sign In

By signing in or creating an account, you agree with Associated Broadcasting Company's Terms & Conditions and Privacy Policy.

Garuda Purana: ಗರುಡ ಪುರಾಣದಲ್ಲಿ ಹೇಳಿರುವ ಈ 5 ಸಂಗತಿಗಳನ್ನು ಅಳವಡಿಸಿಕೊಂಡರೆ ಬದುಕು ಬದಲಿಸಬಹುದು

ಒಬ್ಬ ವ್ಯಕ್ತಿಯು ತೀರಿಕೊಂಡ ಸಂದರ್ಭದಲ್ಲಿ ಬದುಕಿರುವವರಿಗೆ ಪಾಠ ಎಂಬಂತೆ ಗರುಡ ಪುರಾಣದ ಪಠಣ ಮಾಡಿಸಲಾಗುತ್ತದೆ. ಆದರೆ ಇದು ಎಲ್ಲ ಸಂದರ್ಭಕ್ಕೂ ಅನ್ವಯ ಆಗುವ ಜೀವನ ಪಾಠ. ಇಲ್ಲಿರುವ 5 ಸಂಗತಿ ಅಳವಡಿಕೊಳ್ಳಿ, ಬದುಕು ಸುಧಾರಿಸಿಕೊಳ್ಳಿ.

Garuda Purana: ಗರುಡ ಪುರಾಣದಲ್ಲಿ ಹೇಳಿರುವ ಈ 5 ಸಂಗತಿಗಳನ್ನು ಅಳವಡಿಸಿಕೊಂಡರೆ ಬದುಕು ಬದಲಿಸಬಹುದು
ಭಾರತೀಯ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ತುಳಸಿಯನ್ನು ದೇವತೆಯಾಗಿ ಪೂಜಿಸಲಾಗುತ್ತದೆ. ತುಳಸಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ತುಳಸಿ ಗಿಡವನ್ನು ಮನೆಯಲ್ಲಿ ಇಡುವುದರಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದಲ್ಲದೆ ಒತ್ತಡ ಕಡಿಮೆಯಾಗುತ್ತದೆ. ಈ ಗಿಡವನ್ನು ಬೆಳಿಗ್ಗೆ ನೋಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಪುಟ್ಟ ಪಾಟ್​ನಲ್ಲಿ ಈ ಗಿಡ ಹಾಕಬಹುದು.
Follow us
TV9 Web
| Updated By: Srinivas Mata

Updated on: Jul 17, 2021 | 5:01 PM

ಸಾಮಾನ್ಯವಾಗಿ ಯಾವುದಾದರೂ ಕುಟುಂಬದಲ್ಲಿ ಒಬ್ಬ ವ್ಯಕ್ತಿ ತೀರಿಕೊಂಡಾಗ ಗರುಡ ಪುರಾಣವನ್ನು ಪಠಿಸಲಾಗುತ್ತದೆ. ಆ ಸಮಯದಲ್ಲಿ ಮನೆಯ ಸದಸ್ಯರೂ ಸೇರಿ ಆಪ್ತರು, ಬಂಧು- ಬಳಗದವರನ್ನು ಆಹ್ವಾನಿಸಿ, ಸ್ವರ್ಗ ಮತ್ತು ನರಕದ ಬಗ್ಗೆ ಪುರಾಣದ ಬಗ್ಗೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯ ಕಾಲದಲ್ಲಿ ಮಾಡಿದ ಕಾರ್ಯಗಳ ಆಧಾರದಲ್ಲಿ ಸಾವಿನ ನಂತರ ಪಡೆಯುವ ಎಲ್ಲ ಸಂತೋಷ ಮತ್ತು ನೋವುಗಳನ್ನು ಉಲ್ಲೇಖಿಸಲಾಗುತ್ತದೆ. ಈ ಮೂಲಕವಾಗಿ ಜೀವನದಲ್ಲಿ ನೀತಿವಂತರಾಗಿ ಬದುಕಬೇಕು, ನೀತಿಯುಕ್ತವಾದ ಕೆಲಸವನ್ನೇ ಮಾಡಬೇಕು ಎಂದು ಇತರರನ್ನು ಪ್ರೇರೇಪಿಸುತ್ತದೆ. ಇದರ ಹೊರತಾಗಿಯೂ ಗರುಡ ಪುರಾಣದಲ್ಲಿ ಸಾಕಷ್ಟು ಸಂಗತಿಗಳಿವೆ. ಒಬ್ಬ ವ್ಯಕ್ತಿಯು ತಾನು ಮಾಡಿದ ಕರ್ಮದಿಂದ ಸುಧಾರಣೆ ಕಾಣಬೇಕು ಎಂದಲ್ಲಿ ಅದಕ್ಕೂ ಮಾರ್ಗವನ್ನೂ ತೋರಿಸುತ್ತದೆ. ಇದರಲ್ಲಿ ಜೀವನದ ನೀತಿ ಮತ್ತು ನಿಯಮ ಬಗ್ಗೆ ಹೇಳಲಾಗಿದೆ. ಅವುಗಳನ್ನು ಪಾಲಿಸುವ ಮೂಲಕ ಯಾವುದೇ ವ್ಯಕ್ತಿ ತನ್ನ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು.

ಅಂದ ಹಾಗೆ ಗರುಡ ಪುರಾಣವು ವಿಷ್ಣುವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹಾಗೂ ಆ ಪರಮಾತ್ಮನ ಭಕ್ತಿಯ ಮೇಲೆ ಆಧಾರವಾಗಿದೆ. ಆದ್ದರಿಂದ ಬದುಕನ್ನು ಸುಧಾರಿಸುವುದಕ್ಕೆ ಇದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಗರುಡ ಪುರಾಣದಲ್ಲಿ ಹೇಳಿರುವಂಥ ಸಂಗತಿಗಳು ತಿಳಿದುಕೊಂಡು ಸಮಸ್ಯೆಗಳಿಂದ ದೂರವಾಗಬಹುದು ಮತ್ತು ವ್ಯಕ್ತಿತ್ವವನ್ನು ಮತ್ತಷ್ಟು ಸುಧಾರಿಸಿಕೊಳ್ಳಬಹುದು.

1. ವ್ಯಕ್ತಿಯ ಜೀವನವನ್ನು ಸುಂದರಗೊಳಿಸಲು ಏಕಾದಶಿ ಉಪವಾಸದ ಮಹಿಮೆಯನ್ನು ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ಈ ಉಪವಾಸವನ್ನು ಪೂರ್ಣ ನಿಷ್ಠೆ, ಭಕ್ತಿ ಮತ್ತು ವಿಧಿ- ವಿಧಾನದೊಂದಿಗೆ ಮಾಡಿದರೆ ಅದು ಖಂಡಿತವಾಗಿಯೂ ಫಲಿತಾಂಶ ನೀಡುತ್ತದೆ ಎಂದು ಹೇಳಲಾಗಿದೆ. ಉಪವಾಸವನ್ನು ಆಚರಿಸುವ ವ್ಯಕ್ತಿಯು ಎಲ್ಲ ತೊಂದರೆಗಳಿಂದ ದೂರವಾಗುತ್ತಾರೆ, ಜೀವನದ ಎಲ್ಲ ಸಂತೋಷಗಳನ್ನು ಪಡೆಯುತ್ತಾರೆ ಮತ್ತು ಕೊನೆಯಲ್ಲಿ ಮೋಕ್ಷದ ಹಾದಿಯಲ್ಲಿ ಸಾಗುತ್ತಾರೆ.

2. ಗರುಡ ಪುರಾಣದ ಪ್ರಕಾರ, ಕೊಳಕು ಬಟ್ಟೆಗಳನ್ನು ಧರಿಸುವವರ ಅದೃಷ್ಟವು ನಾಶವಾಗುತ್ತದೆ. ಲಕ್ಷ್ಮಿ ಅಂತಹ ಮನೆಗೆ ಎಂದಿಗೂ ಬರುವುದಿಲ್ಲ ಮತ್ತು ಬಡತನ ಯಾವಾಗಲೂ ಹಾಗೇ ಇರುತ್ತದೆ. ಆದ್ದರಿಂದ ಸ್ವಚ್ಛ ಮತ್ತು ಪರಿಮಳಯುಕ್ತ ಬಟ್ಟೆಗಳನ್ನು ಧರಿಸಬೇಕು.

3. ಶತ್ರುಗಳನ್ನು ಎದುರಿಸಲು, ಜಾಗರೂಕತೆ ಮತ್ತು ಬುದ್ಧಿವಂತಿಕೆಯನ್ನು ಬಳಸಬೇಕು. ಶತ್ರುಗಳು ನಿರಂತರವಾಗಿ ಹಾನಿ ಮಾಡಲು ಪ್ರಯತ್ನಿಸುತ್ತಾರೆ. ಅಚ್ಚುಕಟ್ಟಾಗಿ ಕೆಲಸ ಮಾಡದಿದ್ದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಶತ್ರುಗಳ ಆಲೋಚನೆ, ನಡೆಗೆ ಅನುಗುಣವಾಗಿ ನೀತಿಯನ್ನು ರೂಪಿಸಿ, ನಿಯಂತ್ರಣದಲ್ಲಿ ಇಡಬೇಕು.

4. ತುಳಸಿಯ ಗಿಡವನ್ನು ಮನೆಯಲ್ಲಿ ಇಟ್ಟುಕೊಂಡು ಅದನ್ನು ಪ್ರತಿದಿನ ಸೇವಿಸುವುದರಿಂದ ಎಲ್ಲ ರೀತಿ ಕಾಯಿಲೆಗಳಿಂದ ಬಿಡುಗಡೆ ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ನಿಯಮಿತವಾಗಿ ನೀರು ಎರೆಯುವ ಮೂಲಕ ಎಲ್ಲ ತೊಂದರೆಗಳಿಂದ ಮುಕ್ತಿ ಪಡೆಯಬಹುದು. ತುಳಸಿ ದಳವನ್ನು ದೇವರ ಪ್ರಸಾದವಾಗಿ ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಅಸ್ವಾಸ್ಥ್ಯಗಳು ದೂರವಾಗುತ್ತವೆ.

5. ಯಾವುದೇ ದೇವತೆಗಳು ಅಥವಾ ಧರ್ಮವನ್ನು ಅವಮಾನಿಸುವವರು ಜೀವನದಲ್ಲಿ ಒಂದು ದಿನ ಪಶ್ಚಾತ್ತಾಪ ಪಡಬೇಕು ಮತ್ತು ಅಂಥವರು ನರಕಕ್ಕೆ ಹೋಗುತ್ತಾರೆ. ಪವಿತ್ರ ಸ್ಥಳಗಳಲ್ಲಿ ಕೊಳಕು ಕೆಲಸ ಮಾಡುವವರು, ಒಳ್ಳೆಯ ಜನರನ್ನು ಮೋಸ ಮಾಡುವವರು, ಬೇರೆಯವರನ್ನು ದುರುಪಯೋಗ ಮಾಡಿಕೊಳ್ಳುವವರು, ಧರ್ಮದ ಅಸ್ತಿತ್ವ, ವೇದಗಳು, ಪುರಾಣಗಳು ಮತ್ತು ಧರ್ಮಗ್ರಂಥಗಳ ಅಸ್ತಿತ್ವವನ್ನು ಸವಾಲು ಮಾಡುವವರನ್ನು ನರಕದಿಂದ ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ.

ಇದನ್ನೂ ಓದಿ: ಈ ಗುಣಗಳು ನಿಮ್ಮ ಯಶಸ್ಸನ್ನು ಕಸಿದುಕೊಳ್ಳಬಹುದು; ಗರುಡ ಪುರಾಣದಲ್ಲೂ ಉಲ್ಲೇಖಿಸಿರುವ ಅಂಶಗಳೇನು?

ಇದನ್ನೂ ಓದಿ: Garuda Purana: ಹುಟ್ಟಿಗೂ ಮೊದಲು ನಾವು, ನೀವು ಅನುಭವಿಸಿದ ಕಷ್ಟ ಎಂಥದ್ದು? ಗರುಡ ಪುರಾಣ ಹೇಳುವುದೇನು?

(Here are the 5 things to adopt in life by an individual from Garuda Purana.)

‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು