Chanakya Niti: ಈ ನಾಲ್ಕು ಗುಣ ಇರುವ ವ್ಯಕ್ತಿಗಳ ಕೈಯಲ್ಲಿ ಹಣ ಉಳಿಯಲಾರದು; ವಿವರ ಇಲ್ಲಿದೆ
ಚಾಣಕ್ಯನು ಅಗತ್ಯದಷ್ಟು ಸಂಪತ್ತು ಕೂಡಿಡುವ ಬಗ್ಗೆ ಕೂಡ ತಿಳಿಸಿದ್ದಾನೆ. ಆದರೆ ಮನುಷ್ಯನ ಕೆಲವೊಂದು ಗುಣಗಳ ಆತನ ಸಂಪತ್ತನ್ನು ಕಸಿದುಕೊಳ್ಳಬಹುದು ಹಾಗೂ ಅವನನ್ನು ಬಡತನದಲ್ಲಿ ದೂಡಬಹುದು. ಆಚಾರ್ಯ ಚಾಣಕ್ಯ ಅಂತಹ ಕೆಲವು ಅಭ್ಯಾಸಗಳ ಬಗ್ಗೆ ಮುಂಜಾಗ್ರತೆ ತಿಳಿಸಿದ್ದಾನೆ.
ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ಯಾವತ್ತೂ ಹಣ, ಸಂಪತ್ತು ಅದರ ಸದ್ಬಳಕೆ ಹಾಗೂ ಅಗತ್ಯವನ್ನು ಹೇಳಿದ್ದಾನೆ. ಹಣ ಅಥವಾ ಸಂಪತ್ತು ಮನುಷ್ಯನ ನಿಜವಾದ ಜೊತೆಗಾರ ಎಂದೂ ಚಾಣಕ್ಯ ತಿಳಿಸಿದ್ದಾನೆ. ಮಾನವನ ಬದುಕಿನ ಕಷ್ಟ, ನೋವು, ಸೋಲಿನ ಸಂದರ್ಭದಲ್ಲಿ ಹಣ ಆಸರೆ ಆಗಬಲ್ಲದು. ಈ ಬಗ್ಗೆ ಚಾಣಕ್ಯನ ವಿವರಣೆಗಳನ್ನು ತಿಳಿದುಕೊಂಡು ಮುನ್ನಡೆಯುವುದರಿಂದ ಬಹಳಷ್ಟು ಉಪಯೋಗ ಆಗಬಹುದು.
ಚಾಣಕ್ಯನು ಅಗತ್ಯದಷ್ಟು ಸಂಪತ್ತು ಕೂಡಿಡುವ ಬಗ್ಗೆ ಕೂಡ ತಿಳಿಸಿದ್ದಾನೆ. ಆದರೆ ಮನುಷ್ಯನ ಕೆಲವೊಂದು ಗುಣಗಳ ಆತನ ಸಂಪತ್ತನ್ನು ಕಸಿದುಕೊಳ್ಳಬಹುದು ಹಾಗೂ ಅವನನ್ನು ಬಡತನದಲ್ಲಿ ದೂಡಬಹುದು. ಆಚಾರ್ಯ ಚಾಣಕ್ಯ ಅಂತಹ ಕೆಲವು ಅಭ್ಯಾಸಗಳ ಬಗ್ಗೆ ಮುಂಜಾಗ್ರತೆ ತಿಳಿಸಿದ್ದಾನೆ. ಇಂತಹ ಅಭ್ಯಾಸಗಳು ಮನುಷ್ಯ ಜೀವನವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು ಎಂದು ವಿವರಣೆ ನೀಡಿದ್ದಾನೆ. ಅವುಗಳ ವಿವರಣೆ ಇಲ್ಲಿದೆ.
- ಆಚಾರ್ಯ ಚಾಣಕ್ಯ ಹೇಳುವಂತೆ ಬೆಳಗ್ಗಿನ ಸಮಯ ಬಹಳ ಅಮೂಲ್ಯವಾದದ್ದು ಆಗಿದೆ. ಹಾಗಾಗಿ, ಪ್ರತಿಯೊಬ್ಬ ಮನುಷ್ಯ ಕೂಡ ಬೆಳಗ್ಗೆ ಬೇಗನೆ ಅಂದರೆ ಸೂರ್ಯೋದಯದ ಕಾಲಕ್ಕಾಗಲೇ ಎದ್ದಿರಬೇಕು. ಸಮಯಕ್ಕೆ ಮಹತ್ವ ಕೊಡುವ ಪ್ರತಿಯೊಬ್ಬರೂ ಈ ಕ್ರಮ ಅನುಸರಿಸಬೇಕು. ಯಾರೆಲ್ಲಾ ಬೆಳಗ್ಗೆ ಬಹಳಷ್ಟು ಕಾಲ ಹಾಸಿಗೆಯಲ್ಲೇ ಕಳೆಯುತ್ತಾರೋ ಅಂಥವರು ತಮ್ಮ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಾರೆ. ಹಾಗೂ ಅಂಥವರಿಗೆ ಲಕ್ಷ್ಮೀದೇವಿಯ ಅನುಗ್ರಹ ಇರುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾನೆ.
- ಶುಚಿತ್ವಕ್ಕೆ ಚಾಣಕ್ಯ ಮಹತ್ವ ಕೊಟ್ಟಿದ್ದಾನೆ. ದೇಹದ ಶುಚಿತ್ವ, ನಮ್ಮ ಸುತ್ತಲಿನ ವಾತಾವರಣ ಸ್ವಚ್ಛತೆ ಅತಿ ಅಗತ್ಯವಾಗಿದೆ. ಅಷ್ಟೇ ಅಲ್ಲದೆ ನಮ್ಮ ಬಟ್ಟೆ, ಹಲ್ಲುಗಳ ಸ್ವಚ್ಛತೆ ಕೂಡ ಮುಖ್ಯವಾಗಿದೆ. ದಿನನಿತ್ಯವೂ ಸ್ನಾನಾದಿ ಕರ್ಮಗಳನ್ನು ಮಾಡಿ ಸ್ವಚ್ಛವಾಗಿರಬೇಕು. ಹೀಗೆ ಸ್ವಚ್ಛತೆಯ ಕಡೆಗೆ ಗಮನ ಕೊಡದವರ ಜೊತೆಗೆ ಲಕ್ಷ್ಮೀ ಉಳಿಯುವುದಿಲ್ಲ. ಅಂದರೆ, ಅವರ ಜೊತೆಗೆ ಅನಾರೋಗ್ಯ ಸೇರಿಕೊಳ್ಳುವ ಸಂಭವ, ಹಣ ಉಳಿತಾಯ ಆಗದಿರುವ ಸಾಧ್ಯತೆಯೇ ಹೆಚ್ಚು.
- ಆಹಾರ ಸೇವನೆ ಕೂಡ ದಿನನಿತ್ಯದ ಒಂದು ಬಹುಮುಖ್ಯ ಕಾರ್ಯ. ಹಾಗಾಗಿ ಪ್ರತಿಯೊಬ್ಬರೂ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ಇದರಿಂದಾಗಿ ನಮ್ಮ ದೇಹ ಶಕ್ತಿಯುತವಾಗಿ, ಕೆಲಸ ಮಾಡುವ ಸಾಮರ್ಥ್ಯ ಉಳಿಸಿಕೊಳ್ಳುತ್ತದೆ. ಹಾಗೆಂದು ನಾವು ಬದುಕುವುದಕ್ಕಾಗಿ ತಿನ್ನಬೇಕು. ತಿನ್ನುವುದಕ್ಕಾಗೇ ಬದುಕಿದ್ದು ಎಂದಾಗಬಾರದು. ಅಂದರೆ, ದಿನಪೂರ್ತಿ ತಿನ್ನುವುದು ಒಂದನ್ನೇ ಯೋಚಿಸುತ್ತಾ ಇರುವವರ ಬಳಿ ಹಣ ಉಳಿಯಲಾರದು.
- ಜಗತ್ತಿನಲ್ಲಿ ಎಂತಹದೇ ಕಾರ್ಯವನ್ನು ನಾವು ಸ್ನೇಹ ಮತ್ತು ಉತ್ತಮ ಮಾತುಗಳಿಂದಲೇ ಮಾಡಬಹುದು. ಬದಲಾಗಿ, ಯಾವತ್ತೂ ಸಿಡುಕು ಮತ್ತು ಕೆಟ್ಟ ಮಾತುಗಳಿಂದಲೇ ಇರುವವರಿಗೆ ಗೌರವ ಸಿಗದು. ಹಾಗೂ ಅಂಥವರ ಬಳಿ ಹಣ ಬಂದರೂ ಅದು ಉಳಿಯುವುದು ಕಷ್ಟಸಾಧ್ಯ.
ಇದನ್ನೂ ಓದಿ: Chanakya Niti: ಈ ವಿಚಾರಗಳನ್ನು ಗಂಡ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದು; ಚಾಣಕ್ಯ ನೀತಿ ಇಲ್ಲಿದೆ
Chanakya Niti: ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಎಲ್ಲರ ಇಷ್ಟದ ನಾಯಕನಾಗುತ್ತಾನೆ; ಚಾಣಕ್ಯನ ವಿವರಣೆ ಇಲ್ಲಿದೆ