Chanakya Niti: ಜೀವನದ ಈ ಒಂದು ಕೊರತೆ ನಿಮ್ಮ ಯಶಸ್ಸನ್ನೇ ಕಿತ್ತುಕೊಳ್ಳಬಹುದು – ಚಾಣಕ್ಯ ನೀತಿ

ನೀವು ನಿಮ್ಮ ಮನಸ್ಸನ್ನು ಗೆದ್ದಿದ್ದರೆ ಅಂದರೆ ನಿಮ್ಮ ಮನಸ್ಸು ನಿಮ್ಮ ನಿಯಂತ್ರಣದಲ್ಲಿದ್ದರೆ ನೀವು ಏನನ್ನು ಸಾಧಿಸಲೂ ಭಯಪಡುವ ಅವಶ್ಯಕತೆ ಇಲ್ಲ. ಜತೆಗೆ ವಿಜಯಶಾಲಿಯಾಗುವುದು ಕಷ್ಟವೇನಲ್ಲ.

Chanakya Niti: ಜೀವನದ ಈ ಒಂದು ಕೊರತೆ ನಿಮ್ಮ ಯಶಸ್ಸನ್ನೇ ಕಿತ್ತುಕೊಳ್ಳಬಹುದು - ಚಾಣಕ್ಯ ನೀತಿ
ಚಾಣಕ್ಯ ನೀತಿ
Follow us
TV9 Web
| Updated By: Digi Tech Desk

Updated on:Jul 07, 2021 | 5:44 PM

ಆಚಾರ್ಯ ಚಾಣುಕ್ಯರು ಶ್ರೇಷ್ಠ ಅರ್ಥಶಾಸ್ತ್ರಜ್ಞರು, ರಾಜಕಾರಣಿ ಮತ್ತು ಸಾಮಾಜಿಕ ವಿಷಯಗಳನ್ನು ಬಲ್ಲವರು. ಭಾರತೀಯ ಪರಂಪರೆಯಲ್ಲಿ ಆಚಾರ್ಯ ಚಾಣುಕ್ಯರಿಗೆ ವಿಶೇಷ ಸ್ಥಾನಮಾನವಿದೆ. ಈಗಿನ ಕಾಲಮಾನಕ್ಕೂ ಸರಿಹೊಂದುವ ಅದೆಷ್ಟೋ ವಿಷಯಗಳ ಕುರಿತಾಗಿ ಅವರು ಹೇಳಿದ್ದಾರೆ. ಚಾಣುಕ್ಯರು ಯಾವುದೇ ಒಂದು ವಿಷಯವನ್ನು ದೂರದಿಂದಲೇ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಆಚಾರ್ಯ ಚಾಣುಕ್ಯರು ತಮ್ಮ ಜ್ಞಾನವನ್ನು ಕೇವಲ ತಮಗೆ ಮಾತ್ರ ಎಂದು ಸೀಮಿತಗೊಳಿಸಲಿಲ್ಲ. ಇತರರಿಗೂ ಸಹ ಸಹಾಯವಾಗುವಂತೆ ಮಾರ್ಗದರ್ಶನ ನೀಡಿದರು. ಅವರು ತಮ್ಮ ಅನುಭವಗಳ ಕೆಲವು ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಜನರಿಗೆ ಜೀವನವನ್ನು ನಿಭಾಯಿಸುವ ಸರಳ ಮಾರ್ಗವನ್ನು ತೋರಿಸಿದ್ದಾರೆ.

ಜನರು ಆಚಾರ್ಯರ ನುಡಿಗಳನ್ನು ಅನುಸರಿಸಿದರೆ ಸುಲಭವಾಗಿ ಜೀವನವನ್ನು ನಿಭಾಯಿಸಬಲ್ಲರು. ಒಬ್ಬ ವ್ಯಕ್ತಿಯು ತನ್ನ ಶ್ರಮವನ್ನು ಹೇಗೆಲ್ಲಾ ಹಾಳು ಮಾಡುತ್ತಾನೆ ಎಂದು ಚಾಣುಕ್ಯ ನೀತಿಯ 13ನೇ ಅಧ್ಯಾಯದ 15ನೇ ಶ್ಲೋಕದಲ್ಲಿ ಹೇಳಿದ್ದಾರೆ.

ಮನಸ್ಸಿನ ನಿಯಂತ್ರಣ ಕೆಲಸದಲ್ಲಿ ಯಶಸ್ಸು ಕಾಣಬೇಕಾದರೆ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯ ಎಂದು ಚಾಣುಕ್ಯರು ಹೇಳುತ್ತಾರೆ. ಯಾರ ಮನಸ್ಸು ಸ್ಥಿರವಾಗಿರುವುದಿಲ್ಲವೋ ಅಂತಹ ವ್ಯಕ್ತಿಯು ಜನರ ಮಧ್ಯೆ ಅಸೂಯೆಯನ್ನೇ ಗುರುತಿಸುತ್ತಾನೆ. ಬೇರೆಯವರ ಮೇಲೆ ಅಸೂಯೆ ಹೊಂದಿರುತ್ತಾನೆ. ಹಾಗೆಯೇ ಆತ ಎಲ್ಲಿ ಹೋದರೂ ಸಹ ಒಬ್ಬಂಟಿ ಜೀವನವೇ ಆತನದ್ದಾಗಿರುತ್ತದೆ ಎಂದು ಹೇಳಿದ್ದಾರೆ. ಮನಸ್ಸಿನ ಚಂಚಲತೆ ಜೀವನದ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಮನಸ್ಸಿನ ಚಂಚಲತೆಯನ್ನು ತೆಗೆದು ಹಾಕುವುದು ಬಹಳ ಮುಖ್ಯ. ಏಕೆಂದರೆ ಮನಸ್ಸು ಚಂಚಲವಾಗಿರುವ ವ್ಯಕ್ತಿ ಎಷ್ಟೇ ಶ್ರಮಪಟ್ಟು ಕೆಲಸ ನಿರ್ವಹಿಸಿದರೂ ಸಹ ಆತನ ಪರಿಶ್ರಮಕ್ಕೆ ಯಶಸ್ಸು ಸಿಗುವುದಿಲ್ಲ. ಆತನ ಚಂಚಲತೆ ಅಲೆದಾಡುವಂತೆ ಮಾಡುತ್ತದೆ. ಸ್ಥಿರವಾಗಿ ಒಂದು ಕಡೆ ನೆಲೆ ನಿಲ್ಲಲು ಸಾಧ್ಯವಾಗುವುದಿಲ್ಲ. ಇತರರು ಪ್ರಗತಿ ಹೊಂದುತ್ತಿರುವುದನ್ನು ಕಂಡಾಗ ಆತ ಅಸೂಯೆ ಪಡುತ್ತಾನೆ ಮತ್ತು ನಿರಾಶೆಗೊಳ್ಳುತ್ತಾನೆ. ಹಾಗಿರುವಾಗ ಆತ ಎಲ್ಲಿ ಹೋದರೂ ಸಹ ಜೀವನದಲ್ಲಿ ಸಂತೋಷವನ್ನು ಅನುಭವಿಸಲು ಸಾಧ್ಯವಿಲ್ಲ.

ಯಶಸ್ಸು ಕಾಣಬೇಕಾದರೆ ಏನು ಮಾಡಬೇಕು? ನಿಜವಾಗಿಯೂ ಯಶಸ್ಸು ಕಾಣಬೇಕಾದರೆ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯವಶ್ಯಕ. ಯಾರ ಮನಸ್ಸು ನಿಯಂತ್ರಣದಲ್ಲಿದೆಯೋ ಆತ ಏನನ್ನೂ ಬೇಕಾದರೂ ಸಾಧಿಸುತ್ತಾನೆ. ಶ್ರೀಕೃಷ್ಟನೂ ಸಹ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮಹತ್ವವನ್ನು ವಿವರಿಸುತ್ತಾರೆ. ಮನಸ್ಸಿನಿಂದ ವಿಜಯಶಾಲಿ ಆಗಬಹುದು, ಮನಸ್ಸಿನಿಂದಲೇ ಸೋಲುಗಳು ಕಳೆದು ಹೋಗುತ್ತವೆ ಎಂದು ಹೇಳಿದ್ದಾರೆ. ನೀವು ನಿಮ್ಮ ಮನಸ್ಸನ್ನು ಗೆದ್ದಿದ್ದರೆ ಅಂದರೆ ನಿಮ್ಮ ಮನಸ್ಸು ನಿಮ್ಮ ನಿಯಂತ್ರಣದಲ್ಲಿದ್ದರೆ ನೀವು ಏನನ್ನು ಸಾಧಿಸಲೂ ಭಯಪಡುವ ಅವಶ್ಯಕತೆ ಇಲ್ಲ. ಜತೆಗೆ ವಿಜಯಶಾಲಿಯಾಗುವುದು ಕಷ್ಟವೇನಲ್ಲ. ಆದರೆ ನಿಮ್ಮ ಮನಸ್ಸಿಗೆ ನೀವು ಗುಲಾಮರಾಗಿದ್ದರೆ ವ್ಯಕ್ತಿಯು ಯಶಸ್ಸನ್ನು ಕಾಣುವುದು ಅಸಾಧ್ಯ. ನೀವು ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂಬ ಆಸೆ ಹೊಂದಿದ್ದರೆ ನಿಮ್ಮ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿ.

ಇದನ್ನೂ ಓದಿ:

Chanakya Niti: ಈ ನಾಲ್ಕು ಗುಣ ಇರುವ ವ್ಯಕ್ತಿಗಳ ಕೈಯಲ್ಲಿ ಹಣ ಉಳಿಯಲಾರದು; ವಿವರ ಇಲ್ಲಿದೆ

Chanakya Niti: ಈ 4 ಅಂಶಗಳನ್ನು ಪಾಲಿಸಿದರೆ ಗೆಲುವು ನಿಮ್ಮ ಬಳಿ ಇರುತ್ತದೆ – ಚಾಣಕ್ಯ ನೀತಿ

Published On - 5:05 pm, Wed, 7 July 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ