AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಗಂಡ-ಹೆಂಡತಿ ಬಾಂಧವ್ಯದಲ್ಲಿ ಈ ಕೊರತೆಗಳು ಸಂಬಂಧವನ್ನು ಹದಗೆಡಿಸುತ್ತವೆ – ಚಾಣಕ್ಯ ನೀತಿ

ಚಾಣಕ್ಯ ನೀತಿ: ಗಂಡ- ಹೆಂಡತಿ ನಡುವೆ ಯಾವ ಕೊರತೆಯು ಜೀವನದ ಅತ್ಯಮೂಲ್ಯ ಸಂಬಂಧವನ್ನು ಕೆಡಿಸಬಹುದು ಎಂಬುದಕ್ಕೆ ಚಾಣುಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

Chanakya Niti: ಗಂಡ-ಹೆಂಡತಿ ಬಾಂಧವ್ಯದಲ್ಲಿ ಈ ಕೊರತೆಗಳು ಸಂಬಂಧವನ್ನು ಹದಗೆಡಿಸುತ್ತವೆ - ಚಾಣಕ್ಯ ನೀತಿ
ಚಾಣಕ್ಯ ನೀತಿ
TV9 Web
| Edited By: |

Updated on: Jul 14, 2021 | 12:27 PM

Share

ಆಚಾರ್ಯ ಚಾಣಕ್ಯರು ಜೀವನದ ಪ್ರತಿಯೊಂದು ಆಯಾಮಗಳನ್ನೂ ಚಾಣಕ್ಯ ನೀತಿಯಲ್ಲಿ(Chanakya Niti) ವಿವರಿಸಿದ್ದಾರೆ. ಚಾಣಕ್ಯರು ಹೇಳಿದಂತೆ ಗಂಡ-ಹೆಂಡತಿ (Husband-Wife) ಎಂಬ ಬಾಂಧವ್ಯ ಅತ್ಯಂತ ಪವಿತ್ರವಾಗಿದೆ. ಈ ಸಂಬಂಧವು ನಂಬಿಕೆ ಮತ್ತು ಪ್ರೀತಿಯಿಂದ ಬಲಗೊಳ್ಳುತ್ತದೆ. ಗಂಡ-ಹೆಂಡತಿ ನಡುವೆ ಸುಳ್ಳು ಮತ್ತು ವಂಚನೆಯು ಬಾಂಧವ್ಯವನ್ನು ಹಡಗೆಡಿಸುತ್ತದೆ. ಹಾಗಾಗಿ ಗಂಡ- ಹೆಂಡತಿ ನಡುವೆ ಯಾವ ಕೊರತೆಯು ಜೀವನದ ಅತ್ಯಮೂಲ್ಯ ಸಂಬಂಧವನ್ನು ಕೆಡಿಸಬಹುದು ಎಂಬುದಕ್ಕೆ ಚಾಣುಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಇಬ್ಬರು ಸೇರಿ ಯಾವುದೇ ಒಂದು ಸಮಸ್ಯೆಯನ್ನು ನಿರ್ವಹಿಸಿದರೆ ಅವರು ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಚಾಣುಕ್ಯರು ಹೇಳಿದ್ದಾರೆ. ಅಂಥವರ ಮನೆಯಲ್ಲಿ ಸಂತೋಷ, ಶಾಂತಿ ಸಮೃದ್ಧಿಸುತ್ತದೆ. ಅದಕ್ಕಾಗಿಯೇ ಈ ಸಂಬಂಧದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಜತೆಗೆ ಈ ಸಂಬಂಧವನ್ನು ಹೆಚ್ಚು ಗಟಿಯಾಗಿರಿಸಿಕೊಳ್ಳಬೇಕು ಎಂದು ಚಾಣಕ್ಯುರು ಹೇಳಿದ್ದಾರೆ. ಕೆಲವು ವಿಷಯಗಳಲ್ಲಿ ಗಂಡ ಹೆಂಡತಿ ನಡುವೆ ಬಿರುಕು ಮೂಡುತ್ತದೆ. ಅದನ್ನು ಹೇಗೆ ನಿಭಾಯಿಸಬೇಕು ಮತ್ತು ಯಾವ ಯಾವ ಕಾರಣದಿಂದಾಗಿ ಗಂಡ-ಹೆಂಡತಿ ನಡುವೆ ಬಿರುಕು ಬಿಡುತ್ತದೆ ಎಂಬುದರ ಕುರಿತಾಗಿ ಚಾಣಕ್ಯ ನೀತಿ ಸಾರಿದೆ.

ಗೌರವದ ಕೊರತೆ ಗಂಡ ಹೆಂಡತಿ ಸಂಬಂಧ ಅತ್ಯಂತ ಪವಿತ್ರವಾದದ್ದು. ಇಬ್ಬರೂ ಸಹ ಗೌರವವನ್ನು ಕೊಡಬೇಕು ಜತೆಗೆ ಗೌರವವನ್ನು ಸಂಪಾದಿಸಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಇಬ್ಬರಿಗೂ ಪರಸ್ಪರ ಗೌರವವಿರಬೇಕು. ಗೌರವದ ಕೊರತೆಯು ಇಬ್ಬರ ನಡುವಿನ ಜಗಳ, ಉದ್ವಿಗ್ನತೆ ಮತ್ತು ಸಂಬಂಧವನ್ನು ಕೆಡಿಸುತ್ತದೆ. ಹಾಗಾಗಿ ಈ ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಒಬ್ಬರಿಗೊಬ್ಬರು ಗೌರವವನ್ನು ನೀಡಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ.

ಪರಸ್ಪರ ಸಂವಹನದ ಕೊರತೆ ಪರಸ್ಪರ ಒಬ್ಬರಿಗೊಬ್ಬರು ಮಾತನಾಡುವ ಮೂಲಕ ಯಾವುದೇ ಒಂದು ಸಮಸ್ಯೆಯನ್ನೂ ಸುಲಭದಲ್ಲಿ ನಿಭಾಯಿಸಬಹುದು. ಪರಿಸ್ಥಿತಿ ಏನೇ ಇರಲಿ ಮಾತನ್ನು ಮುಂದುವರೆಸಬೇಕು. ಮಾತು ಬಿಡುವ ಒಂದು ತಪ್ಪು ಸಂಬಂಧವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.

ಪ್ರೀತಿಯ ಕೊರತೆ ಗಂಡ- ಹೆಂಡತಿ ನಡುವಿನ ಸಂಬಂಧದಲ್ಲಿ ಪ್ರೀತಿ ವಿಶೇಷ ಸ್ಥಾನವಿದೆ. ಪರಸ್ಪರ ಪ್ರೀತಿಯ ಕೊರತೆ ಇದ್ದಾಗ ಅಶಾಂತಿ ಉಂಟಾಗುತ್ತದೆ. ಇದು ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಒಬ್ಬರಿಗೊಬ್ಬರು ಗೌರವ, ವಿಶ್ವಾಸದ ಜತೆಗೆ ಪ್ರೀತಿಯನ್ನು ನೀಡುವುದು ಉತ್ತಮ ಎಂಬುದು ಚಾಣಕ್ಯರ ನೀತಿ ಸಾರ ಹೇಳುತ್ತದೆ.

ಇದನ್ನೂ ಓದಿ:

Chanakya Niti: ಮಕ್ಕಳ ಈ ಕೆಲವು ಅಭ್ಯಾಸಗಳನ್ನು ನಿರ್ಲಕ್ಷಿಸುವುದು ಭವಿಷ್ಯವನ್ನೇ ಕಿತ್ತುಕೊಳ್ಳಬಹುದು – ಚಾಣಕ್ಯ ನೀತಿ

Chanakya Niti: ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಇವುಗಳನ್ನು ಪಾಲಿಸಲೇಬೇಕು- ಚಾಣಕ್ಯ ನೀತಿ

Follow Us
Web contact
Web contact

TV9 Kannada

Read More
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್