Chanakya Niti: ಚಾಣಕ್ಯ ನೀತಿ ಪಾಲನೆಯಿಂದ ಜೀವನದಲ್ಲಿ ಮಹತ್ತರ ಬದಲಾವಣೆ ಸಾಧ್ಯ; ಉತ್ತಮ ಜೀವನಕ್ಕೆ ಇಲ್ಲಿದೆ ಕೆಲವು ಅಂಶ

ನಮ್ಮ ಜೀವನದಲ್ಲಿ ಸಂತೋಷವನ್ನು ಕಾಣಲು ಮತ್ತು ತೃಪ್ತಿಕರವಾದ ಜೀವನವನ್ನು ನಡೆಸಲು ಮೊದಲು ಜನರು ಸೂಚಿಸುವುದು ಚಾಣಕ್ಯ ನೀತಿ.

Chanakya Niti: ಚಾಣಕ್ಯ ನೀತಿ ಪಾಲನೆಯಿಂದ ಜೀವನದಲ್ಲಿ ಮಹತ್ತರ ಬದಲಾವಣೆ ಸಾಧ್ಯ; ಉತ್ತಮ ಜೀವನಕ್ಕೆ ಇಲ್ಲಿದೆ ಕೆಲವು ಅಂಶ
ಚಾಣಕ್ಯ
Follow us
| Updated By: Digi Tech Desk

Updated on:Apr 15, 2021 | 9:58 AM

ಚಾಣಕ್ಯ ಎಂಬ ಹೆಸರನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ತಮ್ಮ ಪಾಂಡಿತ್ಯ, ಬುದ್ಧಿವಂತಿಗೆ ಮತ್ತು ಸಾಮರ್ಥ್ಯದಿಂದ ಹೆಸರಾದ ಮಹಾನ್​ ವ್ಯಕ್ತಿ ಇವರು. ಜೊತೆಗೆ ನಮ್ಮ ದೇಶದ ಮಹಾನ್​ ವಿದ್ವಾಂಸರೂ ಹೌದು. ನಮ್ಮ ಜೀವನದಲ್ಲಿ ಸಂತೋಷವನ್ನು ಕಾಣಲು ಮತ್ತು ತೃಪ್ತಿಕರವಾದ ಜೀವನವನ್ನು ನಡೆಸಲು ಮೊದಲು ಜನರು ಸೂಚಿಸುವುದು ಚಾಣಕ್ಯ ನೀತಿಯನ್ನು. ಚಾಣಕ್ಯ ‘ಚಾಣಕ್ಯ ನೀತಿಶಾಸ್ತ್ರ’ ಪುಸ್ತಕದಲ್ಲಿ ಜೀವನದಲ್ಲಿ ಅಳವಡಿಕೊಳ್ಳುವ ಅರ್ಥಪೂರ್ಣ ವಿಷಯಗಳಿವೆ.

ಹಿಂದೆ ನಡೆದ ಸಂಗತಿಗಳ ಬಗ್ಗೆ ನಾವು ಎಂದೂ ವಿಷಾಧಿಸಬಾರದು. ಭವಿಷ್ಯದ ಬಗ್ಗೆ ಚಿಂತಿಸಬಾರದು. ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಬೇಕು ಎಂದೆನಿಸಿದರೆ ನಿಶ್ಚಿಂತೆಯಿಂದ ಇಂದಿನ ಜೀವನವನ್ನು ಜೀವಿಸಿ. ನಿಜವಾಗಿಯೂ ಬುದ್ಧಿವಂತರೇ ಆದರೆ ಅವರು ವರ್ತಮಾನದಲ್ಲಿ ಜೀವಿಸುತ್ತಾರೆ ಎಂದು ಚಾಣಕ್ಯ ನೀತಿ ಸಾರಿ ಹೇಳುತ್ತದೆ.

ನಿಮಗಿಂತ ಕಡಿಮೆ ಪ್ರತಿಷ್ಠೆ ಹೊಂದಿರುವ ಜನರೊಂದಿಗೆ ಸ್ನೇಹ ಬೆಳೆಸಲು ಮುಂದಾಗಬೇಡಿ. ಅದರಿಂದ ನಿಮಗೆ ಯಾವಾಗಲೂ ತೊಂದರೆಯೇ ಆಗುತ್ತದೆ. ಅಂತವರು ಹೆಚ್ಚು ನಿಮ್ಮಿಂದ ಸಹಾಯವನ್ನೇ ಬಯಸುತ್ತಿರುತ್ತಾರೆ. ಹಾಗಂತ ನಿಮಗಿಂತ ಹೆಚ್ಚಿನ ಪ್ರತಿಷ್ಠೆ ಹೊಂದಿರುವವರ ಜೊತೆಯೂ ಸ್ನೇಹ ಮಾಡಬೇಡಿ. ಅದರಿಂದ ನಿಮ್ಮ ಮೇಲೆ ನಿಮಗೆ ಅಸೂಯೆಯ ಭಾವ ಉಂಟಾಗುತ್ತದೆ. ಏಕೆಂದರೆ ನಮಗಿಂತ ಉತ್ತಮ ಮಟ್ಟದಲ್ಲಿರುವವರೊಂದಿಗೆ ನಾವು ಯಾವಾಗಲೂ ಹೋಲಿಕೆ ಮಾಡಿಕೊಳ್ಳುತ್ತೇವೆ. ಹಾಗಾಗಿ ನಿಮ್ಮ ಸ್ನೇಹ ನಿಮ್ಮ ಸಮಾನರಾದವರ ಮೇಲಿರಲಿ ಎಂಬುದು ಚಾಣಕ್ಯ ನೀತಿಯಲ್ಲೊಂದು.

ನಿಮಗೆ ಅನರ್ಹ ಅನಿಸಿರುವ ವ್ಯಕ್ತಿಯೊಂದಿಗೆ ಎಂದೂ ಸ್ನೇಹ ಬೆಳೆಸಲು ಮುಂದಾಗಬೇಡಿ. ಏಕೆಂದರೆ, ಅಂತಹ ವ್ಯಕ್ತಿ ನಿಮ್ಮ ಮಾತನ್ನು ಕೇಳಿಸಿಕೊಳ್ಳಲು ಮುಂದಾಗುವುದಿಲ್ಲ. ಎಂದಿಗೂ ನಿಮಗೆ ಮೋಸ ಮಾಡಲು ಯೋಚಿಸುತ್ತಿರುತ್ತಾರೆ. ನೀವು ಏನಾದರೂ ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಮಾತನ್ನು ಅವರು ನಿರ್ಲಕ್ಷ್ಯಿಸುತ್ತಾರೆ. ಹಾಗಾಗಿ ಅನರ್ಹರೊಡನೆ ಸ್ನೇಹ ಬೆಳೆಸ ಬೇಡಿ ಎಂಬುದು ಚಾಣಕ್ಯ ನೀತಿಗಳಲ್ಲೊಂದಾಗಿದೆ.

ನಿಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕಾಗಿದ್ದರೆ ಸೋಮಾರಿತನದಿಂದ ದೂರವಿರಬೇಕು. ಸಾಮಾನ್ಯವಾಗಿ ಜಗತ್ತಿನಲ್ಲಿ ಕೇವಲ ಶೇ.20ರಷ್ಟು ಜನರು ಮಾತ್ರ ಯಶಸ್ಸು ಕಾಣುತ್ತಾರೆ. ಬಡ ಜೀವನದಿಂದ ಬಂದಂಥಹ ಅದೆಷ್ಟೋ ಜನರು ಶ್ರೀಮಂತರಾಗಿದ್ದಾರೆ. ಆದರೆ ಇನ್ನು ಕೆಲವರೂ ಶ್ರೀಮಂತರಾಗಿದ್ದರೂ ಕೂಡಾ ಯಶಸ್ಸು ಕಾಣುವುದಿಲ್ಲ. ಇದಕ್ಕೆ ಮೂಲ ಕಾರಣವೇ ಸೋಮಾರಿತನ. ಸೋಮಾರಿತನವನ್ನು ಮೊದಲು ಬಿಟ್ಟರೆ ಜೀವನದಲ್ಲಿ ಸಂತೋಷವನ್ನು ಕಾಣಲು ಸಾಧ್ಯ ಎಂಬುದನ್ನು ನೆನಪಿಡಿ.

ಅವಮಾನಕ್ಕೆ ಒಳಗಾಗಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಚಾಣಕ್ಯ ಹೇಳಿದ್ದಾರೆ. ಸಾವು ಒಂದು ಸಮಯದವರೆಗೆ ದುಃಖವನ್ನು ನೀಡುತ್ತದೆ. ಆದರೆ ಅವಮಾನ ಜೀವನ ಪೂರ್ತಿ ನೋವುಂಟು ಮಾಡುತ್ತದೆ. ನೀವು ಏನು ತಪ್ಪು ಮಅಡಿದ್ದೀರಿ ಎಂಬುದು ನಿಮಗೆ ಗೊತ್ತಾದರೆ ಅದು ಪಶ್ಚಾತ್ತಾಪ ಉಂಟಾಗುತ್ತದೆ. ಸಮಾಜದಲ್ಲಿ ಅಪಖ್ಯಾತಿಗೆ ಒಳಗಾಗುವ ಯಾವುದೇ ಕೆಲವು ನಿಮ್ಮಿಂದ ಆಗದಿರಲಿ ಎಂಬುದು ಚಾಣಕ್ಯ ನೀತಿಯಲ್ಲಿ ಒಂದಾಗಿದೆ.

ಹಣ ಇದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡುವುದಲ್ಲ. ಬುದ್ಧಿವಂತಿಕೆಯಿಂದ ಹಣವನ್ನು ವ್ಯಯಿಸಬೇಕು. ಸಂತತೇ ಜೀವನ ಎಂಬ ಮಾತನ್ನು ಕೇಳಿಯೇ ಇರುತ್ತೇವೆ. ಹಾಗೆಯೇ ಅದು ಸಮಜದಲ್ಲಿ ಸತ್ಯವೂ ಹೌದು. ದಿನವಿಡೀ ದುಡಿದು ಹಣವನ್ನು ನೀರಿನಂತೆ ಖರ್ಚು ಮಾಡುವುದನ್ನು ಬಿಟ್ಟುಬಿಡಿ. ಹಣವನ್ನು ವ್ಯಯಿಸುವಾಗ ಬುದ್ದಿವಂತಿಕೆ ಇರಲಿ.

ಜನರು ಸಾಮಾನ್ಯವಾಗಿ ತಮ್ಮಲ್ಲಿನ ದೌರ್ಬಲ್ಯವನ್ನು ಎಲ್ಲರಿಗೂ ಹೇಳುತ್ತಾರೆ. ಹುಟ್ಟುವಾಗ ನೀವು ಒಬ್ಬಂಟಿಯಾಗಿರುತ್ತೀರಿ. ಸಮಯ ಕಳೆದಂತೆ ಹಲವು ಸಂಬಂಧಗಳು ನಮ್ಮ ಸುತ್ತ ಸುತ್ತುತ್ತದೆ. ಇವರಲ್ಲಿ ತಮ್ಮ ದೌರ್ಬಲ್ಯವನ್ನು ಹಂಚಿಕೊಳ್ಳುತ್ತಾ ಹೋಗುತ್ತಿದ್ದಂತೆ, ವೈಯ್ಯಕ್ತಿಕ ಜೀವನದ ಎಲ್ಲಾ ದೌರ್ಬಲ್ಯಗಳು ಬಿಚ್ಚಿಡುತ್ತದೆ. ಎಷ್ಟೇ ಆಪ್ತರಾಗಿದ್ದರೂ ಕೂಡಾ ದೌರ್ಬಲ್ಯದ ಕುರಿತಾಗಿ ಯಾರೊಂದಿಗೂ ಹಂಚಿಕೊಳ್ಳಬೇಡಿ.

ಮೂರ್ಖರೊಂದಿಗೆ ಎಂದೂ ಮಾತನಾಡಲು ಹೋಗಬೇಡಿ ಎಂದು ಚಾಣಕ್ಯ ಹೇಳುತ್ತಾರೆ. ಮೂರ್ಝರಿಗೆ ಯಾವುದೇ ಜ್ಞಾನ ಇರುವುದಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಂತಹ ಜನರೊಂದಿಗೆ ವಾದಕ್ಕೆ ಇಳಿದರೆ ಅದೆಷ್ಟೊ ವರ್ಷಗಳಿಂದ ಉಳಿಸಿಕೊಂಡು ಬಂದ ನಿಮ್ಮ ಗೌರವ ನೀರು ಪಾಲಾಗುತ್ತದೆ. ನಿಮ್ಮ ಗೌರವಕ್ಕೆ ನೀವೇ ಕುತ್ತು ತಂದೊಡ್ಡಿದಂತೆ. ಮೂರ್ಖರೊಂದಿಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದು ಉತ್ತಮ.

ಇದನ್ನೂ ಓದಿ: ಈ 4 ರಾಶಿಯ ಜನರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ; ನಿಮ್ಮ ರಾಶಿ ಏನು ಹೇಳುತ್ತದೆ ಇಲ್ಲಿ ಗಮನಿಸಿ

Published On - 6:45 am, Thu, 15 April 21

ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು