Chanakya Niti: ಈ ಮೂರು ಗುಣಗಳು ಇರುವ ಹೆಂಡತಿ ಇದ್ದರೆ ಮನೆಗೆ ಒಳ್ಳೆಯದು
ಇಲ್ಲಿ ಹೆಂಡತಿಯೊಬ್ಬಳಿಗೆ ಇರಬೇಕಾದ ಉತ್ತಮ ಗುಣನಡತೆಗಳ ಬಗ್ಗೆ ಚಾಣಕ್ಯ ತಿಳಿಸಿದ್ದಾನೆ. ಯಾರಲ್ಲಿ ಈ ಕೆಳಗೆ ಸೂಚಿಸಿರುವ ಗುಣಗಳು ಇರುತ್ತವೆಯೋ ಅಂಥವರ ಪತಿ, ಮನೆ ಅಥವಾ ಕುಟುಂಬ ಬಹಳ ಚೆನ್ನಾಗಿರುತ್ತದೆ.
ಆಚಾರ್ಯ ಚಾಣಕ್ಯರ ಮಾತುಗಳು ಬದುಕಿನ ಔನ್ನತ್ಯಕ್ಕೆ ದಾರಿ ಆಗಬಲ್ಲದು. ಅರ್ಥಶಾಸ್ತ್ರ, ರಾಜಕಾರಣ, ತರ್ಕಶಾಸ್ತ್ರ, ತತ್ವಜ್ಞಾನ ವಿಚಾರಗಳಲ್ಲಿ ಮಹಾಜ್ಞಾನಿಯಾಗಿದ್ದ ಚಾಣಕ್ಯ ಮಹಿಳೆಯರು, ಪುರುಷರು ಹಾಗೂ ಮಕ್ಕಳ ಬಗ್ಗೆ ಹೇಳಿದ ನೀತಿಬೋಧೆಗಳು ಎಲ್ಲರೂ ಪಾಲಿಸುವಂಥದ್ದು. ಚಾಣಕ್ಯ ನೀತಿಯಲ್ಲಿ ಸರ್ವರೀತಿಯ ನೀತಿಪಾಠಗಳನ್ನು ಚಾಣಕ್ಯ ತಿಳಿಸಿದ್ದಾರೆ. ಜೀವನ ಹೇಗೆ ನಡೆಸಬೇಕು ಎಂದು ದಾರಿದೀಪ ನೀಡಿದ್ದಾರೆ. ಒಬ್ಬನಿಗೆ ಇರಬೇಕಾದ ಉತ್ತಮ ಮತ್ತು ಇರಬಾರದ ಕೆಟ್ಟ ಗುಣಗಳ ಬಗ್ಗೆಯೂ ಅವರು ತಿಳಿಹೇಳಿದ್ದಾರೆ.
ಇಲ್ಲಿ ಹೆಂಡತಿಯೊಬ್ಬಳಿಗೆ ಇರಬೇಕಾದ ಉತ್ತಮ ಗುಣನಡತೆಗಳ ಬಗ್ಗೆ ಚಾಣಕ್ಯ ತಿಳಿಸಿದ್ದಾನೆ. ಯಾರಲ್ಲಿ ಈ ಕೆಳಗೆ ಸೂಚಿಸಿರುವ ಗುಣಗಳು ಇರುತ್ತವೆಯೋ ಅಂಥವರ ಪತಿ, ಮನೆ ಅಥವಾ ಕುಟುಂಬ ಬಹಳ ಚೆನ್ನಾಗಿರುತ್ತದೆ. ಈ ಗುಣಗಳುಳ್ಳ ಪತ್ನಿ ಇದ್ದರೆ ಅಂಥಾ ಜೋಡಿ ಚೆನ್ನಾಗಿರುತ್ತದೆ. ಆಚಾರ್ಯ ಚಾಣಕ್ಯ ಅಂಥಾ ಮೂರು ಗುಣಗಳ ಬಗ್ಗೆ ತಿಳಿಸಿದ್ದಾನೆ. ಈ ಗುಣಗಳು ಇರುವ ಪತ್ನಿಯನ್ನು ಪಡೆದಿರುವ ಪತಿ ಪುಣ್ಯವಂತ ಎಂದು ಹೇಳುತ್ತಾರೆ.
ವಿನಯ ಮತ್ತು ದಯೆ: ಈ ಎರಡು ಗುಣಗಳನ್ನು ಹೊಂದಿರುವ ಸ್ತ್ರೀಗೆ ಸಮಾಜದಲ್ಲಿ ಉತ್ತಮ ಗೌರವ ಸಿಗುವುದು ಮಾತ್ರವಲ್ಲದೆ, ಆಕೆ ಕುಟುಂಬವನ್ನು ಕೂಡ ಸರಿಯಾದ ಮಾರ್ಗದಲ್ಲಿ ನಡೆಸುತ್ತಾಳೆ. ಎಲ್ಲಾ ವಿಧದ ಕೆಲಸಕಾರ್ಯಗಳಲ್ಲಿ ಸದ್ಗುಣಗಳನ್ನು ಹೊಂದಿರುತ್ತಾಳೆ. ಮನೆಯ ಮಕ್ಕಳಿಗೂ ಉತ್ತಮ ಬುದ್ಧಿ ತಿಳಿಹೇಳಿ ಕುಟುಂಬದ ಅಭಿವೃದ್ಧಿಗೆ ಶ್ರಮಿಸುತ್ತಾಳೆ.
ಧಾರ್ಮಿಕ ಗುಣನಡತೆ: ಧರ್ಮ ಅಥವಾ ಧಾರ್ಮಿಕತೆಯ ಹಾದಿಯಲ್ಲಿ ನಡೆಯುವ ಹೆಣ್ಣುಮಗಳು, ಸರಿ ತಪ್ಪುಗಳ ವ್ಯತ್ಯಾಸವನ್ನು ಕೂಡ ತಿಳಿದಿರುತ್ತಾಳೆ. ಸತ್ಕರ್ಮಗಳ ಕಡೆಗೇ ಅಂಥಾ ಹೆಣ್ಣುಮಕ್ಕಳ ಒಲವು ಹೆಚ್ಚಾಗಿರುತ್ತದೆ. ತನ್ನ ಕೆಲಸ ಕಾರ್ಯಗಳ ಬಗ್ಗೆ ಎಂದೂ ಉದಾಸೀನತೆ ತೋರುವುದಿಲ್ಲ ಮತ್ತು ಎಲ್ಲರ ಒಳಿತನ್ನು ಆಶಿಸುತ್ತಾಳೆ. ಅಂಥಾ ಮಹಿಳೆಯು ತನ್ನ ಕುಟುಂಬಕ್ಕೆ ಮಾತ್ರವಲ್ಲ ಇತರರಿಗೂ ಹಲವು ಪೀಳಿಗೆಗಳಿಗೂ ಒಳಿತನ್ನು ಮಾಡುತ್ತಾಳೆ.
ಸಂಪತ್ತು ಕೂಡಿಡುವಾಕೆ: ಸಂಪತ್ತನ್ನು ನಿಜವಾದ ಸ್ನೇಹಿತ ಎಂದು ಚಾಣಕ್ಯ ಹೇಳಿದ್ದಾನೆ. ನಮ್ಮ ಜೀವನದ ಕಠಿಣ ಸಮಯದಲ್ಲಿ ಒದಗುವ ನಿಜವಾದ ಸ್ನೇಹಿತ ಸಂಪತ್ತು. ಹಾಗಾಗಿ, ತಕ್ಕಮಟ್ಟಿಗೆ ಸಂಪತ್ತು ಕೂಡಿಡುವುದು ಕೂಡ ಅನಿವಾರ್ಯ. ಇದೇ ಕೆಲವೊಮ್ಮೆ ಇಡಿಯ ಕುಟುಂಬವನ್ನು ರಕ್ಷಿಸಬಲ್ಲದು. ಹಾಗಾಗಿ, ಮನೆಗಾಗಿ ಸಂಪತ್ತನ್ನು ಕಾಪಾಡಿ ಇಟ್ಟುಕೊಂಡ ಮಹಿಳೆಯಿಂದ ಕಷ್ಟಕಾಲದಲ್ಲಿ ಕುಟುಂಬಕ್ಕೆ ಒಳಿತಾಗುತ್ತದೆ.
ಇದನ್ನೂ ಓದಿ: Chanakya Niti: ಚಾಣಕ್ಯ ನೀತಿ ಪಾಲನೆಯಿಂದ ಜೀವನದಲ್ಲಿ ಮಹತ್ತರ ಬದಲಾವಣೆ ಸಾಧ್ಯ; ಉತ್ತಮ ಜೀವನಕ್ಕೆ ಇಲ್ಲಿದೆ ಕೆಲವು ಅಂಶ
ರಸ್ತೆಯಲ್ಲಿ ಅಚಾನಕ್ ಆಗಿ ಹಣ ಸಿಕ್ಕರೆ, ನೀವು ಜೀವನದಲ್ಲಿ ಈ ಪರೀಕ್ಷೆಯನ್ನು ಎದುರಿಸಲಿದ್ದೀರಿ ಎಂದರ್ಥ!
Published On - 5:44 pm, Fri, 14 May 21