Chanakya Niti: ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕಾದ 7 ಪ್ರಮುಖ ಅಂಶಗಳಿವು; ಚಾಣಕ್ಯ ನೀತಿ ಹೀಗೆ ಹೇಳುತ್ತದೆ

ಸರಿಯಾದ ಮಾರ್ಗದಲ್ಲಿ ಬದುಕು ಸಾಗಿಸಲು ಈ ಅಂಶಗಳು ಸಹಕಾರಿ ಆಗಬಹುದು. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಂಡರೆ ಬದುಕು ಇನ್ನಷ್ಟು ಚೆನ್ನಾಗಿರಬಹುದು.

Chanakya Niti: ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕಾದ 7 ಪ್ರಮುಖ ಅಂಶಗಳಿವು; ಚಾಣಕ್ಯ ನೀತಿ ಹೀಗೆ ಹೇಳುತ್ತದೆ
ಚಾಣಕ್ಯ
TV9kannada Web Team

| Edited By: Skanda

Jun 12, 2021 | 7:58 AM

ಜೀವನದಲ್ಲಿ ನಾವು ಏನೇನು ಕಲಿಯಬೇಕು, ಯಾವುದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕು ಎಂದು ಕೇಳಿದರೆ ಸಾವಿರ ಬಾರಿ ಯೋಚಿಸಬೇಕಾಗುತ್ತದೆ. ಅಷ್ಟಾದರೂ ನಮಗೆ ಒಂದಷ್ಟು ಸಿದ್ಧ ಸೂತ್ರಗಳು ಹೊಳೆಯುತ್ತದೆ ಎಂದು ಹೇಳುವಂತಿಲ್ಲ. ಪ್ರತೀ ಬಾರಿಯೂ ನಾವು ಹೊಸದನ್ನು ಕಲಿಯುತ್ತಾ, ಹೊಸ ಅಂಶವನ್ನು ಅರ್ಥ ಮಾಡಿಕೊಳ್ಳುತ್ತಲೇ ಇರುತ್ತೇವೆ. ಆದರೆ, ಚಾಣಕ್ಯ ಒಂದಷ್ಟು ನೀತಿಬೋಧನೆಗಳನ್ನು ನಮಗೆ ತೆರೆದಿಟ್ಟಿದ್ದಾನೆ. ಆತನ ನೀತಿಪಾಠದಿಂದ ಕೆಲವಷ್ಟು ಅಂಶಗಳನ್ನು ನಾವು ಕಲಿಯಬಹುದು. ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬಹುದು.

ಸರಿಯಾದ ಮಾರ್ಗದಲ್ಲಿ ಬದುಕು ಸಾಗಿಸಲು ಈ ಅಂಶಗಳು ಸಹಕಾರಿ ಆಗಬಹುದು. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಂಡರೆ ಬದುಕು ಇನ್ನಷ್ಟು ಚೆನ್ನಾಗಿರಬಹುದು.

  • ಪ್ರತಿಯೊಬ್ಬ ವ್ಯಕ್ತಿ ಕೂಡ ಶಿಕ್ಷಣ ಅಥವಾ ಜ್ಞಾನವನ್ನು ಯಾವತ್ತೂ ಪಡೆಯುತ್ತಿರಬೇಕು. ಎಷ್ಟು ಸಾಧ್ಯವೋ ಅಷ್ಟು, ಯಾವಾಗಲೆಲ್ಲಾ ಸಾಧ್ಯವೋ ಆವಾಗಲೆಲ್ಲಾ ಜ್ಞಾನವೃದ್ಧಿಯ ಅವಕಾಶವನ್ನು ನಾವು ಕಳೆದುಕೊಳ್ಳಬಾರದು. ಯಾಕೆಂದರೆ, ಕೆಟ್ಟ ಸಂದರ್ಭದಲ್ಲಿ ನಮಗೆ ಸರಿಯಾದ ದಾರಿ ತೋರಲು ನೆರವಾಗುವ ಒಂದು ಮುಖ್ಯ ಅಂಶ ಶಿಕ್ಷಣ ಅಥವಾ ನಮ್ಮ ಜ್ಞಾನ. ಆದ್ದರಿಂದಲೇ ಜ್ಞಾನ ನಮ್ಮ ನಿಜವಾದ ಸಂಪತ್ತು. ನಮ್ಮ ನಿಜವಾದ ಜೊತೆಗಾರ ಎಂದು ಹೇಳುವುದು. ಜ್ಞಾನವು ಯೌವನ ಮತ್ತು ಸೌಂದರ್ಯವನ್ನೂ ಸೋಲಿಸಬಲ್ಲದು.
  • ನಿಮ್ಮ ಗೌಪ್ಯ ಮತ್ತು ರಹಸ್ಯ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಏಕೆಂದರೆ, ಯಾವಾಗ ನಿಮ್ಮ ಜೊತೆಗೆ ಮತ್ತೊಬ್ಬ ವ್ಯಕ್ತಿಗೆ ದ್ವೇಷ ಹುಟ್ಟುತ್ತದೆಯೋ, ಆತ ಸಿಟ್ಟಾಗುತ್ತಾನೆಯೋ ಅಂದು ನಿಮ್ಮ ಎಲ್ಲಾ ವಿಚಾರಗಳ ಬಗ್ಗೆ ಆತ ಬಾಯಿ ಬಿಡಬಹುದು. ಯಾವುದೇ ಕಾಳಜಿ ಇಲ್ಲದೆ, ಬೇಜವಾಬ್ದಾರಿಯಿಂದ ವರ್ತಿಸಬಹುದು. ಅದರಿಂದ ನಿಮ್ಮ ಗೌರವಕ್ಕೆ ಕುಂದು ಕೊರತೆ ಉಂಟಾಗಬಹುದು.
  • ಸಾಮಾನ್ಯವಾಗಿ ನಾವು ಕಳೆದುಹೋದ ದಿನಗಳ ಬಗ್ಗೆ ನೆನಪು ಮಾಡಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಬದಲಾಗಿ, ಭವಿಷ್ಯದ ಬಗ್ಗೆ ಚಿಂತಿಸುತ್ತಾ ದಿನಕಳೆಯುತ್ತೇವೆ. ಇದೂ ಕೂಡ ಸರಿಯಲ್ಲ. ಕೇವಲ ಕಳೆದು ಹೋದ ದಿನಗಳನ್ನು ನೆನೆಯುವುದು ಅಥವಾ ಭವಿಷ್ಯದ ಬಗ್ಗೆ ಚಿಂತಿಸುವುದು ಎರಡೂ ಅಷ್ಟೊಂದು ಸೂಕ್ತವಲ್ಲ. ಬದಲಾಗಿ, ಇಂದಿನ ದಿನವನ್ನು ಅರ್ಥಪೂರ್ಣವಾಗಿಸಿ ಭವಿಷ್ಯಕ್ಕೆ ಅಡಿಪಾಯ ಗಟ್ಟಿಗೊಳಿಸಬೇಕು.
  • ಒಬ್ಬ ವ್ಯಕ್ತಿಯು ತನ್ನ ಕಾರ್ಯಗಳಿಗೆ ಬದ್ಧನಾಗಿರಬೇಕು. ಅದೃಷ್ಟವನ್ನು ನಂಬಿ ಕೂರುವುದಲ್ಲ. ಯಾರೂ ಕೂಡ ಹುಟ್ಟಿನಿಂದ ಶ್ರೇಷ್ಠರಲ್ಲ.
  • ಪ್ರತಿಯೊಂದು ಗೆಳೆತನದ ಹಿಂದೆಯೂ ಒಂದಲ್ಲಾ ಒಂದು ಸ್ವಾರ್ಥ ಅಡಗಿರುತ್ತದೆ. ಅದು ಒಳ್ಳೆಯದೂ ಆಗಿರಬಹುದು. ಕೆಟ್ಟದ್ದೂ ಆಗಿರಬಹುದು. ಆದರೆ ಇದು ಕಹಿ ಸತ್ಯವೇ ಆಗಿದೆ.
  • ಒಮ್ಮೆ ಒಂದು ಕೆಲಸ ಆರಂಭಿಸಿದ ಮೇಲೆ ಆ ಕೆಲಸವನ್ನು ಸೋಲಿನ ಭಯದಿಂದ ಅರ್ಧಕ್ಕೆ ನಿಲ್ಲಿಸಬೇಡಿ. ಪ್ರಯತ್ನಪಡಿ. ನೀವು ಸೋಲುಂಡರೂ ಅದರಿಂದ ಏನೋ ಕಲಿತು, ಪಡೆದು ಮತ್ತೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪ್ರಯತ್ನವು ನಿಮಗೆ ಒಂದು ದಿನ ದೊಡ್ಡ ಯಶಸ್ಸನ್ನು ಕೊಡಬಲ್ಲದು.
  • ನಿಮ್ಮ ಮಗುವಿಗೆ ಉತ್ತಮ ಜೀವನ ಶಿಸ್ತು ಕಲಿಸಬೇಕು ಎಂದಾದರೆ, ಐದನೇ ವರ್ಷದ ತನಕ ಸಾಧ್ಯವಾದಷ್ಟು ಪ್ರೀತಿ ಕೊಡಿ. ಆ ನಂತರ ಹತ್ತು ವರ್ಷದ ತನಕ ತಪ್ಪುಗಳಿಗೆ ಶಿಕ್ಷಿಸಿ. ಹದಿನಾರು ವರ್ಷದ ಬಳಿಕ ಮಕ್ಕಳನ್ನು ಗೆಳೆಯರಂತೆ ಕಾಣಿರಿ. ಅದರಿಂದ ಅವನು ಅಥವಾ ಅವಳು ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಸರಿ ದಾರಿ ತೋರಲು ನಿಮಗೂ ಸುಲಭವಾಗುತ್ತದೆ.

ಇದನ್ನೂ ಓದಿ: Chanakya Niti: ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಎಲ್ಲರ ಇಷ್ಟದ ನಾಯಕನಾಗುತ್ತಾನೆ; ಚಾಣಕ್ಯನ ವಿವರಣೆ ಇಲ್ಲಿದೆ

Chanakya Niti: ಇಂತಹ ಸಂದರ್ಭಗಳನ್ನು ಎದುರಿಸುವುದಕ್ಕಿಂತ ತಪ್ಪಿಸಿಕೊಳ್ಳುವುದೇ ಒಳ್ಳೆಯದು; ಚಾಣಕ್ಯ ಹೇಳುವ ನೀತಿ ಇಲ್ಲಿದೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada