AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಗವಿಮಠದಲ್ಲಿ ಹಿಂದೂ ದೇವರ ಮುಂದೆ ಧ್ಯಾನಮಾಡಿ ಸ್ವಾಮೀಜಿ ಮಾರ್ಗದರ್ಶನ ಪಡೆಯುವ ಮುಸ್ಲಿಂ ಮಹಿಳೆ

ಕೊಪ್ಪಳ: ಗವಿಮಠದಲ್ಲಿ ಹಿಂದೂ ದೇವರ ಮುಂದೆ ಧ್ಯಾನಮಾಡಿ ಸ್ವಾಮೀಜಿ ಮಾರ್ಗದರ್ಶನ ಪಡೆಯುವ ಮುಸ್ಲಿಂ ಮಹಿಳೆ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Jul 26, 2025 | 12:02 PM

Share

ಮಠಕ್ಕೆ ಬರಲಾರಂಭಿಸಿದ ನಂತರ ತನ್ನ ಇಬ್ಬರು ಮಕ್ಕಳು ಶಾಲೆಗಳಲ್ಲಿ ಚೆನ್ನಾಗಿ ಓದುತ್ತಿದ್ದಾರೆ ಎನ್ನುವ ಹಸೀನಾ ತಮ್ಮ ಪತಿ ಇಲ್ಲವೆಂದು ಹೇಳುತ್ತಾರೆ. ತಮ್ಮ ಕಷ್ಟಗಳನ್ನು ಅವರು ಅಜ್ಜನವರ ಮುಂದೆ ಹೇಳಿಕೊಂಡು ಮಾರ್ಗದರ್ಶನ ಪಡೆಯುತ್ತಾನರಂತೆ. ಹೆಚ್ಚು ಓದಿದವರಲ್ಲವಾದರೂ ಹಸೀನಾ ಎಲ್ಲ ದೇವರುಗಳು ಒಂದೇ, ತಾನು ಎಲ್ಲರನ್ನೂ ಆರಾಧಿಸುತ್ತೇನೆ ಎನ್ನುತ್ತಾರೆ.

ಕೊಪ್ಪಳ, ಜುಲೈ 25: ಜಿಲ್ಲೆಯ ಯಲಬುರ್ಗಾ ತಾಲೂಕು ಕುದುರೆಮೂತಿ ಗ್ರಾಮದಲ್ಲಿರುವ ಸರ್ಕಾರೀ ಪ್ರೌಢ ಶಾಲೆಯಲ್ಲಿ ಬಿಸಿಯೂಟ ಅಡಿಗೆ ಕೆಲಸ ಮಾಡುವ ಹಸೀನಾ (Hasina) ಒಬ್ಬ ಮುಸ್ಲಿಂ ಮಹಿಳೆಯಾದರೂ ಕೊಪ್ಪಳದಲ್ಲಿರುವ ಗವಿಮಠಕ್ಕೆ ನಡೆದುಕೊಳ್ಳುತ್ತಾರೆ. ಮಠಕ್ಕೆ ಬಂದು ಸ್ವಾಮೀಜಿಯವರಿಗೆ ನಮಸ್ಕರಿಸಿ ನಾಗದೇವನ ಮುಂದೆ ಕೂತು ಒಂದು ತಾಸು ಧ್ಯಾನ ಮಾಡುತ್ತಾರೆ. ತಾನು ಮುಸ್ಲಿ ಆದರೇನಂತೆ ಎಲ್ಲ ದೇವರು ಒಂದೇ ಎನ್ನುವ ಹಸೀನಾಗೆ ಮಠದಲ್ಲಿ ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾರೆ. ಮಾನಸಿಕ ವೇದನೆ ಮತ್ತು ದುಗುಡದಿಂದ ಬಳಲುತ್ತಿದ್ದಾಗ ಅಜ್ಜಾರು (ಸ್ವಾಮೀಜಿ) ಮಠದಲ್ಲಿ ಸ್ವಲ್ಪ ಹೊತ್ತು ಧ್ಯಾನ ಮಾಡುವಂತೆ ಹೇಳಿದ್ದರು, ಕಳೆದ 13 ವರ್ಷಗಳಿಂದ ಮಠಕ್ಕೆ ಬರುತ್ತಿದ್ದೇನೆ ಎಂದು ಹಸೀನಾ ಹೇಳುತ್ತಾರೆ.

ಇದನ್ನೂ ಓದಿ:    ಕೊಪ್ಪಳ ಗವಿಮಠದ ರಥೋತ್ಸವ: ಹರಿದು ಬಂದ ಭಕ್ತ ಸಾಗರದ ವಿಡಿಯೋ ನೋಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jul 26, 2025 10:50 AM

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.