Chanakya Niti: ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಇವುಗಳನ್ನು ಪಾಲಿಸಲೇಬೇಕು- ಚಾಣಕ್ಯ ನೀತಿ

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರು, ಚಾಣಕ್ಯ ನೀತಿಯ ಸಾರದಲ್ಲಿ ಸಂಬಂಧಗಳನ್ನು ಬಲಪಡಿಸಿಕೊಳ್ಳುವುದರ ಬಗ್ಗೆ ತಿಳಿಸಿದ್ದಾರೆ. ವ್ಯಕ್ತಿಯು ಜೀವನದಲ್ಲಿ ಸಂಬಂಧಗಳನ್ನು ಗಟ್ಟಿಕೊಳಿಸಲು ಬಯಸಿದ್ದರೆ ಈ ವಿಷಯಗಳನ್ನು ಪಾಲಿಸಬೇಕು.

Chanakya Niti: ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಇವುಗಳನ್ನು ಪಾಲಿಸಲೇಬೇಕು- ಚಾಣಕ್ಯ ನೀತಿ
ಆಚಾರ್ಯ ಚಾಣಕ್ಯ
Follow us
TV9 Web
| Updated By: shruti hegde

Updated on: Jul 12, 2021 | 12:55 PM

ಪ್ರತಿಯೊಬ್ಬರೂ ಸಹ ಉತ್ತಮ ಸಂಬಂಧಗಳಲ್ಲಿ ಬದುಕಲು ಇಷ್ಟಪಡುತ್ತಾರೆ. ಹೆಚ್ಚು ನಂಬಿಕೆ, ವಿಶ್ವಾಸದಿಂದ ಜನರ ಪ್ರೀತಿಯೊಂದಿಗೆ ಒಳ್ಳೆಯ ಭಾಂದವ್ಯದಲ್ಲಿ ಬದುಕಲು ಬಯಸುತ್ತಾರೆ. ಹೀಗಾಗಿ ಅನೇಕ ಪ್ರಯತ್ನವನ್ನೂ ಮಾಡುತ್ತಾರೆ. ಕುಟುಂಬದ ಸಂಬಂಧವಾಗಿರಲಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿರಲಿ ಒಳ್ಳೆಯ ಪ್ರೀತಿ, ವಿಶ್ವಾಸ ಗಳಿಸಲು ಇಷ್ಟಪಡುತ್ತಾರೆ. ಒಳ್ಳೆಯ ಸಂಬಂಧವು ನಮ್ಮನ್ನು ಗಟ್ಟಿಗೊಳಿಸುತ್ತದೆ. ಅದೆಷ್ಟೋ ತೊಂದರೆಗಳನ್ನು ಸುಲಭದಲ್ಲಿ ತೊಡೆದುಹಾಕಲು ನೆರವಾಗುತ್ತದೆ. ಹಾಗಾಗಿ ನಾವು ನಮ್ಮ ಜೀವನದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು.

ಆಚಾರ್ಯ ಚಾಣಕ್ಯರು, ಚಾಣಕ್ಯ ನೀತಿಯ ಸಾರದಲ್ಲಿ ಸಂಬಂಧಗಳನ್ನು ಬಲಪಡಿಸಿಕೊಳ್ಳುವುದರ ಬಗ್ಗೆ ತಿಳಿಸಿದ್ದಾರೆ. ವ್ಯಕ್ತಿಯು ಜೀವನದಲ್ಲಿ ಸಂಬಂಧಗಳನ್ನು ಗಟ್ಟಿಕೊಳಿಸಲು ಬಯಸಿದ್ದರೆ ಈ ವಿಷಯಗಳನ್ನು ಪಾಲಿಸಬೇಕು.

ಸತ್ಯ ಮತ್ತು ಪ್ರಾಮಾಣಿಕತೆ ಯಾವುದೇ ಒಬ್ಬ ವ್ಯಕ್ತಿಯು ಎಲ್ಲರಿಗೂ ಪ್ರಿಯವಾಗಿ ಇರಲು ಸಾಧ್ಯವಿಲ್ಲ. ಹಾಗಿರುವುದು ಸುಲಭದ ಮಾತೂ ಅಲ್ಲ. ಆದರೆ ಸುಳ್ಳು ಹೇಳುವುದು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತವೆ. ಸುಳ್ಳು ಹೇಳಿ ಸಿಕ್ಕಿ ಬಿದ್ದಾಗ ಜನರೆದುರು ಮುಜುಗರಕ್ಕೆ ಒಳಗಾಗುವ ಪ್ರಸಂಗಗಳು ಎದುರಾಗಬಹುದು. ಹಾಗಾಗಿ ಸಂಬಂಧಗಳ ಅಡಿಪಾಯವು ಯಾವಾಗಲೂ ಸತ್ಯ ಮತ್ತು ಪ್ರಾಮಾಣಿಕವಾಗಿರಬೇಕು.

ನಮ್ರತೆ ಇಟ್ಟುಕೊಳ್ಳಿ ತಮ್ಮ ಭಾಷೆಯಲ್ಲಿ ನಮ್ರತೆ ಮತ್ತು ಮಾಧುರ್ಯತೆಯನ್ನು ಹೊಂದಿರುವ ಆಚಾರ್ಯ ಚಾಣಕ್ಯ ಅವರ ಪ್ರಕಾರ, ಮಧುರ ಧ್ವನಿಯು ಯಾವುದೇ ವ್ಯಕ್ತಿಯ ಹೃದಯವನ್ನು ಗೆಲ್ಲುತ್ತದೆ. ಪ್ರೀತಿ, ವಿಶ್ವಾಸ ನಂಬಿಕೆಯನ್ನು ಹೆಚ್ಚಿಸುತ್ತದೆ. ಜನರನ್ನು ಯಾವಾಗಲೂ ಗೌರವಿಸಿ ಮತ್ತು ಒಳ್ಳೆಯ ಮಾತುಗಳನ್ನಾಡಿ.

ದುರಹಂಕಾರ ಪಡಬೇಡಿ ಯಾವುದೇ ವ್ಯಕ್ತಿಯ ಬಗ್ಗೆ ದುರಹಂಕಾರ ಭಾವ ಬೇಡ. ಇದು ನಿಮ್ಮ ಯಶಸ್ಸಿಗೆ ಅಡ್ಡವಾಗಿರುತ್ತದೆ. ಈ ಕಾರಣದಿಂದಲೇ ನಿಮ್ಮ ಸಂಬಂಧಗಳಲ್ಲಿ ಬಿರುಕು ಬೀಡುತ್ತವೆ. ಆಚಾರ್ಯ ಚಾಣುಕ್ಯರು ಹೇಳಿರುವ ಪ್ರಕಾರ ಯಾವುದೇ ವ್ಯಕ್ತಿಗೆ ಅಹಂ ಇರಬಾರದು. ಇದು ಸಂಬಂಧವನ್ನು ಕೆಡಿಸುತ್ತದೆ.

ಘನತೆಯನ್ನು ಕಾಪಾಡಿಕೊಳ್ಳಿ ಯಾವುದೇ ಒಂದು ಸಂಬಂಧದಲ್ಲಿ ಪರಸ್ಪರ ಗೌರವವನ್ನು ಹೊಂದಿರುವುದು ತುಂಬಾ ಮುಖ್ಯ. ಪ್ರತಿಯೊಂದು ಸಂಬಂಧವನ್ನು ಕಾಪಾಡಿಕೊಂಡು ಹೋಗಲು ಘನತೆ ಇರುವುದು ಬಹಳ ಅವಶ್ಯಕ. ಕೋಪ ಅಥವಾ ಸಿಟ್ಟಿನಿಂದ ಕೂಗಿ ಇನ್ನಿತರರ ಮನಸ್ಸಿಗೆ ನೋವಾಗುವಂತೆ ಎಂದಿಗೂ ನಡೆದುಕೊಳ್ಳಬಾರದು. ಒಬ್ಬ ವ್ಯಕ್ತಿಯು ಇತರರ ಬಗ್ಗೆ ಪ್ರೀತಿ, ಗೌರವವನ್ನು ಹೊಂದಿದ್ದರೆ, ತಾನಾಗಿಯೇ ಅಹಂ ಮತ್ತು ಕೋಪವನ್ನು ಬಿಡುತ್ತಾನೆ. ಅಂಥವರು ಯಾವಾಗಲೂ ಜನರ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತಾರೆ.

ಇದನ್ನೂ ಓದಿ:

Chanakya Niti: ಜೀವನದಲ್ಲಿ ಯಶಸ್ಸು ಪಡೆಯುವುದು ಹೇಗೆ? ಚಾಣಕ್ಯ ನೀತಿಯ ಸಾರವೇನು?

Chanakya Niti: ಜೀವನದ ಈ ಒಂದು ಕೊರತೆ ನಿಮ್ಮ ಯಶಸ್ಸನ್ನೇ ಕಿತ್ತುಕೊಳ್ಳಬಹುದು – ಚಾಣಕ್ಯ ನೀತಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?