Chanakya Niti: ಈ ವಿಚಾರಗಳನ್ನು ಗಂಡ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದು; ಚಾಣಕ್ಯ ನೀತಿ ಇಲ್ಲಿದೆ

ಗಂಡ ಹೆಂಡತಿ ಸಂಬಂಧ ಬಹಳ ಪವಿತ್ರವಾದದ್ದು. ಜೀವನದ ದೀರ್ಘಕಾಲವನ್ನು ಅವರಿಬ್ಬರು ಜೊತೆಯಾಗಿ ಕಳೆಯಬೇಕಾಗುತ್ತದೆ. ಈ ಸಂಬಂಧದ ಒಂದಷ್ಟು ಗುಟ್ಟನ್ನು ಚಾಣಕ್ಯ ಹೇಳಿದ್ದಾನೆ.

Chanakya Niti: ಈ ವಿಚಾರಗಳನ್ನು ಗಂಡ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದು; ಚಾಣಕ್ಯ ನೀತಿ ಇಲ್ಲಿದೆ
ಚಾಣಕ್ಯ
Follow us
TV9 Web
| Updated By: shruti hegde

Updated on: Jun 19, 2021 | 8:11 AM

ಬದುಕನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿ ಯೋಚಿಸಬಹುದು. ಹಲವರು ಅವರದೇ ಆದ ಉತ್ತರ ಕಂಡುಕೊಳ್ಳಬಹುದು. ಕೆಲವರಿಗೆ ಏನೂ ಅರ್ಥವಾಗದು. ಒಂದೊಂದು ಸನ್ನಿವೇಶಕ್ಕೂ ಬದುಕಿನ ಅರ್ಥ ವಿಭಿನ್ನ ಅನಿಸಬಹುದು. ಜೀವನದ ಕೆಲವು ಸತ್ಯಗಳನ್ನು ಆಚಾರ್ಯ ಚಾಣಕ್ಯ ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ಆ ಮೂಲಕ, ನಾವು ನಮ್ಮ ಬದುಕಿನ ಒಂದಷ್ಟು ಅನುಭವಗಳ ಬಗ್ಗೆ, ಪರಿಸ್ಥಿತಿಗಳ ಬಗ್ಗೆ ಜಾಗರೂಕರಾಗಿ, ಅರ್ಥಮಾಡಿಕೊಂಡು ಇರಬಹುದು.

ಗಂಡ ಹೆಂಡತಿ ಸಂಬಂಧ ಬಹಳ ಪವಿತ್ರವಾದಸದ್ದು. ಜೀವನದ ದೀರ್ಘಕಾಲವನ್ನು ಅವರಿಬ್ಬರು ಜೊತೆಯಾಗಿ ಕಳೆಯಬೇಕಾಗುತ್ತದೆ. ಈ ಸಂಬಂಧದ ಒಂದಷ್ಟು ಗುಟ್ಟನ್ನು ಚಾಣಕ್ಯ ಹೇಳಿದ್ದಾನೆ. ಅಂತಹ ಒಂದಷ್ಟು ವಿವರ ಇಲ್ಲಿ ನೀಡಲಾಗಿದೆ. ಚಾಣಕ್ಯ ಹೇಳುವಂತೆ ಈ ನಾಲ್ಕು ಅಂಶಗಳನ್ನು ಗಂಡ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದಂತೆ. ಅವು ಯಾವುವು? ಇಲ್ಲಿದೆ ವಿವರ.

ಆದಾಯ: ಚಾಣಕ್ಯ ಹೇಳುವಂತೆ, ಗಂಡ ತನ್ನ ಹೆಂಡತಿಯ ಬಳಿಯಲ್ಲಿ ತನ್ನ ಆದಾಯದ ಬಗ್ಗೆ ತುಂಬಾ ವಿಚಾರ ಮಾತನಾಡಬಾರದಂತೆ. ಅಥವಾ ಎಲ್ಲವನ್ನೂ ಹಂಚಿಕೊಳ್ಳಬಾರದು. ಹೆಂಡತಿಗೆ ತನ್ನ ಗಂಡನ ಆದಾಯದ ಬಗ್ಗೆ ಸಂಪೂರ್ಣ ತಿಳಿದರೆ, ಅದರಿಂದ ಮನೆಯ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅಂದರೆ, ಗಂಡನ ಆದಾಯ ತಿಳಿದ ಹೆಂಡತಿ ಹೆಚ್ಚಿನ ಹಣ ಖರ್ಚು ಮಾಡುವ ಸಾಧ್ಯತೆ ಇದೆ.

ದೌರ್ಬಲ್ಯ: ಹೆಂಡತಿ ಆದವಳಿಗೆ ಗಂಡನ ವೀಕ್​ನೆಸ್ ಅಂದರೆ ದೌರ್ಬಲ್ಯ ಗೊತ್ತಾಗಬಾರದು. ಅಂದರೆ, ಗಂಡ ತನಗೆ ಇರುವ ಎಲ್ಲಾ ದೌರ್ಬಲ್ಯವನ್ನು ಹೆಂಡತಿಯ ಮುಂದೆ ಹೇಳಿಕೊಳ್ಳಬಾರದಂತೆ. ಹೀಗೆ ಗೊತ್ತಾದರೆ, ಹೆಂಡತಿ ಗಂಡನ ಬಳಿ, ಆತನ ದೌರ್ಬಲ್ಯದ ಬಗ್ಗೆಯೇ ಹೆಚ್ಚು ಮಾತನಾಡುವ ಸಾಧ್ಯತೆ ಇದೆ. ಅಥವಾ ಆಗಾಗ್ಗ ಅದನ್ನೇ ಹೇಳಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಗಂಡನಿಗೆ ಅದರಿಂದ ಹೊರಗೆ ಬರಬೇಕು ಎನಿಸಿದರೂ ಹೊರಬರುವುದು ಕಷ್ಟವಾಗಬಹುದು. ಅಥವಾ ಗಂಡ ಅಂತರ್ಮುಖಿ ಆಗಬಹುದು. ಹೀಗಾಗದಂತೆ ನೋಡಿಕೊಳ್ಳಬೇಕು ಎಂಬುದು ಇಲ್ಲಿ ಮುಖ್ಯ ಅರ್ಥ.

ಅವಮಾನಕರ ಘಟನೆ: ಗಂಡನಿಗೆ ಎಂದಾದರೂ ಆದ ಅವಮಾನಕರ ಘಟನೆಯನ್ನು ಆತ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದು. ಇದರಿಂದ ಗಂಡ- ಹೆಂಡತಿ ನಡುವೆ ಎಂದಾದರೂ ಸಣ್ಣಪುಟ್ಟ ಜಗಳ ಉಂಟಾದಾಗ, ಹೆಂಡತಿ ಆ ಘಟನೆಯನ್ನು ನೆನಪಿಸಿಕೊಳ್ಳಬಹುದು. ಅದರಿಂದ ಬಗೆಹರಿಸಿಕೊಳ್ಳಲಾಗದಷ್ಟು ದೊಡ್ಡ ಮನಸ್ಥಾಪವೂ ಆಗಬಹುದು. ಹಾಗಾಗಿ, ನೋವನ್ನು ಹೇಳಿಕೊಳ್ಳುವುದು ಮತ್ತು ತನ್ನ ಜೀವನದ ಅವಮಾನವನ್ನು ಹೇಳಿಕೊಳ್ಳುವಾಗ ಜಾಗರೂಕರಾಗಿ ಇರಬೇಕು.

ಸಹಾಯ ಮಾಡುವುದು: ಯಾವುದೇ ಸಂದರ್ಭದಲ್ಲಿ ಸಹಾಯ ಮಾಡುವ ಪ್ರಸಂಗ ಉಂಟಾದರೆ ಅದನ್ನು ಹೆಂಡತಿಯ ಹೇಳಿಕೊಳ್ಳಬಾರದು. ಸಹಾಯ ಮಾಡಲು ಬಯಸಿದ್ದನ್ನು ಅಥವಾ ಸಹಾಯ ಮಾಡಿದ್ದನ್ನು ಹೆಂಡತಿಗೆ ಹೇಳಿದರೆ ಸಣ್ಣಪುಟ್ಟ ಸಮಸ್ಯೆ ಎದುರಾಗಬಹುದು. ಸಹಾಯ ಮಾಡಲು ಬೇಡ ಎಂಬ ಮಾತು ಬರಬಹುದು. ಅಥವಾ ಸಹಾಯ ಮಾಡಿದ್ದರಿಂದ ಮನೆಗೆ ಏನೂ ಇಲ್ಲ ಎಂಬ ಮಾತುಗಳು ಕೇಳಿಬರಬಹುದು. ಹಾಗೂ ಆಗದಂತೆ ಸರಿದೂಗಿಸಿಕೊಂಡು ಹೋಗಬೇಕು.

ಇದನ್ನೂ ಓದಿ: Chanakya Niti: ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಎಲ್ಲರ ಇಷ್ಟದ ನಾಯಕನಾಗುತ್ತಾನೆ; ಚಾಣಕ್ಯನ ವಿವರಣೆ ಇಲ್ಲಿದೆ

Chanakya Niti: ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕಾದ 7 ಪ್ರಮುಖ ಅಂಶಗಳಿವು; ಚಾಣಕ್ಯ ನೀತಿ ಹೀಗೆ ಹೇಳುತ್ತದೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್