Chanakya Niti: ಮಕ್ಕಳ ಈ ಕೆಲವು ಅಭ್ಯಾಸಗಳನ್ನು ನಿರ್ಲಕ್ಷಿಸುವುದು ಭವಿಷ್ಯವನ್ನೇ ಕಿತ್ತುಕೊಳ್ಳಬಹುದು – ಚಾಣಕ್ಯ ನೀತಿ
ಚಾಣಕ್ಯ ನೀತಿ: ಮಕ್ಕಳು ಚಿಕ್ಕವರಿದ್ದಾರೆ ಎಂದು ಅನೇಕ ಪೋಷಕರು ಮಕ್ಕಳು ತಪ್ಪು ಮಾಡುತ್ತಿದ್ದರೂ ಸಹ ಅವುಗಳನ್ನು ನಿರ್ಲಕ್ಷಿಸುತ್ತಾರೆ. ಇದೊಂದು ತಪ್ಪು ಮಕ್ಕಳನ್ನು ಮಾತ್ರವಲ್ಲದೇ ಪೋಷಕರಿಗೂ ಸಮಸ್ಯೆ ತಂದೊಡ್ಡುತ್ತದೆ.
ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತಿದೆ. ಪ್ರತಿಯೊಂದು ಮಗುವಿಗೂ ತಮ್ಮ ಮನೆಯೇ ಮೊದಲ ಪಾಠ ಶಾಲೆಯಾಗಿರುತ್ತದೆ. ಪೋಷಕರೇ ಮೊದಲ ಶಿಕ್ಷಕರಾಗಿರುತ್ತಾರೆ. ಪೋಷಕರು ಹೇಳಿಕೊಡುವ ರೀತಿ-ನೀತಿ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತದೆ. ಪ್ರತಿಯೊಬ್ಬ ಪೋಷಕರೂ ಸಹ ತಮ್ಮ ಮಕ್ಕಳ ಬದುಕಿನ ಬಗ್ಗೆ ಅದೆಷ್ಟೋ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಹಾಗಿರುವಾಗ ಮಕ್ಕಳು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸದ ಮೇಲೆ ನಿಗಾ ಇಡಬೇಕು. ಒಳ್ಳೆಯ ಅಭ್ಯಾಸಗಳನ್ನು ಉತ್ತೇಜಿಸಬೇಕು ಮತ್ತು ಕೆಟ್ಟ ಅಭ್ಯಾಸಗಳನ್ನು ತಪ್ಪಿಸಬೇಕು. ಇಲ್ಲದಿದ್ದರೆ ಇದು ಮಕ್ಕಳು ಮತ್ತು ಪೋಷಕರಿಗೆ ಸಮಸ್ಯೆಯನ್ನು ತಂದೊಡ್ಡಬಹುದು ಎಂದು ಚಾಣಕ್ಯ ನೀತಿ ಸಾರುತ್ತದೆ.
ಮಕ್ಕಳು ಚಿಕ್ಕವರಿದ್ದಾರೆ ಎಂದು ಅನೇಕ ಪೋಷಕರು ಮಕ್ಕಳು ತಪ್ಪು ಮಾಡುತ್ತಿದ್ದರೂ ಸಹ ಅವುಗಳನ್ನು ನಿರ್ಲಕ್ಷಿಸುತ್ತಾರೆ. ಇದೊಂದು ತಪ್ಪು ಮಕ್ಕಳನ್ನು ಮಾತ್ರವಲ್ಲದೇ ಪೋಷಕರಿಗೂ ಸಮಸ್ಯೆ ತಂದೊಡ್ಡುತ್ತದೆ. ಹಾಗಿರುವಾಗ ಮಕ್ಕಳು ಮಾತನ್ನು ಕೇಳುವಂತೆ ಮಾಡಲು ಆಚಾರ್ಯ ಚಾಣಕ್ಯ ನೀತಿಯಲ್ಲಿ ಕೆಲವು ಉಲ್ಲೇಖಗಳಿವೆ. ಈ ಕುರಿತಾಗಿ ನೀವು ತಿಳಿಯಲೇಬೇಕು.
ಸುಳ್ಳು ಅಭ್ಯಾಸ ಮಕ್ಕಳು ಅನೇಕ ಬಾರಿ ಪೋಷಕರಿಗೆ ಸುಳ್ಳು ಹೇಳುತ್ತಾರೆ. ಸತ್ಯ ಗೊತ್ತಾದ ಮೇಲೂ ಸಹ ಪೋಷಕರು ತಪ್ಪನ್ನು ನಿರ್ಲಕ್ಷಿಸುತ್ತಾರೆ. ಹೋಗಿರುವಾಗ ಪೋಷಕರನ್ನು ಬಹಳ ಪ್ರೀತಿಯಿಂದ ವರ್ತಿಸಿ ಮಕ್ಕಳಿಗೆ ತಿಳಿಹೇಳಬೇಕು. ಸುಳ್ಳು ಹೇಳುವುದು ಎಷ್ಟು ತಪ್ಪು ಎಂಬುದನ್ನು ವಿವರಿಸಬೇಕು. ಈ ಅಭ್ಯಾಸವನ್ನು ಸಮಯಕ್ಕೆ ಸರಿಯಾಗಿ ತಿದ್ದದಿದ್ದರೆ ಇದು ಮಕ್ಕಳ ಭವಿಷ್ಯವನ್ನೇ ಕಿತ್ತುಕೊಳ್ಳಬಹುದು. ಹಾಗಾಗಿ ಮಕ್ಕಳು ತಪ್ಪು ಹಾದಿಯಲ್ಲಿ ಸಾಗುವುದನ್ನು ತಪ್ಪಿಸಿ.
ಮಕ್ಕಳು ಮಾತನ್ನು ಕೇಳದಿದ್ದಾಗ ಕೆಲವು ಮಕ್ಕಳು ತುಂಬಾ ಹಠವಂತರಾಗಿರುತ್ತಾರೆ. ಹೆತ್ತವರ ಮಾತನ್ನು ಕೇಳುವ ತಾಳ್ಮೆಯೂ ಅವರಿಗಿರುವುದಿಲ್ಲ. ಅಂತಹ ಮಕ್ಕಳಿಗೆ ಸರಿ-ತಪ್ಪುಗಳ ಅರಿವೇ ಆಗುವುದಿಲ್ಲ. ಆದ್ದರಿಂದ ಈ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿದ್ದಾಗೆಯೇ ಸರಿ ದಾರಿಗೆ ತರಬೇಕು. ಪ್ರೀತಿಯಿಂದ ಮಕ್ಕಳ ತಪ್ಪು-ಸರಿಗಳ ಬಗ್ಗೆ ವಿವರಿಸಿ.
ಮಹಾನ್ ಪುರುಷರ ಕಥೆಗಳನ್ನು ವಿವರಿಸಿ ಚಾಣಕ್ಯರ ಪ್ರಕಾರ, ಮಕ್ಕಳು ಚಿಕ್ಕವಯಸ್ಸಿನಲ್ಲಿದ್ದಾಗಲೇ ಅವರಿಗೆ ಮಹಾನ್ ಪುರುಷರ ಕಥೆಗಳ ಸಾರವನ್ನು ವಿವರಿಸಬೇಕು. ಇದು ಮಕ್ಕಳಲ್ಲಿ ಸ್ಪೂರ್ತಿ ತುಂಬುತ್ತದೆ. ಅವರಂತೆಯೇ ನಾನೂ ಆಗಬೇಕೆಂಬ ಹಂಬಲ ಮಕ್ಕಳಲ್ಲಿ ಬೆಳೆಯುತ್ತದೆ. ಹಾಗಾಗಿ ತತ್ವಾದರ್ಶಗಳನ್ನು ಪಾಲಿಸುತ್ತಾರೆ. ಇದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಾಯವಾಗುತ್ತದೆ.
ಪ್ರೀತಿಯಿಂದ ತಿಳಿಹೇಳಿ ಕೋಪ ಅಥವಾ ಸಿಟ್ಟಿನಿಂದ ಮಕ್ಕಳನ್ನು ನಿಭಾಯಿಸಲು ಎಂದೂ ಸಾಧ್ಯವಿಲ್ಲ. ಮಕ್ಕಳಿಗೆ ತಿಳಿಹೇಳಬೇಕಾದರೆ ಪ್ರೀತಿಯಿಂದ ಅವರೊಡನೆ ನಡೆದುಕೊಳ್ಳಿ. ಆಗ ನಿಮ್ಮ ಪ್ರತಿ ಮಾತನ್ನೂ ಸಹ ಮಕ್ಕಳು ಕೇಳುತ್ತಾರೆ. ಐದು ವರ್ಷದ ನಂತರ ಮಕ್ಕಳೊಂದಿಗೆ ಸ್ವಲ್ಪ ಕಟ್ಟುನಿಟ್ಟಾಗಿರಲು ಪ್ರಾರಂಭಿಸಿ. ಆದರೆ ಪ್ರಿತಿಯಿಂದ ತಿಳಿಹೇಳುವದರಿಂದ ಮಕ್ಕಳು ಬಹುಬೇಗ ತಪ್ಪನ್ನು ತಿದ್ದಿಕೊಳ್ಳುತ್ತಾರೆ. ಮಕ್ಕಳ ಮೇಲೆ ಕೈ ಎತ್ತುವುದು, ಹೊಡೆಯುವುದನ್ನು ತಪ್ಪಿಸಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಇದನ್ನೂ ಓದಿ:
Chanakya Niti: ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಇವುಗಳನ್ನು ಪಾಲಿಸಲೇಬೇಕು- ಚಾಣಕ್ಯ ನೀತಿ
Chanakya Niti: ಜೀವನದಲ್ಲಿ ಯಶಸ್ಸು ಪಡೆಯುವುದು ಹೇಗೆ? ಚಾಣಕ್ಯ ನೀತಿಯ ಸಾರವೇನು?