Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಎಲ್ಲರ ಇಷ್ಟದ ನಾಯಕನಾಗುತ್ತಾನೆ; ಚಾಣಕ್ಯನ ವಿವರಣೆ ಇಲ್ಲಿದೆ

ಯಶಸ್ವಿ ನಾಯಕತ್ವದ ನಾಲ್ಕು ವಿಶೇಷ ಗುಣಗಳ ಬಗ್ಗೆ ಆಚಾರ್ಯ ಚಾಣಕ್ಯ ತಿಳಿಸಿದ್ದಾನೆ. ಚಾಣಕ್ಯ ಗುರುತಿಸಿದಂತೆ ಈ ಗುಣವುಳ್ಳ ನಾಯಕರು ಎಲ್ಲರಿಗೂ ಅಚ್ಚುಮೆಚ್ಚಿನವರಾಗುತ್ತಾರೆ.

Chanakya Niti: ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಎಲ್ಲರ ಇಷ್ಟದ ನಾಯಕನಾಗುತ್ತಾನೆ; ಚಾಣಕ್ಯನ ವಿವರಣೆ ಇಲ್ಲಿದೆ
ಚಾಣಕ್ಯ
Follow us
TV9 Web
| Updated By: ganapathi bhat

Updated on: Jun 05, 2021 | 7:33 PM

ನಾಯಕತ್ವ ಗುಣಗಳು ಹಲವರಲ್ಲಿ ಇರಬಹುದು, ಹಾಗೆಂದು ಅವರೆಲ್ಲರೂ ಉತ್ತಮ ನಾಯಕರು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅಥವಾ ನಾಯಕತ್ವ ಗುಣ ಇದ್ದ ಮಾತ್ರಕ್ಕೆ ಉತ್ತಮ ನಾಯಕ ಎಂದು ಅನಿಸಿಕೊಳ್ಳಬೇಕು ಎಂದೂ ಇಲ್ಲ. ನಿಜವಾದ ನಾಯಕ ಪ್ರತಿಯೊಬ್ಬರ ಬಗ್ಗೆಯೂ ಕಾಳಜಿ ಉಳ್ಳವನಾಗಿರುತ್ತಾನೆ. ಎಲ್ಲರ ಬಗ್ಗೆಯೂ ಚಿಂತಿಸುವ, ನೋವನ್ನು ಅರ್ಥಮಾಡಿಕೊಳ್ಳುವ, ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವವನಾಗಿ ಇರುತ್ತಾನೆ. ಅಂತಹ ನಾಯಕನನ್ನು ಎಲ್ಲರೂ ಇಷ್ಟಪಡುತ್ತಾರೆ.

ಹಾಗಾಗಿ, ನಾಯಕತ್ವ ಗುಣ ಹೊಂದಿರುವುದು ಮತ್ತು ಯಶಸ್ವಿ ನಾಯಕ ಎಂಬ ವಿಚಾರದ ನಡುವೆ ಸಣ್ಣ ವ್ಯತ್ಯಾಸ ಇರಬಹುದು. ಯಶಸ್ವಿ ನಾಯಕತ್ವದ ನಾಲ್ಕು ವಿಶೇಷ ಗುಣಗಳ ಬಗ್ಗೆ ಆಚಾರ್ಯ ಚಾಣಕ್ಯ ತಿಳಿಸಿದ್ದಾನೆ. ಚಾಣಕ್ಯ ಗುರುತಿಸಿದಂತೆ ಈ ಗುಣವುಳ್ಳ ನಾಯಕರು ಎಲ್ಲರಿಗೂ ಅಚ್ಚುಮೆಚ್ಚಿನವರಾಗುತ್ತಾರೆ. ಇಂತಹ ನಾಯಕರನ್ನು ಎಲ್ಲರೂ ಹಿಂಬಾಲಿಸುತ್ತಾರೆ ಮತ್ತು ಭವಿಷ್ಯವೂ ಅವರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ಆ ಗುಣಗಳ ಬಗ್ಗೆ ಇಲ್ಲಿದೆ ಮಾಹಿತಿ.

ತಾಳ್ಮೆ: ಬದುಕಿನಲ್ಲಿ ಸಂತಸ, ದುಃಖ ಎರಡೂ ಇರುತ್ತದೆ. ಆದರೆ, ಈ ಎರಡನ್ನು ಕೂಡ ಸಮತೋಲನದಲ್ಲಿ ಇಟ್ಟುಕೊಳ್ಳುವುದು ಒಬ್ಬಾತನಿಗೆ ಗೊತ್ತಿರಬೇಕು. ನೋವು- ನಲಿವುಗಳನ್ನು ಸರಿದೂಗಿಸಿಕೊಂಡು ಹೋಗಬೇಕು. ಅದಕ್ಕಾಗಿ ತಾಳ್ಮೆ ಅಗತ್ಯ. ತಾಳ್ಮೆ ಇರುವ ವ್ಯಕ್ತಿ ಎಂತಹ ಸಂದಿಗ್ಧ ಸಂದರ್ಭದಲ್ಲಿ ಕೂಡ ತನ್ನ ಕೆಲಸವನ್ನು ಮಾಡಬಲ್ಲವನಾಗಿ ಇರುತ್ತಾನೆ. ಹಾಗೂ ಜನರಲ್ಲಿ ಸ್ಫೂರ್ತಿ ತುಂಬುತ್ತಾನೆ.

ಒಳ್ಳಯೆ ಮಾತು: ಒಬ್ಬ ಮನುಷ್ಯನನ್ನು ಆತನ ಮಾತಿನಿಂದ ಕಂಡುಕೊಳ್ಳಬಹುದು. ಅಥವಾ ಅರ್ಥಮಾಡಿಕೊಳ್ಳಬಹುದು. ಮಾತು ಯಾವತ್ತೂ ಕಹಿಯಾಗಿ ಇದ್ದರೆ ಅಂಥವರನ್ನು ಯಾರೊಬ್ಬರೂ ಇಷ್ಟಪಡುವುದಿಲ್ಲ. ಆದರೆ, ಒಳ್ಳೆಯ ಮಾತುಗಳನ್ನು ಆಡುವುದು ಎಲ್ಲರಿಗೂ ಇಷ್ಟವಾಗುತ್ತದೆ. ಅಂಥವರು ನೋವು ನಿವಾರಿಸುವ ಆಪ್ತರಾಗಿಯೂ ಕಾಣುತ್ತಾರೆ. ಹಾಗಾಗಿಯೇ, ಉತ್ತಮ ನಾಯಕ ಅಥವಾ ಯಶಸ್ವಿ ನಾಯಕ ಒಳ್ಳೆಯ ಮಾತುಗಳನ್ನೇ ಆಡಬೇಕು.

ದಾನ ಮಾಡುವ ಗುಣ: ಕೊಡುವ ಗುಣವೇ ಇಲ್ಲದವನು ಯಾವ ನೋವನ್ನು ಕೂಡ ಸರಿಯಾಗಿ ಅರ್ಥಮಾಡಿಕೊಳ್ಳಲಾರ ಎಂದು ಹೇಳಲಾಗಿದೆ. ತನ್ನಲ್ಲಿ ಇರುವುದನ್ನು ಅಗತ್ಯ ಇರುವವರಿಗೆ ದಾನ ಮಾಡುವ ಗುಣ ಉತ್ತಮ ನಾಯಕನಿಗೆ ಅಗತ್ಯವಾಗಿದೆ. ದಾನ, ಧರ್ಮ ಮಾಡುವಾತ, ಇತರರ ಒಳಿತನ್ನು ಹಾಗೂ ಏಳಿಗೆಯನ್ನು ಬಯಸುವಾತ ಉತ್ತಮ ನಾಯಕ ಎಂದು ಎನಿಸಿಕೊಳ್ಳಬಲ್ಲ. ಅಂತವರ ಅಹಂಕಾರ ಕೂಡ ಕಡಿಮೆಯಾಗಿಯೇ ಇರುತ್ತದೆ ಎಂದು ಚಾಣಕ್ಯ ಹೇಳಿದ್ಧಾನೆ.

ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ: ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇರುವುದು ಪ್ರತಿ ನಾಯಕನ ಅಗತ್ಯವಾಗಿದೆ. ಯಾವಾಗ ಸಮಯ ನಮಗೆ ಸವಾಲೊಡ್ಡುತ್ತದೆ ಎಂದು ಹೇಳಲಾಗುವುದಿಲ್ಲ. ನಮ್ಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಗಟ್ಟಿಯಾಗಿದ್ದರೆ ಎಂತಹ ಸಂದರ್ಭವನ್ನು ಕೂಡ ಎದುರಿಸಬಹುದು. ಯಾವ ಸನ್ನಿವೇಷದಲ್ಲೂ ಧೃತಿಗೆಡಬೇಕಾಗಿಲ್ಲ. ಹಾಗಾಗಿ, ಸಮಯ ಸಂದರ್ಭ ಅನುಸಾರ ಸರಿಯಾದ ನಿರ್ಧಾರ ಕೈಗೊಳ್ಳುವವನು ಉತ್ತಮ ನಾಯಕ ಎನಿಸಿಕೊಳ್ಳಬಲ್ಲ.

ಇದನ್ನೂ ಓದಿ: Chanakya Niti: ಇಂತಹ ಸಂದರ್ಭಗಳನ್ನು ಎದುರಿಸುವುದಕ್ಕಿಂತ ತಪ್ಪಿಸಿಕೊಳ್ಳುವುದೇ ಒಳ್ಳೆಯದು; ಚಾಣಕ್ಯ ಹೇಳುವ ನೀತಿ ಇಲ್ಲಿದೆ

Chanakya Niti: ಚಾಣಕ್ಯ ನೀತಿ ಪಾಲನೆಯಿಂದ ಜೀವನದಲ್ಲಿ ಮಹತ್ತರ ಬದಲಾವಣೆ ಸಾಧ್ಯ; ಉತ್ತಮ ಜೀವನಕ್ಕೆ ಇಲ್ಲಿದೆ ಕೆಲವು ಅಂಶ

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ