ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸುಧೀರ್ ಸಂತಾಪ
ಹಿರಿಯ ನಟ ಸರಿಗಮ ವಿಜಿ ಅವರು ಅನಾರೋಗ್ಯದಿಂದ ನಿಧನರಾಗಿದ್ದು, ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದಿದ್ದಾರೆ. ಸರಿಗಮ ವಿಜಿ ಜೊತೆ ಸುಧೀರ್ ಕುಟುಂಬದವರು ಆಪ್ತವಾಗಿದ್ದರು. ನಿರ್ದೇಶಕ ತರುಣ್ ಸುಧೀರ್ ಅವರು ಭಾವುಕವಾಗಿ ಮಾತನಾಡಿದ್ದಾರೆ. ಸರಿಗಮ ವಿಜಿ ಜೊತೆ ತಮಗೆ ಇದ್ದ ಒಡನಾಟವನ್ನು ತರುಣ್ ಸುಧೀರ್ ನೆನಪಿಸಿಕೊಂಡಿದ್ದಾರೆ.
‘ಸರಿಗಮ ವಿಜಿ ಅವರು ನಮಗೆ ತಂದೆ ಸಮಾನರು. ಅವರ ನಿಧನದಿಂದ ಬಹಳ ನೋವಾಗಿದೆ. ನಮ್ಮ ತಂದೆ-ತಾಯಿ ಜೊತೆ ಅವರಿಗೆ ತುಂಬ ನಂಟು ಇತ್ತು. ತಂದೆಯ ಜೊತೆ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಅವರ ಮನೆ ಕೂಡ ಇಲ್ಲೇ ಹತ್ತಿರದಲ್ಲಿ ಇರುವುದು. ಕಾಲು ನೋವು ಇದ್ದರೂ ಕೂಡ ನಮ್ಮ ಮದುವೆಗೆ ಬಂದಿದ್ದರು. ತಂದೆಯ ಸ್ಥಾನದಲ್ಲಿ ನಿಂತು ಆಶೀರ್ವಾದ ಮಾಡಿದ್ದರು’ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos