AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಜೀವನದಲ್ಲಿ ಯಶಸ್ಸು ಪಡೆಯುವುದು ಹೇಗೆ? ಚಾಣಕ್ಯ ನೀತಿಯ ಸಾರವೇನು?

ಯಶಸ್ಸು ಸಾಧಿಸುವ ವ್ಯಕ್ಯಿಯಲ್ಲಿ ಯಾವ ಗುಣಗಳಿರಬೇಕು ಎಂಬುದನ್ನು ಚಾಣಕ್ಯ ನೀತಿ ಸಾರುತ್ತದೆ. ಈ ಕೆಳಗಿನ ಅಂಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧಿಸುವುದು ಖಂಡಿತ.

Chanakya Niti: ಜೀವನದಲ್ಲಿ ಯಶಸ್ಸು ಪಡೆಯುವುದು ಹೇಗೆ? ಚಾಣಕ್ಯ ನೀತಿಯ ಸಾರವೇನು?
ಆಚಾರ್ಯ ಚಾಣಕ್ಯ
TV9 Web
| Edited By: |

Updated on: Jul 11, 2021 | 3:30 PM

Share

ಪ್ರತಿಯೊಬ್ಬ ವ್ಯಕ್ತಿಯೂ ಸಹ ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸುತ್ತಾನೆ. ಸಮಾಜದಲ್ಲಿ ಹೆಸರು ಗಳಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಜತೆಗೆ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ಬಯಸುತ್ತಾನೆ. ಹಾಗಾಗಿಯೇ ಕಷ್ಟಪಟ್ಟು ಹಗಲಿರುಳು ದುಡಿಯುತ್ತಾನೆ. ಆದರೆ ತಮ್ಮ ಗುರಿಯತ್ತ ಸಾಗಲು ಅದೆಷ್ಟೋ ವಿಷಯಗಳನ್ನು ತ್ಯಾಗ ಮಾಡಿ ಹೋರಾಡುತ್ತಾನೆ. ಆದರೂ ಸಹ ಕೆಲವು ಬಾರಿ ಜೀವನದಲ್ಲಿ ಯಶಸ್ಸು ಸಿಗುವುದೇ ಇಲ್ಲ.  ಯಶಸ್ಸು ಸಾಧಿಸುವ ವ್ಯಕ್ಯಿಯಲ್ಲಿ ಯಾವ ಗುಣಗಳಿರಬೇಕು ಎಂಬುದನ್ನು ಚಾಣಕ್ಯ ನೀತಿ ಸಾರುತ್ತದೆ. ಈ ಕೆಳಗಿನ ಅಂಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧಿಸುವುದು ಖಂಡಿತ.

ಅದೆಷ್ಟೋ ಬಾರಿ ಕಠಿಣ ಪರಿಶ್ರಮವಿದ್ದರೂ ಸಹ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದಿಲ್ಲ. ವಾಸ್ತವ ಪ್ರಜ್ಞೆ ಇಲ್ಲದವರು ಯಶಸ್ಸು ಬರೆಯಲು ಸಾಧ್ಯವಿಲ್ಲ ಎಂಬುದು ಚಾಣಕ್ಯ ನೀತಿ ಹೇಳುತ್ತದೆ. ಯಶಸ್ಸು ಪಡೆಯುವ ಗುರಿ ಹೊಂದಿದಾಗ ಗುರಿಗೆ ಸರಿಯಾದ ದಾರಿ ಹುಡುಕಿಕೊಳ್ಳಬೇಕು. ಆದರೆ ಕೆಲವು ಬಾರಿ ದಿಕ್ಕು ತಪ್ಪಿದಾಗ ಗುರಿ ತಲುಪುದು ಕಷ್ಟ ಎಂದು ಚಾಣುಕ್ಯರು ಹೇಳಿದ್ದಾರೆ.

ಯಶಸ್ಸು ಎಂಬುದು ವ್ಯಕ್ತಿಯ ಬುದ್ಧಿವಂತಿಕೆಯಿಂದ ಕೂಡಿದೆ. ವ್ಯಕ್ತಿಯು ಸರಿಯಾದ ಹಾದಿಯಲ್ಲಿ ಸಾಗಿದರೆ ಜೀವನದಲ್ಲಿ ಎದುರಾಗುವ ತೊಂದರೆಗಳೆಲ್ಲವನ್ನೂ ನಿಭಾಯಿಸಿ ಯಶಸ್ಸಿನತ್ತ ಸಾಗುತ್ತಾನೆ. ಆಚಾರ್ಯ ಚಾಣುಕ್ಯರು ಇಂದಿನ ಕಾಲಕ್ಕೂ ಸರಿಹೊಂದುವ ತರ್ಕಬದ್ಧ ನೀತಿಯನ್ನು ಸಾರಿದ್ದಾರೆ. ಯಶಸ್ಸಿನತ್ತ ಸಾಗಲು ವ್ಯಕ್ತಿಯು ಪರದಾಡುವ ಸ್ಥಿತಿಯನ್ನು ಚಾಣಕ್ಯ ನೀತಿ ಸಾರುತ್ತದೆ. ಜತೆಗೆ ಯಶಸ್ಸು ಪಡೆಯುವ ಮಾರ್ಗವನ್ನು ಸಹ ವಿವರಿಸುತ್ತದೆ.

ಸ್ಪಷ್ಟವಾದ ಗುರಿಯಿರಲಿ ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ವ್ಯಕ್ತಿಗೆ ಸ್ಪಷ್ಟವಾದ ಗುರಿಯಿರಬೇಕು. ಆ ಗುರಿಯನ್ನು ತಲುಪಲು ಶ್ರಮಿಸಬೇಕು. ಯಶಸ್ಸು ಪಡೆಯಲು ಗುರಿ ಇಲ್ಲದಿದ್ದರೆ ಸಾಧನೆಯತ್ತ ಸಾಗಲು ಸಾಧ್ಯವೇ ಇಲ್ಲ. ಈ ಕುರಿತಾಗಿ ಯುವಕರು ಗಂಭೀರವಾಗಿ ಯೋಚಿಸಲೇಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಕಠಿಣ ಪರಿಶ್ರಮಕ್ಕೆ ಎಂದಿಗೂ ಭಯಬೇಡ ಜೀವನದಲ್ಲಿ ಯಶಸ್ಸು ಪಡೆಯಲು ಏಕೈಕ ಸೂತ್ರವೆಂದರೆ ಕಠಿಣ ಪರಿಶ್ರಮ. ಕಷ್ಟಪಟ್ಟು ದುಡಿಯುವುದರಿಂದ ಕೆಟ್ಟ ಚಟಗಳಿಂದ ತಾನಾಗಿಯೇ ದೂರವಿರುತ್ತಾರೆ. ಯಶಸ್ಸು ಪಡೆಯುವತ್ತ ನಿಮ್ಮ ಗುರಿಯಿದ್ದರೆ ಶ್ರಮಿಸಬೇಕು. ನೀವು ಕಷ್ಟ ಪಟ್ಟು ಕೆಲಸ ಮಾಡಿದರೆ ಲಕ್ಷ್ಮಿ ದೇವಿಯೂ ಆಶೀರ್ವದಿಸುತ್ತಾಳೆ.

ಕೆಟ್ಟ ಅಭ್ಯಾಸದಿಂದ ದೂರವಿರಿ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಎಲ್ಲಾ ದುಷ್ಚಟಗಳಿಂದ ದೂರವಿರಿ. ಈ ವಿಷಯದ ಬಗ್ಗೆ ಗಮನ ಕೊಟ್ಟವರು ಸಾರ್ವಕಾಲಿಕ ಯಶಸ್ಸಿಗೆ ಹೋರಾಡುತ್ತಲೇ ಇರುತ್ತಾರೆ. ನೀವು ಮಾಡುವ ಕೆಟ್ಟ ಕೆಲಸಗಳು ನಿಮ್ಮ ಗುರಿಗೆ ಯಾವಾಗಲೂ ಅಡ್ಡವಾಗಿಯೇ ಇರುತ್ತದೆ. ಆದ್ದರಿಂದ ಕೆಟ್ಟ ಅಭ್ಯಾಸಗಳಿಂದ ದೂರವಿದ್ದರೆ ಜೀವನದಲ್ಲಿ ಯಶಸ್ಸು ಖಂಡಿತ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಇದನ್ನೂ ಓದಿ:

Chanakya Niti: ಜೀವನದ ಈ ಒಂದು ಕೊರತೆ ನಿಮ್ಮ ಯಶಸ್ಸನ್ನೇ ಕಿತ್ತುಕೊಳ್ಳಬಹುದು – ಚಾಣಕ್ಯ ನೀತಿ

Chanakya Niti: ಈ 4 ಅಂಶಗಳನ್ನು ಪಾಲಿಸಿದರೆ ಗೆಲುವು ನಿಮ್ಮ ಬಳಿ ಇರುತ್ತದೆ – ಚಾಣಕ್ಯ ನೀತಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ