Chanakya Niti: ಈ ಕೆಲವು ವಿಷಯಗಳು ನಿಮಗೆ ಲಭಿಸುತ್ತಿದ್ದರೆ ನೀವು ನಿಜವಾಗಿಯೂ ಅದೃಷ್ಟವಂತರು- ಚಾಣಕ್ಯ ನೀತಿ

ಚಾಣಕ್ಯ ನೀತಿ: ಕೇಲವ ಹಣವೊಂದೇ ಅಲ್ಲ ಇತರ ಸಂಗತಿಗಳೂ ಸಹ ಮನುಷ್ಯರ ಅದೃಷ್ಟಕ್ಕೆ ಸಹಾಯವಾಗುತ್ತದೆ. ಓರ್ವ ವ್ಯಕ್ತಿ ಈ ಗುಣಗಳನ್ನು ಪಡೆದರೆ ನಿಜವಾಗಿಯೂ ಅದೃಷ್ಟವಂತನಾಗಿರುತ್ತಾನೆ.

Chanakya Niti: ಈ ಕೆಲವು ವಿಷಯಗಳು ನಿಮಗೆ ಲಭಿಸುತ್ತಿದ್ದರೆ ನೀವು ನಿಜವಾಗಿಯೂ ಅದೃಷ್ಟವಂತರು- ಚಾಣಕ್ಯ ನೀತಿ
ಚಾಣಕ್ಯ
Follow us
TV9 Web
| Updated By: shruti hegde

Updated on:Jul 18, 2021 | 11:27 AM

ಈಗಿನ ಕಾಲದ ಜನರು ಹಣವನ್ನು ಮಾತ್ರ ಅದೃಷ್ಟವೆಂದು ಪರಿಗಣಿಸುತ್ತಾರೆ. ಆಚಾರ್ಯ ಚಾಣಕ್ಯರೂ(Chanakya) ಸಹ ಹಣ ಮುಖ್ಯ ಎಂದು ಹೇಳಿದ್ದಾರೆ. ಕಷ್ಟದ ಸಮಯದಲ್ಲೂ ವ್ಯಕ್ತಿಯನ್ನು ಬೆಂಬಲಿಸುವ ಏಕೈಕ ಸ್ನೇಹಿತ ಹಣ ಎಂದು ಅವರು ನಂಬಿದ್ದರು. ಕೇಲವ ಹಣವೊಂದೇ(Money) ಅಲ್ಲ ಇತರ ಸಂಗತಿಗಳೂ ಸಹ ಮನುಷ್ಯರ ಅದೃಷ್ಟಕ್ಕೆ ಸಹಾಯವಾಗುತ್ತದೆ. ಓರ್ವ ವ್ಯಕ್ತಿ ಈ ಗುಣಗಳನ್ನು ಪಡೆದರೆ ನಿಜವಾಗಿಯೂ ಅದೃಷ್ಟವಂತನಾಗಿರುತ್ತಾನೆ.

ಆಚಾರ್ಯ ಚಾಣಕ್ಯರು ಶ್ರೇಷ್ಠ ವಿದ್ವಾಂಸರು. ಜತೆಗೆ ತಮ್ಮ ಅನುಭವದ ಮೂಲಕ ಪ್ರಸ್ತುತ ಕಾಲಕ್ಕೂ ಸರಿ ಹೊಂದುವಂತೆ ನೀತಿಯನ್ನು ಸಾರಿದ್ದಾರೆ. ಇಂದಿಗೂ ಸಹ ಅವರ ಮಾತುಗಳನ್ನು ಕ್ಲುಲ್ಲಕ ಎಂದು ಭಾವಿಸುವುದಿಲ್ಲ. ಆಚಾರ್ಯರ ಮಾತುಗಳನ್ನು ಅನುಸರಿಸುವ ಮೂಲಕ ಏನೂ ಬೇಕಾದರೂ ಸಾಧಿಸಬಹುದು ಜತೆಗೆ ಜೀವನವನ್ನು ತುಂಬಾ ಸುಲಭದಲ್ಲಿ ನಡೆಸಿಕೊಂಡು ಹೋಗಬಹುದು. ಹಾಗಿರುವಾಗ ನೀವು ಇವುಗಳನ್ನು ಹೊಂದಿದ್ದರೆ ನಿಜವಾಗಿಯೂ ಅದೃಷ್ಟವಂತರಾಗಿದ್ದೀರಿ ಎಂದೇ ಅರ್ಥ.

*ನಿಮಗೆ ಎರಡು ಹೊತ್ತಿನ ಊಟ ಸಿಗುತ್ತಿದೆ ಎಂದಾದರೆ ನೀವೇ ಅದೃಷ್ಟವಂತರು. ಏಕೆಂದರೆ ನಿಮ್ಮ ಸುತ್ತಮುತ್ತಲು ಕಣ್ಬಿಟ್ಟು ನೋಡಿ. ಜಗತ್ತಿನಲ್ಲಿ ಅದೆಷ್ಟೋ ಜನರಿಗೆ ಆಹಾರವೇ ಸಿಗುತ್ತಿಲ್ಲ. ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದಾರೆ. ಅದೆಷ್ಟೋ ಜನ ಹಸಿವಿನಿಂದಲೇ ದಿನ ಕಳೆಯುತ್ತಿದ್ದಾರೆ. ಹಾಗಿರುವಾಗ ನಿಮಗೆ ದಿನದ ಊಟ ಸಿಗುತ್ತಿದೆ ಅಂದಾದರೆ ನೀವು ನಿಜವಾಗಿಯೂ ಅದೃಷ್ಟವಂತರು.

*ನೀವು ತಿಂದ ಆಹಾರ ನಿಮಗೆ ಒಗ್ಗುತ್ತಿದೆ ಎಂದಾದರೆ ನೀವೇ ಅದೃಷ್ಟವಂತರು. ಏಕೆಂದರೆ ಆಹಾರ ಕೊರತೆಯಿಲ್ಲದೆ ಅನೇಕರು ಜನರು ಜೀವನ ನಡೆಸುತ್ತಿರಬಹುದು. ಆದರೆ ಕೆಲವು ಕಾರಣಗಳಿಂದ ಆಹಾರವನ್ನು ತಿನ್ನಲು ಸಾಧ್ಯವಾಗುತ್ತಿಲ್ಲ. ಆಹಾರವನ್ನು ಸೇವಿಸಿದರೂ ಸಹ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

*ನೀವು ಶಾಂತಿಯಿಂದಿರುವ ಅಥವಾ ಸೌಮ್ಯ ಗುಣದ ಹೆಂಡತಿಯನ್ನು ಪಡೆದಿದ್ದರೆ ಅದೃಷ್ಟವಂತರು. ಏಕೆಂದರೆ ಅವಳ ಮನಸ್ಸು ಮತ್ತು ಯೋಚನೆ ಇಡೀ ಕುಟುಂಬವನ್ನು ನಡೆಸಿಕೊಂಡು ಹೋಗುತ್ತದೆ. ಹೆಂಡತಿ ಜನಳವಾಡಿದರೆ ಮನೆಯಲ್ಲಿನ ಅಶಾಂತಿಯಿಂದ ಎಲ್ಲರ ಮನಸ್ಸು ಕೆಡುತ್ತದೆ.

*ನಿಮ್ಮ ಬಳಿ ಸಾಕಷ್ಟು ಹಣವಿಲ್ಲದಿದ್ದರೆ ನೀವು ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಮನುಷ್ಯನು ಶ್ರಮ ಪಟ್ಟು ದುಡಿಯುವುದು ಮುಖ್ಯ.

*ನೀವು ದಾನ-ಧರ್ಮದಲ್ಲಿ ತೊಡಗಿದ್ದರೆ ನಿಜವಾಗಿಯೂ ಅದೃಷ್ಟವಂತರಾಗಿರುತ್ತೀರಿ. ದಾನಿಯು ಇತರರ ಜೀವನವನ್ನು ಸುಂದರಗೊಳಿಸುವುದಲ್ಲದೇ ಗೌರವವನ್ನು, ಅರ್ಹತೆಯನ್ನು ಗಳಿಸಿಕೊಳ್ಳುತ್ತಾನೆ. ಆತನು ತನ್ನ ಕುಟುಂಬವನ್ನು ಮತ್ತು ಜೀವನವನ್ನು ಸಮೃದ್ಧಗೊಳಿಸುತ್ತಾನೆ. ಅದಕ್ಕಾಗಿಯೇ ಧರ್ಮಗ್ರಂಥಗಳಲ್ಲಿ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಇದನ್ನೂ ಓದಿ:

Chanakya Niti: ಕೈಯಲ್ಲಿ ಹಣವಿಲ್ಲವೆಂದು ಚಿಂತಿಸುತ್ತಿದ್ದೀರಾ? ದೇವಿ ಲಕ್ಷ್ಮಿಯನ್ನು ಮೆಚ್ಚಿಸಲು ಈ 3 ಮಾರ್ಗಗಳನ್ನು ತಿಳಿದುಕೊಳ್ಳಿ – ಚಾಣಕ್ಯ ನೀತಿ

Chanakya Niti: ಗಂಡ-ಹೆಂಡತಿ ಬಾಂಧವ್ಯದಲ್ಲಿ ಈ ಕೊರತೆಗಳು ಸಂಬಂಧವನ್ನು ಹದಗೆಡಿಸುತ್ತವೆ – ಚಾಣಕ್ಯ ನೀತಿ

Published On - 11:25 am, Sun, 18 July 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್