ಈ 4 ರಾಶಿಯ ಜನರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ; ನಿಮ್ಮ ರಾಶಿ ಏನು ಹೇಳುತ್ತದೆ ಇಲ್ಲಿ ಗಮನಿಸಿ

ಉತ್ತಮ ಗುಣವುಳ್ಳ 4 ನಾಲ್ಕು ರಾಶಿಗಳ ಕುರಿತಾಗಿ ಹೇಳುತ್ತಿದ್ದೇವೆ. ಕುತೂಹಲ ಹೆಚ್ಚಾಗಿರಬೇಕಲ್ಲವೇ? ನಿಮ್ಮ ರಾಶಿಯೂ ಇರಬಹುದು. ಈ ಮಾಹಿತಿ ಗಮನಿಸಿ.

ಈ 4 ರಾಶಿಯ ಜನರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ; ನಿಮ್ಮ ರಾಶಿ ಏನು ಹೇಳುತ್ತದೆ ಇಲ್ಲಿ ಗಮನಿಸಿ
ಸಾಂದರ್ಭಿಕ ಚಿತ್ರ
Follow us
shruti hegde
|

Updated on: Apr 14, 2021 | 4:00 PM

ಕೆಲ ಜನರನ್ನು ನೋಡಿದಾಕ್ಷಣ ನಮ್ಮ ಗಮನ ಅವರತ್ತ ಸೆಳೆದುಬಿಡುತ್ತದೆ. ಹೆಚ್ಚು ಆಕರ್ಷಿತರಾಗಿ ಕಾಣಿಸುತ್ತಾರೆ. ಮಾತನಾಡುವ ಶೈಲಿ ಬಹಳ ಆಪ್ತ ಎನಿಸುತ್ತದೆ. ಜನರ ಜೊತೆ ಸದಾಕಾಲ ನಗುನಗುತಾ ಖುಷಿಯಿಂದ ಸಮಯ ಕಳೆಯುತ್ತಾರೆ. ತನ್ನ ಸಾಮರ್ಥ್ಯದೊಂದಿಗೆ ಎಲ್ಲರನ್ನೂ ಸೆಳೆಯುವ ಶಕ್ತಿ ಅವರಿಗಿರುತ್ತದೆ. ಯಾವಾಗಲೂ ಉತ್ಸಾಹದಿಮದ ಕೂಡಿರುತ್ತಾರೆ. ಅವರ ಮಾತನ್ನು ಕೇಳಲು ಆಹ್ಲಾದವೆನಿಸುತ್ತದೆ. ಪಟಪಟ ಮಾತನಾಡುತ್ತಿದ್ದರೂ ಕೇಳುಗರಿಗೆ ಇಂಪಾಗಿರುತ್ತದೆ. ಮುಕ್ತ ಮನಸ್ಸು ಹೊಂದಿದ್ದು ಕೋಪ ಮತ್ತು ಅಹಂಕಾರ ಬಿಟ್ಟು ವಿಭಿನ್ನವಾದ ದೃಷ್ಟಿಕೋನದಲ್ಲಿ ಎಲ್ಲರೊಡನೆ ಗುರುತಿಸಿಕೊಳ್ಳುತ್ತಾರೆ.

ಇಂತಹ ಗುಣವುಳ್ಳ 4 ನಾಲ್ಕು ರಾಶಿಗಳ ಕುರಿತಾಗಿ ಹೇಳುತ್ತಿದ್ದೇವೆ. ಕುತೂಹಲ ಹೆಚ್ಚಾಗಿರಬೇಕಲ್ಲವೇ? ನಿಮ್ಮ ರಾಶಿಯೂ ಇರಬಹುದು. ಈ ಮಾಹಿತಿ ಗಮನಿಸಿ.

ತುಲಾ ರಾಶಿ ತುಲಾ ರಾಶಿಯನ್ನು ಹೊಂದಿರುವ ಜನರು ತಮ್ಮ ಸುತ್ತಮುತ್ತಲಿನ ಜನರನ್ನು ಹೆಚ್ಚು ಪ್ರೀತಿಸುತ್ತಾರೆ. ಜತೆಗೆ ಹೊಸ ಸ್ನೇಹಿತರನ್ನು ಹುಡುಕುತ್ತಾರೆ ಮತ್ತು ಹೆಚ್ಚು ಸ್ನೇಹ ಜೀವಿಯಾಗಿರಲು ಬಯಸುತ್ತಾರೆ. ಜನರ ಹೃದಯಗೆದ್ದು ಸದಾಕಾಲ ಸ್ನೇಹಿತರಾಗಿರುವಂತೆ ಬಯಸುವ ಗುಣ ತುಲಾ ರಾಶಿಯವರದ್ದು. ಸಾಮಾಜಿಕವಾಗಿ ಬೆರೆಯುವ ಕಲೆಯ ಜೊತೆಗೆ ಹೆಚ್ಚು ದಯೆಯುಳ್ಳವರಾಗಿರುತ್ತಾರೆ. ಕಷ್ಟ ಕಾಲದಲ್ಲಿ ಕುಗ್ಗದೇ, ಯಾವಾಗಲೂ ತಮಾಷೆಯಿಂದಿರಲು ಇಚ್ಛಿಸುತ್ತಾರೆ.

ಧನು ರಾಶಿ ಧನು ರಾಶಿಯ ಜನರು ಹೆಚ್ಚು ಆಶಾವಾದಿ ಮತ್ತು ಶಾಂತರು. ಸುಲಭವಾಗಿ ವಿಷಯದಲ್ಲಿ ತಲ್ಲೀನರಾಗುವುದಿಲ್ಲ ಮತ್ತು ನಂಬುವುದಿಲ್ಲ. ನಾಟಕೀಯತೆಯಲ್ಲಿ ಬದುಕುವುದನ್ನು ಬಿಟ್ಟು ನೇರವಾಗಿರಲು ಇಚ್ಚಿಸುತ್ತಾರೆ. ತಾವಾಯ್ತು ತಮ್ಮ ಕೆಲಸವಾಯ್ತು ಎಂಬುದು ಜನರಿಗೆ ಹೆಚ್ಚು ಆಕರ್ಷಿತರಾಗಿ ಕಾಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇವರ ಈ ಗುಣವೇ ಸಮಾಜದಲ್ಲಿ ಎಲ್ಲರ ಮನಸೆಳೆಯುತ್ತದೆ.

ಕುಂಭ ರಾಶಿ ಕುಂಭ ರಾಶಿಯ ಜನರು ಹೆಚ್ಚು ವಾದ ಮಂಡಿಸುವವರಲ್ಲ. ಎದುರಿಗಿರುವವರು ಏನಾದರೂ ಹೇಳುತ್ತಿದ್ದರೆ ಪ್ರತಿವಾದಕ್ಕೆ ಇಳಿಯುವುದಿಲ್ಲ. ಹೆಚ್ಚು ಪ್ರಶ್ನೆ ಕೇಳುವವರಲ್ಲ. ತಮ್ಮಲ್ಲೇ ಪ್ರಾಮಾಣಿಕವಾಗಿರುವುದರಿಂದ ನ್ಯಾಯಯುತವಾಗಿ ಮಾತನಾಡುತ್ತಾರೆ. ಬೇರೆಯವರು ಮಾತನಾಡುವಾಗ ಅವರಿಗೆ ಆಸ್ಪದ ನೀಡುವುದರಿಂದ ಎಲ್ಲರ ಪ್ರೀತಿ ಪಾತ್ರಕ್ಕೆ ಭಾಗಿಯಾಗುತ್ತಾರೆ.

ಮೀನ ರಾಶಿ ಮೀನರಾಶಿಯಲ್ಲಿ ಜನಿಸಿದ ಜನರು ಹೆಚ್ಚು ಕಾಳಜಿ, ಸಹಾನುಭೂತಿಯ ಜತೆಗೆ ಹೆಚ್ಚು ತಿಳುವಳಿಕೆಯನ್ನು ಹೊಂದಿರುತ್ತಾರೆ. ತಮ್ಮ ಸುತ್ತಮುತ್ತಲಿನ ಜನರನ್ನು ಹೆಚ್ಚು ಪ್ರೀತಿಸುತ್ತಾರೆ. ಅವರಲ್ಲಿನ ಉತ್ಸಾಹ ಮತ್ತು ತಾಳ್ಮೆಯಿಂದ ಎಲ್ಲರ ಗಮನ ಸೆಳೆಯಲು ಕಾರಣರಾಗುತ್ತಾರೆ. ಆದ್ದರಿಂದ ಎಲ್ಲರ ಆಕರ್ಷಣೆಗೆ ಪಾತ್ರರಾಗುತ್ತಾರೆ.

ಇದನ್ನೂ ಓದಿ: ದಿನಭವಿಷ್ಯ 13-04-2021: ಖ್ಯಾತ ಜ್ಯೋತಿಷಿ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಪಲ

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ