ಕೊಪ್ಪಳ ಗವಿಮಠದ ರಥೋತ್ಸವ: ಹರಿದು ಬಂದ ಭಕ್ತ ಸಾಗರದ ವಿಡಿಯೋ ನೋಡಿ

ಕೊಪ್ಪಳ ಗವಿಮಠದ ರಥೋತ್ಸವ: ಹರಿದು ಬಂದ ಭಕ್ತ ಸಾಗರದ ವಿಡಿಯೋ ನೋಡಿ

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ರಮೇಶ್ ಬಿ. ಜವಳಗೇರಾ

Updated on: Jan 15, 2025 | 8:02 PM

ದಕ್ಷಿಣ ಭಾರತದ ಕುಂಭಮೇಳ ಖ್ಯಾತಿ ಪಡೆದಿರುವ ಕೊಪ್ಪಳದ (Koppal) ಗವಿಮಠ ಜಾತ್ರಾಮಹೋತ್ಸವ (Gavi Siddeshwara Mutt) ನಡೆಯುತ್ತಿದ್ದು, ಭಕ್ತರ ದಂಡು ಹರಿಬರುತ್ತಿದೆ. ಇಂದಿನ ರಥೋತ್ಸವದಲ್ಲಿ ಸುಮಾರು ನಾಲ್ಕರಿಂದ ಐದು ಲಕ್ಷ ಭಕ್ತರು ಸಾಕ್ಷಿಯಾಗಿದ್ದಾರೆ. ಇನ್ನು ಅಜ್ಜನ ಜಾತ್ರೆಗೆ ಹರಿದುಬಂದ ಜನಸಾಗರ ಹೇಗಿದೆ ನೋಡಿ.

ಕೊಪ್ಪಳ, (ಜನವರಿ 15): ನಮ್ಮ ದೇಶದಲ್ಲಿ ಅನೇಕ ಯಾತ್ರಾಸ್ಥಳಗಳಿವೆ, ಅವುಗಳಲ್ಲಿ ಪ್ರಯಾಗರಾಜ್ ಕೂಡ ಒಂದು. ಈ ಪ್ರಯಾಗರಾಜ್‌ನಲ್ಲಿ ಕುಂಭಮೇಳ ನಡೆಯುತ್ತದೆ, ಇದು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ಬಾರಿ ಮಹಾಕುಂಭ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಇರುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಸಾಧು-ಸಂತರು ಸಂಗಮದಲ್ಲಿ ಮುಳುಗುತ್ತಾರೆ. ಇದಲ್ಲದೆ, ಕೋಟ್ಯಂತರ ಜನರು ಇಲ್ಲಿಗೆ ಬರುತ್ತಾರೆ. ಅದರಂತೆ ಇತ್ತ ದಕ್ಷಿಣದ ಕುಂಭಮೇಳ ಎಂದೇ ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾಮಹೋತ್ಸವ ಖ್ಯಾತಿ ಪಡೆದುಕೊಂಡಿದ್ದು, ಇಂದಿನ ರಥೋತ್ಸವದಲ್ಲಿ ಲಕ್ಷಾಂತರ ಜನ ಭಾಗಿದ್ದಾರೆ. ವಿವಿಧ ಜಿಲ್ಲೆಯ ವಿವಿಧ ಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಅಲ್ಲದೇ ಪಾದಯಾತ್ರೆ ಮೂಲಕವೇ ಬಂದು ಅಜ್ಜನ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆ ಇಂದು(ಜನವರಿ 15) ಗವಿಮಠದ ರಥೋತ್ಸವದಲ್ಲಿ ಕನಿಷ್ಠ 4 ರಿಂದ 5 ಲಕ್ಷ ಭಕ್ತರು ಭಾಗಿಯಾಗಿದ್ದು. ಭಕ್ತ ಸಾಗರದ ವಿಹಂಗಮ ನೋಟ ಇಲ್ಲಿದೆ ನೋಡಿ.