Chanakya Niti: ಇಂತಹ ಸಂದರ್ಭಗಳನ್ನು ಎದುರಿಸುವುದಕ್ಕಿಂತ ತಪ್ಪಿಸಿಕೊಳ್ಳುವುದೇ ಒಳ್ಳೆಯದು; ಚಾಣಕ್ಯ ಹೇಳುವ ನೀತಿ ಇಲ್ಲಿದೆ

ಎಂತಹ ಸನ್ನಿವೇಶಗಳಲ್ಲಿ ನಾವು ಜಾಗರೂಕರಾಗಿ ಇರಬೇಕು. ಯಾವುದರಿಂದ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಿರಾ? ಆಚಾರ್ಯ ಚಾಣಕ್ಯ ಅಂಥ ಕೆಲವು ಸಂದರ್ಭಗಳನ್ನು ಗುರುತಿಸಿ ಸೂಚನೆ ನೀಡಿದ್ಧಾರೆ.

Chanakya Niti: ಇಂತಹ ಸಂದರ್ಭಗಳನ್ನು ಎದುರಿಸುವುದಕ್ಕಿಂತ ತಪ್ಪಿಸಿಕೊಳ್ಳುವುದೇ ಒಳ್ಳೆಯದು; ಚಾಣಕ್ಯ ಹೇಳುವ ನೀತಿ ಇಲ್ಲಿದೆ
ಚಾಣಕ್ಯ
Follow us
TV9 Web
| Updated By: ganapathi bhat

Updated on:Aug 14, 2021 | 1:04 PM

ಸಾಮಾನ್ಯವಾಗಿ ನಾವು ಜೀವನದಲ್ಲಿ ಎಂತಹ ಸನ್ನಿವೇಶವೇ ಬರಲಿ ಅದನ್ನು ಎದುರಿಸಿಯೇ ಎದುರಿಸುತ್ತೇವೆ ಎಂದು ಹೇಳುತ್ತೇವೆ. ಇದೇ ಮಾತನ್ನು ಆದರ್ಶವಾಗಿ ಸ್ವೀಕರಿಸುತ್ತೇವೆ. ಆದರೆ, ಕೆಲವೊಂದು ಬಾರಿ ಇದಕ್ಕೆ ವಿರುದ್ಧವಾಗಿ ನಾವು ನಡೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಕೆಲವು ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಕೂಡ ಮುಜುಗರವಿಲ್ಲದೆ ಮಾಡಬೇಕಾಗುತ್ತದೆ. ಕೆಲವೊಂದು ಸನ್ನಿವೇಶವನ್ನು ಎದುರಿಸುತ್ತೇನೆ ಎಂದು ಮುಂದೆ ನಿಂತರೆ ನಮ್ಮ ಜೀವಕ್ಕೆ ಕುತ್ತು ಬರುವ ಅಪಾಯ ಇರುತ್ತದೆ. ಘನತೆ, ಗೌರವಕ್ಕೂ ಸಮಸ್ಯೆ ಉಂಟಾಗುವ ಸಂಭವ ಇರುತ್ತದೆ.

ಹಾಗಾದರೆ, ಎಂತಹ ಸನ್ನಿವೇಶಗಳಲ್ಲಿ ನಾವು ಜಾಗರೂಕರಾಗಿ ಇರಬೇಕು. ಯಾವುದರಿಂದ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಿರಾ? ಆಚಾರ್ಯ ಚಾಣಕ್ಯ ಅಂಥ ಕೆಲವು ಸಂದರ್ಭಗಳನ್ನು ಗುರುತಿಸಿ ಸೂಚನೆ ನೀಡಿದ್ಧಾರೆ. ಚಾಣಕ್ಯ ನೀತಿಯಲ್ಲಿ ಯಾವ ಸನ್ನಿವೇಶವನ್ನು ನಾವು ತಪ್ಪಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ. ಅವು ಯಾವುವು ಎಂದು ಇಲ್ಲಿ ತಿಳಿಯಿರಿ.

  1. ಯಾವುದೇ ಕಡೆಯಲ್ಲಿ ಗುಂಪು ಘರ್ಷಣೆ, ಹಿಂಸಾಚಾರ, ಘಾತಕ ಕೃತ್ಯಗಳು ನಡೆಯುತ್ತಿದ್ದರೆ ಅಂಥಾ ಸ್ಥಳದಲ್ಲಿ ನಿಲ್ಲುವುದು ಒಳ್ಳೆಯದಲ್ಲ. ಅಂತಹ ಜಾಗದಲ್ಲಿ ಉಳಿಯುವುದರಿಂದ ಸಮಸ್ಯೆಗಳು ಉಂಟಾಗಬಹುದು. ಅಲ್ಲಿ ಗುಂಪು ಘರ್ಷಣೆ ನಡೆಯುತ್ತಿದ್ದರೆ ಆ ಗುಂಪಿನ ಜನರಿಗೆ ಯಾವ ವ್ಯತ್ಯಾಸವೂ ತಿಳಿಯದೆ, ಹಿಂಸೆ, ಹಲ್ಲೆಯೊಂದೇ ಉಳಿದು ನಮಗೂ ಹಾನಿ ಉಂಟಾಗಬಹುದು. ಅಪಾಯ ಎದುರಾಗಬಹುದು. ಹಾಗಾಗಿ, ಹಿಂಸಾಚಾರ ಆಗುವ ಸ್ಥಳದಲ್ಲಿ ಉಳಿಯದೇ ಇರುವುದು ಉತ್ತಮ.
  2. ನಿಮ್ಮ ಶತ್ರುವೇ ನಿಮ್ಮ ಮೇಲೆ ದಾಳಿ ನಡೆಸಿದರೂ ಒಂದು ಕ್ಷಣಕ್ಕೆ ನೀವು ತಪ್ಪಿಸಿಕೊಳ್ಳಲೇಬೇಕು. ಹಾಗೆ ತಪ್ಪಿಸಿಕೊಳ್ಳುವುದು ಒಳ್ಳೆಯದು. ವಿರೋಧಿಯೇ ಆಗಲಿ ಆತ ಯಾಕೆ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾನೆ, ಯಾಕೆ ದಾಳಿ ಮಾಡಿದ್ದಾನೆ ಎಂದು ತಿಳಿಯಲು ನಿಮಗೆ ಸ್ವಲ್ಪ ಸಮಯವಾದರೂ ಬೇಕು. ಅದು ಬಿಟ್ಟು, ಧೈರ್ಯ ತೋರಲು ಹೋಗಿ ಜೀವ ಮತ್ತು ಜೀವನವನ್ನು ಅಪಾಯಕ್ಕೆ ಸಿಕ್ಕಿಹಾಕಿಸಿಕೊಳ್ಳುವುದು ಒಳ್ಳೆಯದಲ್ಲ.
  3. ಕ್ಷಾಮ ಅಥವಾ ಬರಗಾಲ ಇದ್ದಂತಹ ಕಡೆಯಲ್ಲಿ ಉಳಿಯುವುದು ಸರಿಯಲ್ಲ. ಅಂತಹ ಪ್ರದೇಶದಲ್ಲಿ ತುತ್ತು ತುತ್ತಿಗೂ ಹಾಹಾಕಾರ ಇರುತ್ತದೆ. ಹಾಗಿರುವಾಗ ಆ ಸ್ಥಳವನ್ನು ಆದಷ್ಟು ಬೇಗನೆ ಬಿಟ್ಟು ತೆರಳುವುದು ಒಳ್ಳೆಯದು. ಅಂತಹ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಬಾಳಿ, ಬದುಕುವುದು ಕಷ್ಟವಾಗಬಹುದು. ಹಾಗಾಗಿ, ಕೂಡಲೇ ಬರಗಾಲ, ಕ್ಷಾಮ ಉಂಟಾಗಿರುವ ಸ್ಥಳವನ್ನು ಬಿಟ್ಟುಹೋಗಬೇಕು.
  4. ನಿಮ್ಮ ಬಳಿಗೆ ಯಾರೋ ಒಬ್ಬ ಅಪರಿಚಿತ ಅನುಮಾನಾಸ್ಪದ ವ್ಯಕ್ತಿ, ಗುಣನಡತೆ ಸರಿ ಇಲ್ಲದ ವ್ಯಕ್ತಿ, ಅಪರಾಧಿ ಈ ರೀತಿಯ ಜನರು ಬಂದು ನಿಂತರೆ ನೀವು ಸದ್ದಿಲ್ಲದೆ ಅಲ್ಲಿಂದ ಆಚೆ ಹೋಗಬೇಕು. ಅಂತಹ ಸ್ಥಳದಲ್ಲಿ ಮತ್ತೂ ಉಳಿದುಕೊಳ್ಳುವುದು, ಅವರೊಂದಿಗೆ ಕಾಲ ಕಳೆಯುವುದು ಅಪಾಯ. ಅದರಿಂದ ನಮ್ಮ ಘನತೆ, ಗೌರವಕ್ಕೂ ಕುಂದು ಉಂಟಾಗಬಹುದು. ಹಾಗಾಗಿ ಇಂತಹ ಸ್ಥಳಗಳಲ್ಲಿ ಹೆಚ್ಚು ಹೊತ್ತು ನಿಲ್ಲದಿರುವುದು ಒಳ್ಳೆಯದು.

ಇದನ್ನೂ ಓದಿ: Chanakya Niti: ಈ ಮೂರು ಗುಣಗಳು ಇರುವ ಹೆಂಡತಿ ಇದ್ದರೆ ಮನೆಗೆ ಒಳ್ಳೆಯದು

Lucky colour: ಜನ್ಮರಾಶಿಗೆ ಅನುಗುಣವಾಗಿ ಯಾರಿಗೆ ಯಾವುದು ಅದೃಷ್ಟದ ಬಣ್ಣ?

Published On - 7:56 pm, Sun, 30 May 21

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?